ಎಂ ಕೆ ಹುಬ್ಬಳ್ಳಿ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯ

0
7
loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರುಃ ಸಮೀಪದ ಎಂ.ಕೆ.ಹುಬ್ಬಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಬಾರಿ ಕುತುಹಲ ಕೆರಳಿಸಿದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ತೆರೆ ಬಿದ್ದಿದೆ.
ಕಳೆದ ವರ್ಷ ಪಟ್ಟಣ ಪಂಚಾಯಿತಿಗೆ ನಡೆದ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ 6, ಕಾಂಗ್ರೆಸ್‍ನಿಂದ 4, ಪಕ್ಷೇತರದಿಂದ 4 ಸದಸ್ಯರು ಆಯ್ಕೆ ಆಗಿದ್ದರು. ಅಧ್ಯಕ್ಷ ಸ್ಥಾನ ಅ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕಳೆದ ವರ್ಷ ಆಗಷ್ಟ್ 2 ರಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಆಯ್ಕೆಯಾದ ಮುಗುಟಸಾಬ ಅಲ್ಲಾಭಕ್ಷ ಜಮಾದಾರ ಹಾಗೂ ಉಪಾಧ್ಯಕ್ಷರಾಗಿ ಚನ್ನವ್ವ ಚಂದ್ರಪ್ಪ ಕಡಕೋಳ ಆಯ್ಕೆಯಾಗಿದ್ದರು (ಉಬಯತರು ಪಕ್ಷೇತರ ಸದಸ್ಯರಾಗಿದ್ದರು) ಕಳೆದ ಎರಡು ತಿಂಗಳ ಹಿಂದೆ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

. ಚುನಾವಣಾ ಅಧಿಕಾರಿಯಾಗಿ ಕಿತ್ತೂರು ತಹಶೀಲ್ದಾರ ಪ್ರವೀಣ ಹುಚ್ಚನ್ನವರ, ಚುನಾವಣೆ ವಿಷಯ ನಿರ್ವಾಹಕರು ಮಂಜುನಾಥ ಇಲ್ಲುರ, ಬಸವರಾಜ ಕೊಂಡಿಕೊಪ್ಪ ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಪಪಂ ಮುಖ್ಯಾಕಾರಿ ಸಂತೋಷ ಕುರಬೆಟ್ಟಿ, ಅಭಿಯಂತರ ರವೀಂದ್ರ ಗಡಾದ, ಎಸ್.ಎಸ್.ಪಾಟೀಲ, ಶೆಟ್ಟರ ಇದ್ದರು.

loading...