ಗಡ್‍ಚಿರೋಲಿಯಲ್ಲಿ ಮತ್ತೆ ಗುಂಡಿನ ಸದ್ದು… ಪೊಲೀಸರಿಂದ 7 ಮಂದಿ ನಕ್ಸಲ್ ನಾಯಕರ ಬೇಟೆ

0
4
loading...

ಗಡ್‍ಚಿರೋಲಿ: ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 7 ಮಂದಿ ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಜಿಲ್ಲೆಯ ಅಹೇರಿಯಾದ ಕಲ್ಲೇಡ್ ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಕಾರ್ಯಾಚರಣೆ ಮುಂದುವರಿದೆ. ನಕ್ಸಲರು ಡಿ. 2 ರಿಂದ 8ರವರೆಗೆ ಪಿಎಲ್‍ಜಿ ಸಪ್ತಾಹ ಆಯೋಜಿಸಿದ್ದರು. ಇದರಲ್ಲಿ    ದೇಶದ ನಕ್ಸಲ್ ಗುಂಪಿನ ದೊಡ್ಡ-ದೊಡ್ಡ ನಾಯಕರು ಸಹ ಪಾಲ್ಗೊಂಡಿದ್ದರು. ಈ ವೇಳೆ ನಕ್ಸಲ್ ಚಟುವಟಿಕೆಗಳ ಮೇಲೆ ಪೊಲೀಸರು ಸಹ ನಿಗಾವಹಿಸಿದ್ದರು. ಅದರಂತೆ ಇಂದು ಬೆಳ್ಳಂಬೆಳಗ್ಗೆ ಕಲ್ಲೇಡ್ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ನಕ್ಸಲರು ಕಾಣಿಸಿಕೊಂಡಿದ್ದು, ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ನಕ್ಸಲ್ ಗುಂಪಿನ 7 ಮಂದಿ ಪ್ರಮುಖ ನಾಯಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಪೊಲೀಸರು ಘಟನಾ ಸ್ಥಳದಲ್ಲಿ ನಕ್ಸಲರು ಉಪಯೋಗಿಸುತ್ತಿದ್ದ ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆ ಮುಂದುವರಿಸಿದ್ದಾರೆ.

loading...