ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುಂದಾದ ಓಲಾ

0
5
loading...

ನವದೆಹಲಿ:- ಟೆನ್ಸೆಂಟ್ ಹೋಲ್ಡಿಂಗ್ಸ್ ನೇತೃತ್ವದಲ್ಲಿ 1.1 ಶತಕೋಟಿ ಡಾಲರ್ ನಷ್ಟು ಹಣವನ್ನು ಸಂಗ್ರಹಿಸಿದೆ ಮತ್ತು ಇದು ಶೀಘ್ರದಲ್ಲೇ ಇನ್ನೂ 1 ಶತಕೋಟಿ ಡಾಲರ್ ಹಣವನ್ನು ಸಂಗ್ರಹ ಮಾಡಲಿದೆ ಎಂದು ಅಪ್ಲಿಕೇಶನ್-ಆಧಾರಿತ ಸಾರಿಗೆ ಸಂಸ್ಥೆ ಓಲಾ ಹೇಳಿಕೊಂಡಿದೆ.
ಪ್ರಮುಖ ಹೂಡಿಕೆದಾರ ಎನಿಸಿರುವ ಸಾಫ್ಟ್ ಬ್ಯಾಂಕ್ ಮತ್ತು ಅದರ ಇತರ ಅಮೆರಿಕನ್ ಮೂಲದ ಹಣಕಾಸು ಹೂಡಿಕೆದಾರರು ಸಹ ಈ ಬಾರಿ ಹೂಡಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಓಲಾ ತಿಳಿಸಿದೆ.
ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಚೀನಾದ ಒಂದು ಪ್ರಮುಖ ಇಂಟರ್ನೆಟ್ ಸಂಸ್ಥೆಯಾಗಿದ್ದು , ಇದು ಓಲಾ ಭಾರತದಲ್ಲಿ ಇನ್ನಷ್ಟು ಉತ್ತಮ ಸೇವೆ ನೀದಲು ಸಹಾಯ ಒದಗಿಸುತ್ತದೆ ಎನ್ನಲಾಗಿದೆ.
“ಸಾರಿಗೆ ಮತ್ತು ಸಂಪರ್ಕ ಕ್ಷೇತ್ರ್ ಜಾಗತಿಕವಾಗಿ ದೊಡ್ಡ ಬದಲಾವಣೆಯನ್ನು ಕಂಡಿದೆ. ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಭವಿಷ್ಯದ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದ್ದು, ಅದು ದೇಶದಲ್ಲಿ ಸಾರಿಗೆ ವ್ಯವಸ್ಥೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಓಲಾ ಸಹ ಸಂಸ್ಥಾಪಕ ಮತ್ತು ಸಿಇಒ ಭಾವಿಶ್ ಅಗರ್ವಾಲ್ ಹೇಳಿದ್ದಾರೆ.

loading...