ಕೆಎಲ್ಇ ಸಂಸ್ಥೆಯ ಕನ್ನಡಿ ಪ್ರೊ. ಗವಿಮಠ: ಡಾ.ಕೋರೆ

0
15
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:6 ಕೆಎಲ್ಇ ಸಂಸ್ಥೆಯ ಕನ್ನಡಿಯಾಗಿ ಜನರಿಗೆ ತಿಳಿಸಿದವರು ಪ್ರಾ. ಬಿ.ಎಸ್.ಗವಿಮಠರು ಎಂದು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು ಬುಧವಾರ ನಗರದ ಲಿಂಗರಾಜ ಕಾಲೇಜಿನ ಸಭಾಂಗಣದಲ್ಲಿ ಪ್ರಾ. ಬಿ.ಎಸ್.ಗವಿಮಠ ಅಭಿನಂದನ ಸಮಾರಂಭದಲ್ಲಿ ಮಾತನಾಡುತ್ತ, ಕೆಎಲ್ಇ ಸಂಸ್ಥೆಯ ಸಪ್ತ ಋಷಿಗಳ ಇತಿಹಾಸವನ್ನು ನಾಡಿನ ಜನರಿಗೆ ಪರಿಚಯಿಸಿದ ಶ್ರೇಯ ಗವಿಮಠರದ್ದಾಗಿದೆ. ಲಿಂಗರಾಜರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಕೆಎಲ್ಇ ಸಂಸ್ಥೆಯ ಇತಿಹಾಸವನ್ನು ಪತ್ರಿಕೆ, ಪುಸ್ತಕದ ಮುಖಾಂತರ ಜನರಿಗೆ ಕೆಎಲ್ಇ ಇತಿಹಾಸವನ್ನು ಪರಿಚಯಿಸಿದ್ದಾರೆ. ಲೇಖನ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದ ನನಗೆ ಅದರ ಋಚಿ ಹಚ್ಚಿದ ಆತ್ಮೀಯ ಗೆಳೆಯ ಗವಿಮಠ ಎಂದರು.
ಮರಾಠಿ ಹಾಗೂ ಕನ್ನಡದ ಸಾಹಿತಿಗಳಿಗೆ ಹಾಗೂ ನನ್ನ ರಾಜಕೀಯ ಕ್ಷೇತ್ರದಲ್ಲಿ ಪತ್ರಿಕೆಯಲ್ಲಿ ತಮ್ಮ ಬರವಣಿಗೆಯ ಮೂಲಕ ಜನರಿಗೆ ನನನ್ನು ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.
ಗವಿಮಠ ಹಾಗೂ ನನ್ನ ಒಡನಾಟ ಬಹಳ ವರ್ಷಗಳಿಂದ ಇದೆ. ಇಂಚಲ್ ಗುರುಗಳ ಆತ್ಮೀಯ ಶಿಷ್ಯ‌ ಗವಿಮಠ ಅವರು, ಸಣ್ಣ ವಯಸಿನಲ್ಲಿ ಕಾಂದಬರಿ, ಸಾಹಿತ್ಯದ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡವರು ಎಂದು ಗವಿಮಠ ಹಾಗೂ ತಮ್ಮ ಹಿಂದಿನಿಂದ‌ ಇರುವ ಒಡನಾಟವನ್ನು ಮೆಲಕುಹಾಕಿದರು.
ಡಾ.ಗುರುದೇವಿ ಹುಲೆಪ್ಪನವರಮಠ ಗವಿಮಠರು ರಚಿಸಿದ ಕೃತಿಯ ಬಗ್ಗೆ ಪರಿಚಯ ನೀಡಿ ಮಾತನಾಡಿ, ಪ್ರಾ. ಬಿ.ಎಸ್.ಗವಿಮಠ ಅವರು ನಾಡುಕಂಡ ಅಪರೂಪದ ವ್ಯಕ್ತಿ. ನಿರಂತರ ಪರಿಶ್ರಮದಿಂದ ಮೇಲೆ ಬಂದವರು ಇವರು. ಸಾಮಾಜಿಕ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ತಮದೆಯಾದ ಛಾಪನ್ನು ಮೂಡಿಸಿದ ಮಾದರಿ ವ್ಯಕ್ತಿತ್ವ ಗವಿಮಠರದ್ದು ಎಂದರು.
ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಹೊಸಮನಿ
ಸಾಹಿತ್ಯ ಕಾರಂಜಿ ಗ್ರಂಥ ಬಿಡುಗಡೆಮಾಡಿ ಮಾತನಾಡುತ್ತ, ಕಳೆದ 50 ವರ್ಷಗಳಲ್ಲಿ ಬೆಳಗಾವಿಯನ್ನು ಹತ್ತಿರದಿಂದ ನೋಡಿದವರು ಗವಿಮಠರು. ಸಾಹಿತ್ಯ ಅವರ ಸಮಾಜದ ಜೀವಿ. ಸಾಹಿತ್ಯ ಬಹುಮಜಲಿನ ಅಕ್ಷರವನ್ನು ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ‌. ಸಾಹಿತ್ಯ‌ ಮತ್ತು ಕಾರಂಜಿಯ ಸಮಾಗಮವನ್ನು ಗವಿಮಠರ ಪುಸ್ತಕದಲ್ಲಿ ಕಾಣುತ್ತೇವೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ಪ್ರಾ. ಬಿ.ಎಸ್.ಗವಿಮಠ, ಡಾ. ವಿ.ಎಸ್.ಮಾಳಿ ಸೇರಿದಂತೆ ಮೊದಲಾದವರು ಹಾಜರಿದ್ದರು.

 

loading...