ಬದಲಾಗುತ್ತಾ ಪವರ್‍ಫುಲ್ ಸಚಿವರ ರಾಜಕೀಯ ಭವಿಷ್ಯ?

0
12
loading...

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಗೆಲುವಿನ ರೂವಾರಿಯಾಗಿರುವ ಡಿ.ಕೆ ಶಿವಕುಮಾರ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಶಿವಕುಮಾರ್ ಗೆ ಈ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ. ಪಟೇಲ್ ಗೆಲುವಿಗೆ ಶ್ರಮಿಸಿ ಡಿಕೆಶಿಯನ್ನು ಹೈಕಮಾಂಡ್ ಹಾಡಿ ಹೊಗಳಿದೆ. ನಿಮ್ಮ ಕೆಲಸ ಹಾಗೂ ಸಮರ್ಪಣಾ ಭಾವ ಅಮಿತ್ ಶಾ ಮತ್ತು ಮೋದಿ ರಾಜಕೀಯ ತಂತ್ರಗಾರಿಕೆ ವಿರುದ್ಧ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿ ಸೋನಿಯಾ ಮತ್ತು ಅಹ್ಮದ್ ಪಟೇಲ್ ಶಿವಕುಮಾರ್ ಬೆನ್ನು ತಟ್ಟಿದ್ದಾರೆ.
ಹೈ ಕಮಾಂಡ್‍ಗೆ ಕೊಟ್ಟ ಮಾತನ್ನು ಡಿ.ಕೆ ಶಿವಕುಮಾರ್ ಉಳಿಸಿಕೊಂಡಿದ್ದಾರೆ. ಪಕ್ಷ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿರುವುದಾಗಿ ಡಿಕೆಶಿ ಹೇಳಿದ್ದಾರೆ. ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದೆ.
ಬಿಹಾರ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಿದ್ದ ಶಿವಕುಮಾರ್ ಅವರನ್ನು ಹೈಕಮಾಂಡ್ ಹೊಗಳಿತ್ತು. ಈಗ ಗುಜರಾತ್ ಗೆಲುವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಕುಮಾರ್‍ಗೆ ರಾಜಕೀಯ ಜೀವನದ ಭವಿಷ್ಯ ಬದಲಾಯಿಸುವ ಸಾಧ್ಯತೆಯಿದೆ. ಈ ಗೆಲುವು ಡಿಕೆಶಿಗೆ ಮತ್ತಷ್ಟು ಬಲ ತುಂಬಿದೆ.
ಗುಜರಾತ್ ಗೆಲುವಿನ ಉಡುಗೊರೆಯಾಗಿ ಶಿವಕುಮಾರ್ ಗೆ ಗೃಹಖಾತೆ ಹೊಣೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

loading...