ಹಾಲುಮತದ ಜನಾಂಗ ಶಿಕ್ಷಣದ ಕೊರತೆಯಿಂದ ಹಿಂದುಳಿದಿದ್ದಾರೆ: ಶ್ರೀಗಳು

0
18
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ: ಪಾರ್ವತಿ ಎದೆಹಾಲಿನಿಂದ ಜನ್ಮತಾಳಿದ ಹಾಲುಮತ ಸಮಾಜದ ಜನರು ಶಿಕ್ಷಣದ ಕೊರತೆಯಿಂದ ಹಿಂದುಳಿದಿದ್ದಾರೆ ಎಂದು ಕಾಗಿಲೆನೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ನುಡಿದರು.
ಇಲ್ಲಿನ ವಾಗೀಶನಗರದ ಶ್ರೀಮಾರುತಿ ದೇವಸ್ಥಾನದಲ್ಲಿ ಶನಿವಾರ ಹಾಲುಮತ ಪುರಾಣ ಪ್ರವಚನ ಮಂಗಲದ ಪ್ರಯುಕ್ತ ತಮಗೆ ಏರ್ಪಡಿಸಲಾಗದ್ದ ತುಲಭಾರ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜನ್ಮ ತಾಳುವುದು ಸಾಮಾನ್ಯ, ಸಮಾಜದ ಬಗ್ಗೆ ಇತಿಹಾಸವನ್ನು ತಿಳಿಯುವುದು ಬಹುಮುಖ್ಯ. ಸಮಾಜಕ್ಕೆ ದುಡಿದ, ಸಾಧನೆಗೈದ ಸಾಧಕರ ಜೀವನ ಚರಿತ್ರೆಯನ್ನು ತಿಳಿಯಬೇಕು. ನಾವು ಅವರಂತೆಯೇ ಸಮಾಜಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕು ಎಂದು ಕಾಗಿನೆಲೆ ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಜಿಗಳು ಹೇಳಿದರು.
ಪ್ರಚಲಿತ ಜಾತಿ ವ್ಯವಸ್ಥೆಯಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಿದ್ದು ಸ್ವಾಮಿಗಳು ಜನರಿಗೆ ಸರಿಯಾದ ತಿಳುವಳಿಕೆ ನೀಡಿ ಸಮಾಜ ಸುಧಾರಣೆಗೆ ಮುಂದಾಗಬೇಕಿದೆ. ಸಮಾಜ ಬಿಟ್ಟು ಹೊರನಡೆದವರು ಹುಲಿಗೆ ಇಟ್ಟ ಮೇವಿನಂತಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಮಾಜದೊಂದಿಗೆ ಕೂಡಿಕೊಂಡು ಹೋಗಬೇಕೆ ಹೊರತು ವಿಮುಖರಾಗಬಾರದು. ಹಕ್ಕ-ಬುಕ್ಕ, ಸಂಗೋಳ್ಳಿ ರಾಯಣ್ಣ, ಕನಕದಾಸ ಮುಂತಾದ ಮಹಾನ್ ವ್ಯಕ್ತಿಗಳು ಹುಟ್ಟಿದ ಸಮಾಜದಲ್ಲಿ ಇಂದು ಐಕ್ಯತೆ ಕಡಿಮೆಯಾಗಿದೆ. ಸಮಾಜದ ಜನರು ಇದರ ಬಗ್ಗೆ ಚಿಂತನೆ ನಡೆಸಿ ಸಮಾಜದ ಸಂಘಟನೆಯನ್ನು ಬಲಪಡಿಸಬೇಕು ಎಂದರು.
ನಗರಸಭಾ ಸದಸ್ಯ ರಾಮಪ್ಪ ಕೋಲಕಾರ ಅಧ್ಯಕ್ಷತೆ ವಹಿಸಿದ್ದರು.
ಬಿಎಂಪಿ ಮಾಜಿ ಉಪಮಹಾಪೌರ ಆರ್.ಶಂಕರ, ಗುರುರಾಜ ತಿಳವಳ್ಳಿ, ಎಸ್.ಆರ್.ಕೆ.ಬಸವರಾಜ, ನಿಂಗಪ್ಪ ಗೌಡ್ರ, ಶಿವಾನಂದ ಸಾಲಗೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಾವೇರಿ ತಾಲೂಕ ಮರೋಳ ಗ್ರಾಮದ ಮುದಕಯ್ಯ ಸ್ವಾಮಿಗಳು ಹಾಲುಮತ ಪುರಾಣ ಪ್ರವಚನ ಮಂಗಲ ಮಾಡಿದರು.

 

loading...