ಶಿಕ್ಷಕರು ಶಿಸ್ತು, ಮೌಲ್ಯಗಳನ್ನು ಕಾಪಾಡಿಕೊಳ್ಳಿ: ಸಿ.ಎಸ್. ನಾಯ್ಕ

0
20
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪ್ರತಿಯೊಬ್ಬ ಶಿಕ್ಷಕರು ಶಿಸ್ತು ಹಾಗೂ ಮೌಲ್ಯಗಳನ್ನು ಕಾಪಾಡಿಟ್ಟುಕೊಂಡು ಅದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸಿ.ಎಸ್. ನಾಯ್ಕ ಹೇಳಿದರು.
ಹಳಿಯಾಳ ತಾಲೂಕಿನ ಎಲ್ಲಾ ಶಿಕ್ಷಕರ ಸಂಘಟನೆಗಳು ಕಾರ್ಮೆಲ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಗಸ್ಟ್ 12 ರಂದು ಏರ್ಪಡಿಸಿದ್ದ ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಸಿ.ಎಸ್. ನಾಯ್ಕ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹ್ಮದ ಮುಲ್ಲಾ ಇವರಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಮಾತನಾಡಿದರು.
ತಮ್ಮ ಕಾರ್ಯಾವಧಿಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಲು ಸಹಕರಿಸಿದ ಸರ್ವರಿಗೆ ಕೃತಜ್ಞತೆ ತಿಳಿಸಿದ ಸಿ.ಎಸ್. ನಾಯ್ಕ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಹಾಗೂ ಅವರಿಗೆ ಸಹಕರಿಸುವಂತೆ ಶಿಕ್ಷಕ ಸಮುದಾಯಕ್ಕೆ ಕೋರಿದರು.
ಕ್ಷೇತ್ರ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ ಅರ್ಕಸಾಲಿ, ಕ್ಷೇತ್ರ ದೈಹಿಕ ಪರಿವೀಕ್ಷಕ ಸಲೀಂ ಜಮಾದಾರ, ವಿವಿಧ ಶಿಕ್ಷಕ ಸಂಘಟನೆಗಳ ಪ್ರಮುಖರಾದ ಸತೀಶ ನಾಯಕ, ಟಿ.ಎಸ್. ಕಾಳೆ, ರಮೇಶ ಪಾಟೀಲ, ಸಲೀಂ ನಾಯಕವಾಡಿ, ವಿ.ಎಸ್. ಬೋರೆಕರ, ದಿನೇಶ ನಾಯ್ಕ, ಪಿ.ಡಿ. ಮಡಿವಾಳ, ವೈ.ಜಿ. ಕುರಿ, ಸುರೇಶ ನಾಯ್ಕ, ಪ್ರಶಾಂತ ನಾಯ್ಕ, ಉದಯ ನಾಯ್ಕ ಮೊದಲಾದವರು ವೇದಿಕೆಯಲ್ಲಿದ್ದರು.

loading...