ಕಾರ್ಯಕರ್ತರೇ ಪಕ್ಷದ ಶಕ್ತಿಕಾರ್ಯಕರ್ತರೇ ಪಕ್ಷದ ಶಕ್ತಿ

0
5
loading...

ಗೋಕಾಕ: ಕಾರ್ಯಕರ್ತರೇ ಪಕ್ಷದ ಶಕ್ತಿ. ಪಕ್ಷ ನಿಮ್ಮದೆ. ನಿಮ್ಮ ಶಕ್ತಿಯಿಂದ ಮಾತ್ರ ಬಲಿಷ್ಟಗೊಳ್ಳುವದು ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಸಂಸದೀಯ ಕ್ಷೇತ್ರದ ಕಾಂಗ್ರೆಸ ವೀಕ್ಷಕ ಪಿ.ವಿ.ಮೋಹನ ಹೇಳಿದರು. ಅವರು, ಬುಧವಾರದಂದು ಕಾಂಗ್ರೆಸ ಕಾರ್ಯಾಲಯದಲ್ಲಿ ‘ಮನೆ ಮನೆಗೆ ಕಾಂಗ್ರೇಸ್’ ಕಾರ್ಯಕ್ರಮದ ಬಗ್ಗೆ ಕಾಂಗ್ರೇಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದ ಕಾಂಗ್ರೆಸ ಸರಕಾರದ ಸಾಧನೆಗಳನ್ನು ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ಮನೆ ಮನೆಗೆ ಕಾಂಗ್ರೆಸ ಕಾರ್ಯಕರ್ತರು ತಿಳಿಸಿ ಹೇಳಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ ಪಕ್ಷಕ್ಕೆ ಮತ ನೀಡುವಂತೆ ಮನವೊಲಿಸಲು ಶ್ರಮಿಸಬೇಕೆಂದು ಕರೆ ನೀಡಿದರು.  ಜಿ.ಪಂ. ಸದಸ್ಯ ಟಿ.ಆರ್. ಕಾಗಲ್ ಅವರು ಮಾತನಾಡಿ ಗೋಕಾಕ ಮತಕ್ಷೇತ್ರ ಕಾಂಗ್ರೆಸ ಪಕ್ಷದ ಭದ್ರಕೋಟೆಯಾಗಿದೆ. ಹಿಂದಿನ ಎಲ್ಲ ಚುನಾವಣೆಗಳಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ ಪಕ್ಷವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತ ಬಂದಿದ್ದಾರೆ. ಈ ಬಾರಿಯೂ ದಾಖಲೆ ಮತಗಳಿಂದ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು. ವೇದಿಕೆ ಮೇಲೆ ಕಾಂಗ್ರೆಸ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ನಜೀರಅಹಮ್ಮದ ಶೇಖ, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಗೋಕಾಕ ಮತಕ್ಷೇತ್ರದ ಚುನಾವಣಾ ವೀಕ್ಷಕ ಶಿವಾನಂದ ಪಾಚಂಗಿ, ಜಿ.ಪಂ. ಸದಸ್ಯ ಮಡ್ಡೆಪ್ಪ ತೋಳಿನವರ ಇದ್ದರು.

loading...