ಮದ್ಯ ಮಾರಾಟ: 9 ಜನರ ಬಂಧನ

0
3
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
ಅಂಬಡಗಟ್ಟಿಯ ದಿಲಾವರ ತಹಶೀಲ್ದಾರ, ಬೆಳವಡಿಯ ರವಿ ಹುಣಶಿಕಟ್ಟಿ, ರಾಮಾಪೂರ ಮಲ್ಲಿಕಾರ್ಜುನ ಹರಗೋಲ, ಚಂಪಾಪೂರದ ಸಂದೀಪ ಕೊರವಿ, ಬನ್ನೂರದ ಶಿವಪ್ಪಾ ಪವಾರ, ಈರನಟ್ಟಿಯ ನಿಂಗಪ್ಪ ಚೋಟಿ, ಬಂಬಲವಾಡದ ಭರಮಪ್ಪ ಭಜಂತ್ರಿ, ಸೌಂದಲಗಾದ ಬಾಳು ಪಾಟನಕರ, ಸತೀಶ ಮಧುಕರ ಬಂಧಿತರು. ಬಂಧಿತರಿಂದ 14,098 ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ, ಚಿಕ್ಕೋಡಿ, ಅಂಕಲಗಿ, ಕಿತ್ತೂರ ದೊಡವಾಡ, ಕಟಕೋಳ, ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...