ಶಿಕ್ಷಕರ ಸಂಘದ ಅಧ್ಯಕ್ಷರ ಅವಧಿ ಪೂರ್ಣಗೊಂಡಿಲ್ಲ

0
3
loading...

ಚಿಕ್ಕೋಡಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ತಾಲೂಕಾ ಘಟಕದ ಅಧಿಕೃತ ಅಧ್ಯಕ್ಷ ಎನ್‌.ಎಸ್‌.ಕಾಂಬಳೆ ಇದ್ದು, ಇಲಾಖೆ ನಡೆಸುವ ವಿವಿಧ ಸಭೆ ಸಮಾರಂಭಗಳಿಗೆ ಎನ್‌.ಎಸ್‌.ಕಾಂಬಳೆ ಅವರಿಗೆ ಆಹ್ವಾನ ನೀಡಬೇಕೆಂದು ಆಗ್ರಹಿಸಿ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಎಸ್‌.ಕಾಂಬಳೆ ನೇತೃತ್ವದ ಗುಂಪು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭೇಟಿ ನೀಡಿ ಗುರುವಾರ ಮನವಿ ಸಲ್ಲಿಸಿದರು.ದಿ.11 ರಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳೆಂದು ಒಂದು ಗುಂಪು ಬಿಇಒ ಅವರನ್ನು ಭೇಟಿ ನೀಡಿದೆ. ಆದರೆ ಎನ್‌.ಎಸ್‌.ಕಾಂಬಳೆ ಅಧಿಕೃತ ಅಧ್ಯಕ್ಷನಾಗಿದ್ದು, ಚುನಾವಣೆ ಮುಖಾಂತರ ಅಯ್ಕೆಯಾಗಿ ಅಧಿಕಾರ ಅವಧಿ 5 ವರ್ಷ ಇರುತ್ತದೆ. ಆದರೆ ಕೆಲವೊಂದು ಸಂಘದ ಸದಸ್ಯರು ನೂತನ ಪದಾಧಿಕಾರಿಗಳೆಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿ ಸುಳ್ಳು ಹೇಳುತ್ತಾ ಹೋಗುತ್ತಿದ್ದಾರೆ. ಆದರೆ ಸಂಘದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ, ಆದ್ದರಿಂದ ಅಧಿಕೃತವಾಗಿ ಕಾಂಬಳೆ ಅವರನ್ನು ಸಭೆ, ಸಮಾರಂಭಗಳಿಗೆ ಆಹ್ವಾನ ನೀಡಬೇಕು ಮತ್ತು ಶಿಕ್ಷಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ಸಂಘದ ನಿಯಮದ ಪ್ರಕಾರ ಅಧ್ಯಕ್ಷರಾಗಲಿ ಅಥವಾ ಪದಾಧಿಕಾರಿಗಳು ರಾಜೀನಾಮೆ ನೀಡಿದಾಗ ಮಾತ್ರ ನೂತನ ಸಂಘ ಅಸ್ತಿತ್ವಕ್ಕೆ ಬರುತ್ತದೆ. ಅಂತಹ ಬೆಳವಣಿಗೆ ನಡೆದಿರುವುದಿಲ್ಲ, ಕೆಲವು ಜಿಲ್ಲಾ ಸಂಘದ ಪದಾಧಿಕಾರಿಗಳ ದಬ್ಬಾಳಿಕೆಯಿಂದ ಸಂಘದಲ್ಲಿ ಇಂತಹ ಸಮಸ್ಯೆಗಳು ಉಂಟಾಗುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರಿಂದ ಅಧಿಕೃತ ಠರಾವು ನಕಲು ಮತ್ತು ಬೈಲಾದ ಕಾಫಿ ಹಾಗೂ ಸಂಘದ ಪತ್ರದ ಮೇಲೆ ಬರೆದುಕೊಟ್ಟಿದ್ದರೆ ಅದರ ನಕಲು ಪ್ರತಿ ನೀಡಬೇಕು. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೆಲವು ಸಂಘದ ಹಿರಿಯ ಸದಸ್ಯರು ಹಸ್ತಕ್ಷೇಪ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ನಮಗೆ ನ್ಯಾಯ ಸಿಗದೇ ಹೋದರೆ ನ್ಯಾಯಾಲಯದ ಮೋರೆ ಹೋಗಲಾಗುತ್ತಿದೆ ಎಂದು ಸಂಘದ ತಾಲೂಕಾ ಘಟಕದ ಅಧ್ಯಕ್ಷ ಎನ್‌.ಎಸ್‌.ಕಾಂಬಳೆ ಒತ್ತಾಯಿಸಿದರು.

loading...