ಇಂಗ್ಲೀಷ ನಾಮ ಫಲಕಗಳ ತೆರವುಗೊಳಿಸುವಂತೆ ಪ್ರತಿಭಟನೆ

0
9
loading...

ಗೋಕಾಕ: ಕನ್ನಡ ನಾಮ ಫಲಕ ಕಡ್ಡಾಯ ಹಾಗೂ ಮರಾಠಿ, ಇಂಗ್ಲೀಷ ನಾಮ ಫಲಕಗಳ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯಿಂದ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.  ಬುಧವಾರದಂದು ನಗರದ ಶ್ರೀ ಸಂಗೊಳ್ಳಿ ರಾಯಣ್ಣಾ ವೃತ್ತದಲ್ಲಿ ಕರವೇ ತಾಲೂಕಾಧ್ಯಕ್ಷ ಕಿರಣ ಡಮಾಮಗರ ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಪ್ರತಿಭಟನೆ ನಡೆಸಿ ಇಂಗ್ಲೀಷ ನಾಮಫಲಕಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಗರಸಭೆ ವ್ಯವಸ್ಥಾಪಕ ಎಮ್.ಎಚ್.ಅತ್ತಾರ ಅವರಿಗೆ ಮನವಿ ಸಲ್ಲಿಸಿದರು.  ಈ ಸಂಸದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಕಿರಣ ಡಮಾಮಗರ ಅವರು, ನಗರದ ರವಿವಾರ ಪೇಟದಲ್ಲಿರುವ ಕೆಲ ಬಂಗಾರ ವ್ಯಾಪಾರಸ್ತರ ಅಂಗಡಿಗಳು ಹಾಗೂ ಹೊರವಲಯದ ನಾಕಾ ನಂ. 1 ರಲ್ಲಿ ಬಹುತೇಕ ಹೊಟೇಲ್ ಹಾಗೂ ಇನ್ನೀತರ ಅಂಗಡಿಗಳ ಮೇಲೆ ಇಂಗ್ಲೀಷ ಹಾಗೂ ಮರಾಠಿ ಭಾಷೆಯಲ್ಲಿ ನಾಮಫಲಕಗಳು ರಾರಾಜಿಸುತ್ತಿದ್ದು, ಇವುಗಳನ್ನು ಬರುವ 8 ದಿನಗಳೊಳಗಾಗಿ ನಗರಸಭೆಯವರು ಇಂತಹ ಅಂಗಡಿಗಳ ಮಾಲೀಕರಿಗೆ ನಾಮಫಲಕಗಳ ಮೇಲೆ ಕಡ್ಡಾಯವಾಗಿ ಶೇಕಡಾ 60 ರಷ್ಟು ಕನ್ನಡ ಭಾಷೆ ಇರುವಂತೆ ನೋಟೀಸ್ ಜಾರಿ ಮಾಡಬೇಕು. ಈ ಸಂದರ್ಭದಲ್ಲಿ ಸುಭಾಷ ಕಾಮೇವಾಡಿ, ಅಪ್ಪೋಜಿ ನಾಯಿಕ, ಬಸವರಾಜ ಆಶೀ, ಗೋಪಾಲ ಮೀಶಿ, ರಾಮಣ್ಣಾ ಆಲೂರ, ಮುತ್ತೆಪ್ಪಾ ಬಿಲಕುಂದಿ, ಮಲ್ಲಪ್ಪಾ ಪಾಶ್ಚಾಪೂರ, ಸಿದ್ದು ಗುಡ್ಲಿ, ಕಲ್ಲಯ್ಯಾ ಮಠಪತಿ, ಆನಂದ ಆಶೀ, ಅಮೃತ ವಾಳ್ವೇಕರ, ಸಿದ್ದಲಿಂಗಯ್ಯ ಹಿರೇಮಠ, ಶಿವು ನಾಯಿಕ, ಗಿರೀಶ ಪಾಟೀಲ, ಮನೋಜ ಕುಲಕರ್ಣಿ, ಗೋಪಾಲ ಉಡಿನಾರ, ಸಿದ್ಧಲಿಂಗ ಗುಡ್ಲಿ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...