ಪ್ಯಾಲಸ್ತೈನ್ ಕುರಿತ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾದುದು: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

0
7
loading...

ನವದೆಹಲಿ: ಅಮೆರಿಕದ ಜೆರುಸಲೆಮ್ ಕುರಿತ ನಡೆಗೆ ಭಾರತ ಪ್ರತಿಕ್ರಯಿಸಿದ್ದು ಪ್ಯಾಲೆಸ್ತೈನ್ ಸಂಬಂಧ ನಮ್ಮದು ಸ್ವತಂತ್ರ ಹಾಗೂ ಸ್ಥಿರವಾದ ನಿಲುವು ಎಂದಿದೆ.

ಪ್ಯಾಲೆಸ್ಟೈನ್ ಬಗ್ಗೆ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾಗಿದೆ. ಇದು ನಮ್ಮ ನಿರೀಕ್ಷೆ ಹಾಗೂ ಆಸಕ್ತಿಗೆ ಅನುಗುಣವಾಗಿ ರೂಪುಗೊಂಡಿದೆ ಹೊರತು ಬೇರೆ ದೇಶದವರಿಂದ ನಿರ್ಧಾರಿತವಾಗಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಜೆರುಸಲೆಮ್  ನ್ನು ಇಸ್ರೇಲ್ ರಾಜಧಾನಿಯಾಗಿ ಅಮೆರಿಕ ಘೋಷಿಸುವುದರ ಬಗೆಗೆ ಮಾತನಾಡುತ್ತಾ ಅವರು ಈ ರೀತಿ ಅಭಿಪ್ರಾಯ ಪಟ್ಟರು.

ಶ್ವೇತಭವನದಿಂದ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೆಮ್   ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ್ದರು. ಈ ಪ್ರಕಟಣೆಯ ಅನುಸಾರ, ಅಮೆರಿಕ ತನ್ನ ದೂತಾವಾಸ  ಕಛೇರಿಯನ್ನು ಟೆಲ್ ಅವಿವ್ ನಿಂದ ಪವಿತ್ರ ನಗರ ಜೆರುಸಲೆಮ್  ಗೆ ಬದಲಾಯಿಸುತ್ತಿದೆ, ತನ್ಮೂಲಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲ ರಾಷ್ಟ್ರವಿದಾಗಿದೆ.ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಈ ನಿರ್ಧಾರವನ್ನು  ಸ್ವಾಗತಿಸಿದ್ದು ಇದೊಂದು “ಐತಿಹಾಸಿಕ ದಿನ” ಎಂದಿದ್ದಾರೆ. ಅರಬ್ ರಾಷ್ಟ್ರಗಳು ಮಾತ್ರ ಈ ಪವಿತ್ರ ನಗರವು “ಪ್ಯಾಲೆಸ್ಟೈನ್ ನ ಶಾಶ್ವತ ರಾಜಧಾನಿ” ಆಗಿ ಮುಂದುವರಿಯುತ್ತದೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡವಳಿಕೆ ಅವರಿಗೆ “ನರಕದ ದ್ವಾರಗಳನ್ನು” ತೋರಿಸಲಿದೆ ಎಂದಿವೆ.

loading...