ಉತ್ತಮ ಆಡಳಿತದ ಕೊರತೆ ಇದೆ: ಪ್ರಧಾನಿ ಮೋದಿ

0
8
loading...

ನವದೆಹಲಿ:- ಭಾರತದ ಅಭಿವೃದ್ಧಿಗಾಗಿ ಬೇಕಿರುವ ಸಂಪನ್ಮೂಲಗಳ ಕೊರತೆ ಇಲ್ಲ ಆದರೆ ಒಳ್ಳೆಯ ಆಡಳಿತದಲ್ಲಿ ಕೊರತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಗಳಲ್ಲಿರುವ ಸರ್ಕಾರಗಳ ಆಡಳಿತ ಯಂತ್ರ ದಕ್ಷವಾಗಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ನುಷ್ಠಾನಗೊಳಿಸಿರುವೆಡೆಗಳಲ್ಲಿ ಬದಲಾವಣೆಗಳು ಕಾಣುತ್ತಿವೆ ಎಂದು ಮೋದಿ ಹೇಳಿದ್ದಾರೆ. ಆರ್‍ಎಸ್‍ಎಸ್, ಜನಸಂಘದ ನಾಯಕ ನಾನಾಜಿ ದೇಶ್ ಮುಖ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಗಳಲ್ಲಿ ಬಡತನ ಹೆಚ್ಚಿರುವೆಡೆ ಮನ್ರೇಗಾ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಕೆಲಸ ಹಂಚಿಕೆ ಕಡಿಮೆ ಇದೆ. ಉತ್ತಮ ಆಡಳಿತ ಇರುವ ರಾಜ್ಯಗಳಲ್ಲಿ ಮನ್ರೇಗಾ ಅಡಿಯಲ್ಲಿ ಉದ್ಯೋಗಗಳು ಹೆಚ್ಚಿದ್ದು, ಬಡತನವೂ ಕಡಿಮೆ ಇದೆ ಎಂದು ಮೋದಿ ಹೇಳಿದ್ದು, ಕೇವಲ ಒಳ್ಳೆಯ ಆಡಳಿತದ ಇಚ್ಛೆ ಇದ್ದರೆ ಸಾಲದು, ಅದಕ್ಕೆ ತಕ್ಕಂತೆ ನಿಗದಿತ ಸಮಯದಲ್ಲಿ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

 

loading...