ಹಮೀದ್ ಅನ್ಸಾರಿ ವಿರುದ್ಧ ಶಿವಸೇನೆ ಆಕ್ರೋಶ

0
11
loading...

ಮುಂಬೈ: ದೇಶದಲ್ಲಿ ಮುಸ್ಲಿಮರಿಗೆ ಅಭದ್ರತೆ ಮನೋಭಾವ ಕಾಡುತ್ತಿದೆ ಎಂಬ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿಕೆಗೆ ಶಿವಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹಮೀದ್ ಅನ್ಸಾರಿ ದೇಶವನ್ನು ದೂರುವ ಬದಲು ವಂದೇ ಮಾತರಂ ಹಾಡದ ಅಲ್ಪಸಂಖ್ಯಾತರನ್ನು ಅಪಹಾಸ್ಯ ಮಾಡಲಿ ಅಂತಾ ಶಿವಸೇನೆ ತಾಕೀತು ಮಾಡಿದೆ.
ಇಂದು ದೇಶದಲ್ಲಿ ಮುಸ್ಲಿಮರಿಗೆ ಅಭದ್ರತೆ ಮನೋಭಾವ ಕಾಡುತ್ತಿದೆ ಎಂದು ಹಮೀದ್ ಅನ್ಸಾರಿ ಹೇಳಿದ್ದರು. ಇದಕ್ಕೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ತಿರುಗೇಟು ನೀಡಿದೆ. ಅನ್ಸಾರಿ ಅವರು ಮುಸ್ಲಿಮರಲ್ಲಿನ ಮತಾಂಧ ಆಲೋಚನೆಗಳ ವಿರುದ್ಧ ಮಾತನಾಡಬೇಕಿತ್ತು. ಇಂದು ಮುಸ್ಲಿಂ ಸಮುದಾಯದ ಅನೇಕ ಜನ ವಂದೇ ಮಾತರಂ ಹಾಡದೆ, ಮಾತೃಭೂಮಿಗೆ ಅಪಮಾನ ಮಾಡುತ್ತಿದ್ದಾರೆ. ನಾವು ದೇಶ ಬಿಡಲು ಸಿದ್ಧ ಆದರೆ, ವಂದೇ ಮಾತರಂ ಹಾಡಲ್ಲ ಎಂದು ಮುಸ್ಲಿಂ ಸಮುದಾಯದ ಕೆಲವರು ಹೇಳಿದ್ದಾರೆ. ಇಂತಹ ಮನಸ್ಥಿತಿ ವಿರುದ್ಧ ದಾಳಿ ಮಾಡುತ್ತಿದ್ದರೆ ಹಮೀದ್ ಅನ್ಸಾರಿ ವರ್ಚಸ್ಸು ಹೆಚ್ಚುತ್ತಿತ್ತು ಅಂತಾ ಶಿವಸೇನೆ ಟಾಂಗ್ ನೀಡಿದೆ.

loading...