ವಾರ್ಡನ್ ನಿರ್ಲಕ್ಷ್ಯ: ವಿಷ ಆಹಾರ ಸೇವಿಸಿ ಅಸ್ವಸ್ಥಗೊಂಡ 40 ಮಕ್ಕಳು

0
6
loading...

ಕನ್ನಡಮ್ಮ ಸುದ್ದಿ-ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಕಸ್ತೂರಬಾ ಹೆಣ್ಣುಮಕ್ಕಳ ವಸತಿ ಶಾಲೆಯಲ್ಲಿ ಉಪಹಾರ ಸೇವನೆಯಿಂದ ಸುಮಾರು 40 ಕ್ಕಿಂತ ಹೆಚ್ಚು ಮಕ್ಕಳು ಹೊಟ್ಟೆ ಕಡಿತದಿಂದ ಗ್ರಾಮದ ಸರಕಾರಿ ಸಮುದಾಯ ಆಸ್ಪತ್ರೆಗೆ ಧಾಖಲಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮಕ್ಕಳಿಗೆ ಅಲ್ಲಿನ ವಾರ್ಡನವರು ಹಾಗೂ ಅಡಿಗೆಯವರು ಮಕ್ಕಳಿಗಾಗಿ ಬೆಳಗ್ಗೆ ಅವಲಕ್ಕಿ ಉಪಹಾರ ಮಾಡಿದ್ದು. ಅದನ್ನು ಅಲ್ಲಿನ ವಸತಿ ನಿಲಯದ ಹೆಣ್ಣು ಮಕ್ಕಳು ಸೇವೆ ಮಾಡಿದ್ದರಿಂದ ಒಬ್ಬೊಬ್ಬರಿಗೆ ಹೊಟ್ಟೆ ನೋವು ಪ್ರಾರಂಭಿಸಿತು. ನಂತರ ಸುಮಾರು 40 ಮಕ್ಕಳು ನಿಲಯದಲ್ಲಿ ಬಿದ್ದು ಒದ್ದಾಡುತ್ತಿರುವದನ್ನು ನೋಡಿದ ಉಳಿದ ಮಕ್ಕಳು ಗಾಬರಿಗೊಂಡಿತು. ವಿಷಯವನ್ನು ಗ್ರಾಮದಲ್ಲಿ ಹರಡಿತು ನಂತರ ಗ್ರಾಮಸ್ಥರು ತಮ್ಮ ತಮ್ಮ ವಾಹನಗಳು ತಗೆದುಕೊಂಡು ಅಲ್ಲಿನ ಮಕ್ಕಳನ್ನು ವಾಹನದಲ್ಲಿ ಕುರಿಸಿಕೊಂಡು ತಡವಲಗಾ ಗ್ರಾಮದಲ್ಲಿರುವ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ದಾಖಲು ಮಾಡಿದರು. ಹೀಗೆ ದಾಖಲಾದ ಮಕ್ಕಳಿಗೆ ಅಲ್ಲಿನ ವೈದ್ಯರು ಸಲಾಯನ್ ಹಚ್ಚುವ ಮೂಲಕ ಚಿಕಿತ್ಸೆಯನ್ನು ನೀಡಿದರು. ಆದರೆ 40 ಮಕ್ಕಳಲ್ಲಿ ಸುಮಾರು 19 ಮಕ್ಕಳು ಕಡಿಮೆಗೊಳ್ಳದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‍ಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಉಳಿದ 21 ಮಕ್ಕಳಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಮುಖರಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿ ಆಸ್ಪತ್ರೆಗೆ ದಾಖಲಾದ ಮಕ್ಕಳನ್ನು ಆರೋಗ್ಯದ ಬಗ್ಗೆ ವಿಚಾರಿಸಿದ ನಂತರ ಅವರು ಅಲ್ಲಿನ ವೈದ್ಯರಿಗೆ ಸಲಹೆಯನ್ನು ನೀಡಿ ವ್ಯವಸ್ಥಿತವಾದ ಚಿಕಿತ್ಸೆಯನ್ನುಯನ್ನು ನೀಡಿದರು. ನಂತರ ಉಳಿದ ಮಕ್ಕಳನ್ನು ಅಂಬ್ಯುಲೆನ್ಸ್ ಮೂಲಕ ವಿಜಯಪುರ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ.

ಇದಕ್ಕೆಲ್ಲಿ ಈ ವಸತಿ ನಿಲಯದ ವಾರ್ಡನ್ ಹಾಗೂ ಅಡಿಗೆದಾರರು ಸರಿಯಾಗಿ ಸ್ವಚ್ಚತೆಯನ್ನು ಮಾಡದೇ ಹಾಗೂ ಸರಿಯಾಗಿ ಅಡುಗೆಯನ್ನು ಬೆಯಸದೇ ಇರುವದರಿಂದ ಈ ಅವಲಕ್ಕಿ ವಿಷವಾಗಿದ್ದು ಇದರಿಂದ ಮಕ್ಕಳು ಸೇವನೆಯಿಂದ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಹಾಗೂ ಪಾಲಕರು ಆರೋಪಿಸಿದ್ದಾರೆ.
ತಡವಲಗಾ ಗ್ರಾಮಸ್ಥರ ಸೇವೆ: ಈ ಗ್ರಾಮಸ್ಥರು ಈ ಸುದ್ದಿ ತಿಳಿದ ತಕ್ಷಣವಾಗಿ ತಮ್ಮ-ತಮ್ಮ ಕೆಲಸಗಳನ್ನು ಬಿಟ್ಟು ತಮ್ಮ ವಾಹನವನ್ನು ತಗೆದುಕೊಂಡು ಮಕ್ಕಳಿಗೆ ತೊಂದರೆಯಾಗದ ಹಾಗೆ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಸ್ಥಳಕ್ಕೆ ಇಂಡಿ ತಾಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಭೇಟಿ ನೀಡಿ ಪರೀಶೀಲನೆ ಮಾಡಿ ಮಕ್ಕಳನ್ನು ಚಿಕಿತ್ಸೆ ಪಡೆಯುದನ್ನು ನೋಡಿ ಇದಕ್ಕೆ ಕಾರಣವಾದವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿ ಮಾತನಾಡಿ ಈ ವಸತಿ ನಿಲಯವು ಸರಕಾರದದಿಂದ ನಡೆಯುತ್ತಿದ್ದು. ಮಕ್ಕಳಿಗೆ ಸರಿಯಾಗಿ ನೋಡಿಕೊಳ್ಳುವ ಕೆಲಸ ವಾರ್ಡನ್ ಅವರಾಗಿದ್ದು. ಸರಿಯಾಗಿ ಆಹಾರವನ್ನು ಮೊದಲು ತಿಂದು ಮಕ್ಕಳಿಗೆ ಹಾಕಿದರೆ ಒಳ್ಳೆದಾಗುವುದು ಎಂದು ತಿಳಿಸಿದರು.

loading...