ಭಯೋತ್ಪಾದಕ ಸಂಘಟನೆಗೆ ಸೇರಿದ 70 ಕಾಶ್ಮೀರಿ ಯುವಕರು

0
5
loading...

ಜಮ್ಮು: ಕಳೆದ 7 ತಿಂಗಳಲ್ಲಿ 70 ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2014 ರಿಂದ ಭಯೋತ್ಪಾದಕ ಸಂಘಟನೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಟಿಐ ಗೆ ಮಾಹಿತಿ ನೀಡಿರುವ ಹಿರಿಯ ಭದ್ರತಾ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಪುಲ್ವಾಮ, ಶೋಪಿಯಾನ್, ಕುಲ್ಗಾಮ್ ಜಿಲ್ಲೆಗಳು ಟೆಕ್ ಸಾವಿ ಭಯೋತ್ಪಾದಕರ ತಾಣವಾಗುತ್ತಿದೆ ಎಂದು ಹೇಳಿದ್ದಾರೆ.
2014 ರಿಂದ ಭಯೋತ್ಪಾದಕ ಸಂಘಟನೆಗೆ ಸೇರುತ್ತಿರುವ ಉಗ್ರರ ಸಂಖ್ಯೆ ಹೆಚ್ಚಾಗುತ್ತಿದ್ದು, 2014 ರಲ್ಲಿ 53 ರಿದ್ದ ಸಂಖ್ಯೆ 2015 ರಲ್ಲಿ 66 ಕ್ಕೇರಿದೆ.2016 ರಲ್ಲಿ 88 ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆ ಸೇರಿದ್ದು, ಕಳೆದ 7 ತಿಂಗಳಲ್ಲಿ 70 ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

loading...