ಭರದಿಂದ ಸಾಗಿದ ಶೌಚಾಲಯಗಳ ನಿರ್ಮಾಣ.

0
7
loading...

ಮೈಬೂಬ ಕುಳಗೇರಿ
ನಾಲತವಾಡ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ವಚ್ಚ ಭಾರತ್‌ ಅಭಿಯಾನ ಮೂಲಕ ಸ್ಥಳಿಯ ಸಂಸ್ಥೆಗಳು, ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನೀಕರಿಗೆ ಅರಿವು ಮೂಡಿಸುವ ಕಾರ್ಯ ಜೋರಾಗಿಯೇ ನೆಡೆದ ಬೆನ್ನಲ್ಲೆ ಸಮೀಪದ ಘಾಳಪೂಜಿ ಗ್ರಾಮವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನು ಮಾಡಿಯೇ ತೀರುವ ಮಹತ್ತರ ಕಾರ್ಯಕ್ಕೆ ರಕ್ಕಸಗಿ ತಾ.ಪಂ ಸದಸ್ಯರೊಬ್ಬರು ಪಣ ತೊಟ್ಟಿದ್ದಾರೆ. ರಕ್ಕಸಗಿ ತಾ.ಪಂ ಸದಸ್ಯರಾದ ಘಾಳಪೂಜಿ ಗ್ರಾಮದ ಸುರೇಶ ಹುಗ್ಗಿ ಎಂಬುವರೇ ಪಣ ತೊಟ್ಟ ಯುವ ಉತ್ಸಾಹಿ ಸದಸ್ಯರು. ಬಿಜ್ಜೂರ ಗ್ರಾ.ಪಂ ವ್ಯಾಪ್ತಿಯ ಸುಮಾರು 2 ನೂರು ಕುಟುಂಬಗಳು ಹೊಂದಿದ ಘಾಳಪೂಜಿ ಗ್ರಾಮವು ಸದ್ಯ ಸಂಪೂರ್ಣ ಬಯಲು ಮುಕ್ತ ಶೌಚ ಗ್ರಾಮಕ್ಕೆ ಅಣಿಯಾಗುತ್ತಿದೆ. ಶಪಥ ಮಾಡಿದ ಸ್ವಗ್ರಾಮದವರೇ ಆದ ತಾ.ಪಂ ಸದಸ್ಯರಾದ ಸುರೇಶ ಹುಗ್ಗಿ ಗ್ರಾಮದ ದಲಿತ ಕೇರಿ ಹಾಗೂ ಗ್ರಾಮದಲ್ಲೂ ಸೇರಿದಂತೆ ಈಗಾಗಲೇ ಶೌಚಾಲಯಗಳ ನಿರ್ಮಾಣ ಭರದಿಂದ ಸಾಗಿದೆ.
ಸದಸ್ಯರ ಸ್ವಇಚ್ಚೆ: ತಾ.ಪಂ ಸದಸ್ಯರಾದ ಸುರೇಶ ಹುಗ್ಗಿ ಯವರೇ ಶೌಚಾಲಯಗಳ ನಿರ್ಮಾಣಕ್ಕೆ ಸದ್ಯ ಬೇಕಾಗುವ ಸಿಮೆಂಟ್‌, ಇಟ್ಟಿಗೆ, ಜಲ್ಲೆ ಉಸುಕು ಒಟ್ಟು ತಗಲುವ ವೆಚ್ಚವನ್ನು ತಾವೇ ಭರಿಸುವದರ ಮೂಲಕ ನಿರ್ಮಾಣಕ್ಕೆ ಕೈಹಾಕಿದ್ದು ಈಗಾಗಲೇ ದಲಿತ ಕೇರಿಯಲ್ಲಿ 25 ಶೌಚಾಲಯಗಳು ಮುಕ್ತಾಯ ಹಂತ ತಲುಪಿವೆ. ಗ್ರಾಮದಲ್ಲಿ ಈಗಾಗಲೇ ಅರ್ಧದಷ್ಟು ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿದ್ದು ಇನ್ನುಳಿದ ಕುಟುಂಬಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಶೀಘ್ರವೇ ಅವುಗಳನ್ನೂ ಸಹ ನಿರ್ಮಿಸದೇ ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಸ್ವತಃ ಖರ್ಚಿನಿಂದ ಎಲ್ಲಾ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಬೇಕಾಗುವ ಸಂಪನ್ಮೂಲಗಳ ಸಹಾಯ ನೀಡುತ್ತೀರುವ ಸುರೇಶ ಹುಗ್ಗಿ ಅವರು ಸರಕಾರ ನೀಡುವ ಪ್ರೋತ್ಸಾಹ ಧನ ಫಲಾನುಭವಿಗಳಿಂದ ಪಡೆಯುವದಾಗಿ ನಿರ್ಧರಿಸಿದ್ದಾರೆ, ಮೊದಲು ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಬೇಕು ನಾನೊಬ್ಬ ಜನಪ್ರತಿನಿಧಿಯಾಗಿ ಈ ಕೆಲಸ ಮಾಡಲೇಬೇಕು ಎನ್ನುವ ಛಲದಿಂದ ಸದ್ಯ ತಾವೇ ತಗಲುವ ವೆಚ್ಚ ಭರಿಸುತ್ತಿದ್ದಾರೆ. ಸಾಥ್‌: ಸಂಪೂರ್ಣ ಬಯಲು ಮುಕ್ತ ಬಹಿರ್ದೆಸೆಯ ಕಾರ್ಯಕ್ಕೆ ಶಾಸಕರದ ಅಪ್ಪಾಜಿ ನಾಡಗೌಡ, ಜಿ.ಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಗ್ರಾಮದ ಗ್ರಾ.ಪಂ ಸದಸ್ಯರಾದ ಬಸವರಾಜ ಸಾಸನೂರ ಹಾಗೂ ಪಿಡಿಓ ಸಂಗಯ್ಯ ಹಿರೇಮಠ ಅವರೂ ಸಹ ಸದಸ್ಯರ ಈ ಕಾರ್ಯಕ್ಕೆ ಬೆನ್ನು ತಟ್ಟಿದ್ದು ಜೊತೆಗೆ ಅಪಾರ ಪ್ರೋತ್ಸಾಹ ಇದ್ದ ಪರಿಣಾಮ ಘಾಳಪೂಜಿ ಗ್ರಾಮವು ಬಯಲು ಶೌಚ ಮುಕ್ತ ಗ್ರಾಮವಾಗುವ ದಿನಗಳು ಸಮೀಪಿಸಿವೆ.

loading...