ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ

0
11
loading...

ಬೆಂಗಳೂರು: ನಾಳೆಯಿಂದ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಇದು ಮಹತ್ವದ ಭೇಟಿಯಾಗಿದೆ. ಕೇವಲ ರಾಜ್ಯದ ಜನತೆಗೆ ಮಾತ್ರ ಅವರ ಭೇಟಿ ಕುತೂಹಲ ಮೂಡಿಸಿರುವುದಲ್ಲದೆ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಇಲ್ಲಿನ ಜನತೆಯ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳುವುದು ಅಮಿತ್ ಶಾ ಅವರಿಗೆ ಇದು ಮುಖ್ಯ ಬೇಟಿಯಾಗಲಿದೆ.
ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ವಿವಿಧ ಶಾಖೆಗಳ ಜೊತೆ ಮೂರು ದಿನ ಸುಮಾರು 25 ಸಭೆಗಳಲ್ಲಿ ಭಾಗವಹಿಸಲಿರುವ ಅಮಿತ್ ಶಾ ತಮ್ಮ ಮೊದಲ ದಿನದ ಭೇಟಿಯಲ್ಲಿ ಜೀವನದ ವಿವಿಧ ಹಂತಗಳ ಪ್ರಮುಖ ವ್ಯಕ್ತಿಗಳೊಂದಿಗೆ ವಿಶೇಷ ಸಂವಾದದ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ನಾಳೆ ಸಂಜೆ ಬೆಂಗಳೂರಿನ ಪ್ರಮುಖ ಸ್ಟಾರ್ ಹೊಟೇಲೊಂದರಲ್ಲಿ ನಡೆಯಲಿರುವ ಸಂವಾದದಲ್ಲಿ ಸುಮಾರು 400 ಬುದ್ಧಿ ಜೀವಿಗಳು ಮತ್ತು ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ವಕೀಲರು, ವೈದ್ಯರು, ಸಾಹಿತಿಗಳು, ಸೇನಾಪಡೆ ನಿವೃತ್ತರು ಮತ್ತು ನಿವೃತ್ತ ಆಡಳಿತಗಾರರಿಗೆ ಸಂವಾದಕ್ಕೆ ಆಹ್ವಾನ ನೀಡಲಾಗಿದೆ.
ಅಮತ್ ಶಾ ಅವರು ಕಳೆದ ಮೂರು ವರ್ಷಗಳಲ್ಲಿ ಪಕ್ಷದ ರ್ಯಾಂಕ್ ಮತ್ತು ದಾಖಲೆಗಳಲ್ಲಿ ರಾಷ್ಟ್ರಾಧ್ಯಕ್ಷರಾಗಿ ತಮ್ಮ ಸಾಮಥ್ರ್ಯವನ್ನು ಮೆರೆದಿದ್ದಾರೆ. ಅವರು ಬುದ್ದಿಜೀವಿಗಳ ಮನಗೆಲ್ಲುತ್ತಾರೆ ಕೂಡ. ಪಕ್ಷದ ಮೂಲ ನೆಲೆಯನ್ನು ಸಾರ್ವಜನಿಕವಾಗಿ ವಿಸ್ತರಿಸುವಲ್ಲಿ ಅವರು ಕೆಲಸ ಮಾಡಿದ್ದು ಸಮಾಜದ ವಿವಿಧ ವರ್ಗಗಳ ಜನರನ್ನು ತಲುಪುವಲ್ಲಿ ಕೂಡ ಅವರು ಶ್ರಮಪಡುತ್ತಾರೆ ಎಂದರು. ನಾಳಿನ ಸಂವಾದ ಕಾರ್ಯಕ್ರಮಕ್ಕೆ ಯಾರ್ಯಾರಿಗೆ ಆಹ್ವಾನ ನೀಡಲಾಗಿದೆ ಎಂದು ಬಹಿರಂಗಪಡಿಸಿಲ್ಲ.

loading...