ಆಸ್ಪತ್ರೆಗಳು ಆರೋಗ್ಯ ಕಾಪಾಡುವ ದೇವಾಲಯಗಳು: ಡಾ. ರೋಹಿತ 

0
19
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಆಸ್ಪತ್ರೆಗಳು ಆರೋಗ್ಯ ಕಾಪಾಡುವ ದೇವಾಲಯಗಳು, ರೋಗಗಳನ್ನು ನಿರ್ನಾಮ ಮಾಡಿ ಆರೋಗ್ಯವಂತರನ್ನಾಗಿಸುವ ಈ ಪವಿತ್ರ ಸ್ಥಳದಲ್ಲಿ ರೋಗಿಗಳ ಜೊತೆಗೆ ಬರುವ ಜನರು ಮತ್ತು ರೋಗಿಗಳ ಯೋಗಕ್ಷೇಮ ನೋಡಲು ಬರುವ ಜನರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಹಾನಗಲ್ಲ ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರೋಹಿತ ಎನ್.ಸಿ. ಸಾರ್ವಜನಿಕರಲ್ಲಿ ಮನವಿ ಮಾಡಿದರು.  ಅಗಷ್ಟ 1 ರಿಂದ 15ರ ವರಗೆ ‘ಸ್ವಚ್ಛತಾ ಪಕ್ವಾರ್(ಪಾಕ್ಷಿಕ)’ ಕಾರ್ಯಕ್ರಮವಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.)ಘಟಕವು ಈ ಕುರಿತು ಜಾಗೃತಿ ಮೂಡಿಸುತ್ತಿರುವ ಎನ್.ಎಸ್.ಎಸ್. ಗೆ ಅಭಿನಂದನೆ ಸಲ್ಲಿಸಿದರು.  ಕಾರ್ಯಕ್ರಮ ಆಯೋಜಿಸಿದ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರಕಾಶ ಬಿ. ಹೊಳೇರ ಮಾತನಾಡಿ ಆಸ್ಪತ್ರೆಗಳು ಸಾರ್ವಜನಿಕ ಸ್ಥಳವಾಗಿದ್ದು ಇಲ್ಲಿಯ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಆದರೆ ಸಾರ್ವಜನಿಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಗೋಡೆಗೆ ಉಗುಳುವುದು ತಿಂದ ವಸ್ತುಗಳನ್ನು ಎಲ್ಲಿಂದೆಲ್ಲ ಬಿಸಾಡುವುದರಿಂದ ಆರೋಗ್ಯ ಕಾಪಾಡಬೇಕಾದ ಸ್ಥಳಗಳಲ್ಲಿ ಮಲಿನತೆ ಉಂಟಾಗಿ ಮತ್ತಷ್ಟು ರೋಗಗಳು ಉಲ್ಬಣಿಸುವ ಪರಿಸ್ಥಿತಿ ಇರುವುದಿಂದ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಲಿಸಲು ಇಂತಯ ಪ್ರಯತ್ನವಿದು ಎಂದರು. ಪ್ರಾಂಶುಪಾಲ ಪ್ರೊ.ಎಸ್.ವಿ.ಸೋಮನಾಥ ಮಾತನಾಡಿ ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಿ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವೆಂದರು. ನಂತರ ಎನ್.ಎಸ್.ಎಸ್. ಸ್ವಯಂಸೇವಕರು ಸಂಪೂರ್ಣ ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

loading...