ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ

0
2
loading...

ತಿರುವನಂತಪುರ: ಮಕ್ಕಳ ಜೀವನಕ್ಕೆ ಅಪಾಯಕಾರಿಯಾಗಿರುವ ರಷ್ಯಾ ಮೂಲದ ಬ್ಲೂ ವೇಲ್ ಅಂತರ್ಜಾಲ ಗೇಮ್ ಮೇಲೆ ಕೂಡಲೇ ನಿಷೇಧ ಹೇರಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬ್ಲೂವೇಲ್ ಗೇಮ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿರುವ ಅವರು, ಪ್ರಾಣಕ್ಕೆ ಬೆದರಿಕೆಯೊಡ್ಡುವ ಈ ಆಟವು ನಮ್ಮ ಹೊಸ್ತಿಲಲ್ಲೇ ಇದೆ. ರಾಷ್ಟ್ರದಾದ್ಯಂತ ಅತ್ಯಮೂಲ್ಯವಾದ ಜೀವಗಳ ರಕ್ಷಣೆಗಾಗಿ ಬ್ಲೂವೇಲ್ ಆಟದ ಮೇಲೆ ನಿಷೇಧ ಹೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

loading...