ಪ್ರಾಮಾಣಿಕ, ದಕ್ಷ ಸೇವೆಗೆ ಸದಾ ಸಿದ್ಧ: ಸತೀಶ್ಚಂದ್ರ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಪ್ರಾಮಾಣಿಕ, ಪಾರದರ್ಶಕ ಮತ್ತು ದಕ್ಷ ಸೇವೆಗೆ ಸದಾ ಬದ್ಧವಾಗಿದೆ ಎಂದು ಕ್ಯಾಂಪೆÇ್ಕ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆದ ಕ್ಯಾಂಪೆÇ್ಕ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬೆಳೆಯ ಸ್ಥಿರತೆ ಹಾಗೂ ಬೆಳೆಗಾರರ ಹಿತರಕ್ಷಣೆ ಎಂಬ ಎರಡು ಪ್ರಧಾನ ಧ್ಯೇಯಗಳು ನಮ್ಮ ಮುಂದಿದ್ದು, ಅವುಗಳ ಸಾಧನೆಗಾಗಿ ಕ್ಯಾಂಪ್ಕೊ ಸಂಘಟಿತವಾಗಿ ಅವಿರತ ಪ್ರಯತ್ನಮಾಡುತ್ತಿದೆ. ರಾಷ್ಟ್ರವ್ಯಾಪ್ತಿಯಾಗಿ ಸಂಚಲನ ಮೂಡಿಸುವ ಏಕತೆರಿಗೆ ಪದ್ದತಿಯ ಜಿ ಎಸ್ ಟಿ ನೂತನ ಕಾಯ್ದೆ ಈಗಾಗಲೇ ಜಾರಿಗೊಂಡಿರುವುದರಿಂದ ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಸ್ಥಾಪನೆ ಸಾಕಾರಗೊಳ್ಳುವ ಮೂಲಕ ಕೃಷಿಕರ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ.
ಅಡಕೆ ಕ್ಯಾನ್ಸರ್‍ಕಾರಕ ಎಂಬ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ನಿಷೇಧವಿದೆ. ಆದರೆ ಅಡಕೆ ಕ್ಯಾನ್ಸರ್‍ಕಾರಕವಲ್ಲ ಎಂಬ ವಾದವನ್ನು ಮಂಡಿಸಲು ಹಲವು ದಾಖಲೆಗಳನ್ನು ಸಿದ್ಧಪಡಿಸಿಕೊಂಡ ಕ್ಯಾಂಪೆÇ್ಕ ಬೆಳೆಗಾರರ ಪರವಾಗಿ ಹೋರಾಟ ನಡೆಸಿದೆ. ಅಡಕೆಗೂ ಗುಣಮಟ್ಟ ಕಾದುಕೊಳ್ಳುವ ಸಾಮರ್ಥ್ಯವಿದೆ ಎಂಬ ವಿಸ್ತ್ರತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜತೆಗೆ ವಿವಿಧ ಸಂಶೋಧನೆಗಳಿಗೆ ಪೆÇ್ರೀತ್ಸಾಹಿಸುವ ಕಾರ್ಯ ಕ್ಯಾಂಪೆÇ್ಕದಿಂದ ನಡೆದಿದೆ. ಪ್ರತಿಯೊಬ್ಬ ರೈತರು ಬಿಲ್ ಪಾವತಿಸುವ ಮೂಲಕ ಅಡಕೆ ಖರೀದಿಸುವ ಸಂಕಲ್ಪವನ್ನು ಕೈಗೊಂಡರೆ ದೇಶದ ಅಭಿವೃದ್ಧಿಗೆ ನೆರವಾಗುವ ಜತೆಗೆ ಪ್ರಾಮಾಣಿಕ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.
ಕ್ಯಾಂಪೆÇ್ಕದೊಂದಿಗೆ ಸಕ್ರೀಯವಾಗಿ ವ್ಯವಹಾರ ನಡೆಸುವ ಸದಸ್ಯರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆದರೆ 1 ಲಕ್ಷ ರೂ, ಕಿಡ್ನಿ ಬದಲಾವಣೆ ಮಾಡಿದರೆ 50 ಸಾವಿರ ರೂ ಆರ್ಥಿಕ ನೆರವು ನೀಡುತ್ತೇವೆ. ಬೆಳೆಗಾರರ ಹಿತರಕ್ಷಣೆಯ ಜತೆಗೆ ಅವರ ಆರ್ಥಿಕ ಸುಧಾರಣೆಗೆ ಸಹಕಾರ ನೀಡುವ ಮೂಲಕ ಕ್ಯಾಂಪೆÇ್ಕ ಬೆಳೆಯುತ್ತಿದೆ ಎಂದರು.
ಬೆಳೆಗಾರರಾದ ಆರ್ ಜಿ ಭಟ್, ಮಧುಕರ ಭಟ್ ಶ್ರೀಪಾದ ಹೆಗಡೆ ಅವರು ಸಭೆಯ ನಂತರ ನಡೆದ ಸಂವಾದದಲ್ಲಿ ಮಾತನಾಡಿ, ಪ್ರತಿ ವರ್ಷ ಕ್ಯಾಂಪೆÇ್ಕದಿಂದ ಕುಮಟಾ ಭಾಗದ ಶೇ 3.5 ರಷ್ಟು ಅಡಕೆ ಖರೀದಿಯಾಗುತ್ತಿದೆ. ಅದರ ಪ್ರಮಾಣವನ್ನು ಜಾಸ್ತಿ ಮಾಡಬೇಕು. ಕೆಂಪು ಚಾಲಿ, ಕೋಕೋ, ತೆಂಗು ಖರೀಧಿಗೆ ಮುಂದಾಗಬೇಕು. ಅಡಕೆ ಬೆಲೆ ಕಡಿಮೆಯಾದ ಸಂದರ್ಭದಲ್ಲಿ ಸಂಸ್ಥೆ ಖರೀದಿಯಿಂದ ಹಿಂದಕ್ಕೆ ಸರಿಯದೇ ನಿಯಮಿತ ಯೋಗ್ಯ ದರದಲ್ಲಿ ಖರೀದಿ ನಡೆಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ರೈತರ ಸಲಹೆಯನ್ನು ಸ್ವೀಕರಿಸಿದ ಕ್ಯಾಂಪೆÇ್ಕ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅವರು, ಮುಂದಿನ ದಿನಗಳಲ್ಲಿ ಅಡಕೆ ಜೊತೆಗೆ ಇತರೆ ಬೆಳೆಗಳ ಖರೀದಿಗೂ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಕುಮಟಾ ಎಪಿಎಂಸಿ ಅಧ್ಯಕ್ಷ ಧೀರು ಶಾನಭಾಗ, ಅಹಮದ್ ಶರೀಫ್, ಗೋವಿಂದ ಭಟ್ ಶಿವಮೊಗ್ಗ, ಮುರುಳಿಧರ ಶಿರಸಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಕಮಲಾಕ್ಷಿ ಎಂ ಲೋಕೇಶ್ವರ ಪ್ರಾರ್ಥಿಸಿದರು. ಕ್ಯಾಂಪ್ಕೊ ನಿರ್ದೇಶಕ ಶಂಭುಲಿಂಗ ಜಿ ಹೆಗಡೆ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಸುರೇಶ ಭಂಡಾರಿ ಪ್ರಾಸ್ತಾಪಿಸಿದರು. ಕ್ಯಾಂಪೆÇ್ಕ ಉಪಾಧ್ಯಕ್ಷ ಕೆ ಶಂಕರ ನಾರಾಯಣ ಭಟ್ ವಂದಿಸಿದರು.

loading...