ಗಾಂಜಾ, ಬ್ರೌನ್ ಸುಗರ ಮಾರಾಟ: ವ್ಯಕ್ತಿ ಬಂಧನ

0
5
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಗಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಒಂದು ಕೆಜಿ 100 ಗ್ರಾಂ ಗಾಂಜಾ, 2.70 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ಶನಿವಾರ ನಡೆದಿದೆ.
ಅಶೋಕ್ ನಗರ ನಿಯಾಜ್ ಶಫಿ ಅಹಮದ್ ನಾಯಕವಾಡಿ (37) ಬಂಧಿತ ವ್ಯಕ್ತಿ. ಸಂಜೆ ಕಚೇರಿ ರಸ್ತೆಯ ಶ್ರೀಹರಿ ಆರ್ಕೇಡ್ ಹತ್ತಿರ ಮಾರುತ್ತಿದ್ದ ಸಮಯದಲ್ಲಿ ದಾಳಿಮಾಡಿ ಆರೋಪಿ ಹತ್ತಿರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಉಪ ಪೆÇಲೀಸ್ ಆಯುಕ್ತರು, ಮತ್ತು ಉಪ ಪೆÇಲೀಸ್ ಆಯುಕ್ತರು ಅಪರಾಧÀ ಇವರ ಮಾರ್ಗದರ್ಶನದಲ್ಲಿ ಸಹಾಯಕ ಪೆÇಲೀಸ್ ಆಯುಕ್ತರು ಖಡೇ ಬಜಾರ್ ಉಪ ವಿಭಾಗದ ಸಿಟಿ ಜಯ ಕುಮಾರ್ ನೇತೃತ್ವದಲ್ಲಿ ಪಿಐ ಖಡೇ ಬಜಾರದ ಯು ಹೆಚ್ ಸಾತೇನಹಳ್ಳಿ, ಪಿಎಸ್‍ಐ ಹಂಚಿನಮನಿ, ಪಿಎಸ್‍ಐ ಚವಾಣ್ ಸೇರಿದಂತೆ ಸಿಬ್ಬಂದಿಗಳಾದ ಜನರಾದ ಶಿವಾನಂದ್, ಹತ್ರವಾಟ್, ಉಜ್ಜನಕೊಫ, ನವ ಕೊಡೆ, ಸುನೀಲ್, ಚಿನ್ನಸ್ವಾಮಿ, ಮಹೇಶ್, ಮತ್ತು ತೋಟಗಿ ರವರು ದಾಳಿಯಲ್ಲಿ ಇದ್ದರು.

loading...