ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳ ಸ್ವರೂಪ ಬದಲಾಗುತ್ತಿದೆ: ಡಾ. ನಾಯ್ಕರ್

0
5
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಾಗತೀಕರಣದ ಯುಗವು ಮಾನವನ ಜೀವನ ಪದ್ಧತಿಯನ್ನು ಬದಲಾಯಿಸಿದೆ. ವಿದ್ಯಾರ್ಥಿಗಳು ಈ ಜೀವನ ಪದ್ಧತಿ ಅಳವಡಿಸಿಕೊಂಡು ಆಲಸ್ಯ ಹಾಗೂ ರೋಗಿಗಳಾಗುತ್ತಿದ್ದಾರೆ. ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಸ್ವರೂಪ ಬದಲಾಗಿದೆ. ತಂತ್ರಜ್ಞಾನ ಮನುಷ್ಯನ ಅನುಕೂಲಕ್ಕಿದ್ದರೂ ಅದರ ನಕಾರಾತ್ಮಕ ಉಪಯೋಗದಿಂದಾಗಿ ಜೀವನ ಪದ್ಧತಿ ಹಾಳಾಗುತ್ತಿದೆ ಎಂದು ರವೀಂದ್ರನಾಥ್ ಟ್ಯಾಗೋರ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎನ್. ನಾಯ್ಕರ ಕಳವಳ ವ್ಯಕ್ತಪಡಿಸಿದರು.
ನಗರದ ಬೆನನ್-ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 2017-18 ನೇ ಸಾಲಿನ ಬಿ.ಎ. ಹಾಗೂ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣವಚನ, ಎನ್.ಎಸ್.ಎಸ್. ಎನ್.ಸಿ.ಸಿ, ಕ್ರೀಡೆ, ಸಾಂಸ್ಕøತಿಕ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರು ದೈಹಿಕ ಶ್ರಮ ನೀಡುವ ಕ್ರೀಡೆ ಮನಸ್ಸನ್ನು ಹದಗೋಳಿಸುವ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪ್ರಯತ್ನದಲ್ಲಿ ಶ್ರದ್ಧೆ ಇದ್ದರೇ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾದ್ಯ ಎಂದರು.
ಸಮಾರಂಭದಲ್ಲಿ ಪ್ರಜಾಸತ್ತಾತ್ಮಕ ಮಾರ್ಗದ ಮೂಲಕ ವಿದ್ಯಾರ್ಥಿಗಳಿಂದ ಚುನಾಯಿಸಲ್ಪಟ್ಟ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ಪ್ರಮಾಣ ವಚನವನ್ನು ಕೈಗೊಂಡರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರಮೀಳಾ ಸ್ಯಾಮ್ಯೂಯೆಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮೂರು “ಡಿ” ಗಳನ್ನು ಅಳವಡಿಸಿಕೊಳ್ಳಬೇಕು. 1-ಡಿಸಿಪ್ಲೇನ್, 2-ಡೀಟರ್ಮಿನೇಷನ್, 3- ಡೆಡಿಕೇಷನ್ ಇವುಗಳಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ನೈತಿಕ ಒಲವು ವ್ಯಕ್ತಿತ್ವದ ಭೂಷಣಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜೇಶ್ವರಿ ಚನ್ನಮಿಲ್ಲಾ, ಮನೋಹರ ತಳ್ಳಿಮನಿ, ಎನ್.ಸಿ.ಸಿ. ಅಧಿಕಾರಿಗಳಾದ ಹೆಚ್.ಎನ್. ಚುಳಕಿ, ಪ್ರತಿಭಾ ಭಾವಿಕಟ್ಟಿ, ಎಸ್.ಬಿ. ತಾರದಾಳೆ, ಸ್ಯಾಮ್ಯೂಯೆಲ್ ಡ್ಯಾನಿಯೆಲ್, ಸವಿತಾ ಸಸಾಲಟ್ಟಿ, ಎನ್.ಎಸ್.ಎಸ್. ಅಧಿಕಾರಿಗಳಾದ ಮಲ್ಲೇಶ ದೊಡ್ಡಲಕ್ಕಣ್ಣವರ ನಾನಾಸಾಬ ಜಾಧವ, ದೈಹಿಕ ನಿರ್ದೇಶಕರಾದ ವಿಕ್ಟರರಾಜ ಕುದ್ನೂರ, ಮಹೇಶ ಕಟಗೂರ, ದೀಪಾ, ವಿಜಯಲಕ್ಷ್ಮೀ ವಾಲಿಶೆಟ್ಟಿ, ಸೌಭಾಗ್ಯ ಹೊಸಮಠ, ತೃಪ್ತಿ ಪಾಟೀಲ, ಬಸಪ್ಪ ಸಪ್ಪನ್ನವರ ಮತ್ತು ವಿಲ್ಸನ್ ಮಾರ್ಟಿನ್ ಮತ್ತಿತರರು ಉಪಸ್ಥಿತರಿದ್ದರು.
ವಿಕ್ಟರ್‍ರಾಜ್ ಕುದ್ನೂರ ಪ್ರಾರ್ಥಿಸಿದರು. ಪಾರ್ವತಿದೇವಿ ಪಾಟೀಲ ನಿರೂಪಿಸಿದರು. ಎಸ್.ಬಿ. ತಾರದಾಳೆ ಸ್ವಾಗತಿಸಿ, ಪ್ರತಿಭಾ ಭಾವಿಕಟ್ಟಿ ವಂದಿಸಿದರು.

loading...