ಭೂಕುಸಿತ: 8 ಪ್ರಯಾಣಿಕರ ಸಾವು. ಹಲವರಿಗೆ ಗಂಭೀರ ಗಾಯ

0
6
loading...

ಶಿಮ್ಲಾ: ಮೇಘಸ್ಫೋಟದಿಂದ ಭಾರೀ ಮಳೆ ಮತ್ತು ಭೂಕುಸಿತಕ್ಕೆ ಎರಡು ಬಸ್‍ಗಳಲ್ಲಿ ಸಿಲುಕಿದ 8 ಪ್ರಯಾಣಿಕರು ಮೃತಪಟ್ಟು, 22 ಜನರಿಗೆ ತೀವ್ರ ಗಾಯಗೊಂಡಿರುವ ಘಟನೆ ಮಂಡಿ-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳು ಭೂಕುಸಿತದಿಂದ ತೀವ್ರ ಹಾನಿಗೀಡಾಗಿವೆ.ಕಳೆದ ರಾತ್ರಿ ಈ ದುರಂತ ಸಂಭವಿಸಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಹಿಮಾಚಲಪ್ರದೇಶ ಸಾರಿಗೆ ಸಚಿವ ಜಿ.ಎಸ್.ಬಾಲಿ ಆತಂಕ ವ್ಯಕ್ತಪಡಿಸಿದ್ದಾರೆ.

loading...