ಮಾತೃಪೂರ್ಣ ಯೋಜನೆಯಿಂದ ಗಗನಕ್ಕೆರಿದ ಮೊಟ್ಟೆ ದರ !

0
4
loading...

ಕೋಳಿ ಫಾರ್ಮಗೆ ಹೆಚ್ಚಿದ ಬೇಡಿಕೆ | 4ರೂ.ಯಿಂದ 6ರೂ.ಗೆ ಏರಿಕೆ
| ಕೆ ಎಮ್. ಪಾಟೀಲ
ಬೆಳಗಾವಿ: ರಾಜ್ಯದಲ್ಲಿ ಮಾತೃಪೂರ್ಣ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ಕೋಳಿ ಮೊಟ್ಟೆದರ ಮಾರುಕಟ್ಟೆಯಲ್ಲಿ 4ರೂ.ಯಿಂದ 6ರೂ.ಗೆ ಏರಿಕೆ ಕಂಡಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿಳ್ಳುತ್ತಿದೆ.
ಹೌದು. ರಾಜ್ಯದಲ್ಲಿ ಪ್ರತಿವರ್ಷ ಮೊಟ್ಟೆ ದರ ಎಷ್ಟೆ ಏರಿಕೆ ಕಂಡರು ಅದು ಕೇವಲ 4ರೂ.ಗೆ ಮಾರಟವಾಗುತ್ತಿತ್ತು. ಆದರೆ, ಮಾತೃಪೂರ್ಣ ಯೋಜನೆ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿರುವ ಪ್ರತಿ ಬಾಣಂತಿ, ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ ವಿತರಿಸಬೇಕು. ಹಾಗಾಗಿ ರಾಜ್ಯ ಸರ್ಕಾರ ನೇರವಾಗಿ ಕೋಳಿ ಫಾರ್ಮಗಳಿಗೆ ತೆರಳಿ 5ರೂ. ನೀಡಿ ಮೊಟ್ಟೆ ಖರೀದಿಸುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿಗಳಾದ ಈರುಳ್ಳಿ, ಬೀನ್ಸ್, ಕ್ಯಾರೆಟ್, ಬದನೆ, ಬೆಂಡೆ, ಟೊಮ್ಯಾಟೊ, ಹಸಿ ಮೆನಸಿನಕಾಯಿ ಸೇರಿದಂತೆ ಇತರ ಕಾಯಿಪಲ್ಲೆಗಳ ಬೆಲೆ ಗಗನಕ್ಕೆ ಏರಿದ ಪರಿಣಾಮ ಗ್ರಾಹಕರು ಮೊಟ್ಟೆ ಖರೀದಿಗೆ ಮುಂದಾದರೆ ಮೊಟ್ಟೆದರವು ಹೆಚ್ಚಿಗೆ ಆಗಿದ್ದರಿಂದ ಗ್ರಾಹಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 14 ಸಿಡಿಪಿಒಗಳ ಅಡಿಯಲ್ಲಿ ಒಟ್ಟು 5200ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳು ಇದ್ದು, ಸುಮಾರು 1.10 ಲಕ್ಷ ಗರ್ಭಿಣಿ, ಬಾಣಂತಿಯರಿದ್ದಾರೆ. ಇವರಲ್ಲಿ 66 ಸಾವಿರ ಮಹಿಳೆಯರು ಉಟ ಮಾಡುತ್ತಾರೆ ಪ್ರತಿ ತಿಂಗಳು ಜಿಲ್ಲೆಯಲ್ಲಿ 16.50 ಲಕ್ಷ ಮೊಟ್ಟೆಗಳು ಖರ್ಚಾಗುತ್ತಿವೆ. ಅಂಗನವಾಡಿ ಶಿಕ್ಷಕಿಯರು ಹಾಗಾಗಿ ಇಲಾಖೆ ಒಂದು ವಾರಕ್ಕಾಗುವಷ್ಟು ಮುಂಚಿತವಾಗಿ ಖರೀದಿಸಿಕೊಂಡು ಇಟ್ಟುಕೊಳ್ಳುವುರಿಂದ ಅಂಗಡಿ ಮುಗ್ಗಟ್ಟುಗಳಿಗೆ ಬೇಕಾಗುವಷ್ಟು 100-200 ಟ್ರೈಗಳನ್ನು ಖರೀಧಿಸಲು ಹೋದರೆ ಮೊಟ್ಟೆಗಳ ಖಾಲಿಯಾಗಿವೆ ಎನ್ನುತ್ತಿದ್ದಾರೆ ಕೋಳಿ ಫಾರ್ಮಗಳಲ್ಲಿ ಮೊಟ್ಟೆ ಇಲ್ಲ ಎಂದು ಅಂಗಡಿ ವ್ಯಾಪಾಸ್ಥರು ಕನ್ನಡಮ್ಮಗೆ ತಿಳಿಸಿದರು.
ಕೋಳಿ ಫಾರ್ಮಗಳಲ್ಲಿ ಮೊಟ್ಟೆಗಳು ಖಾಲಿ: ಅಂಗಡಿ ಮಾಲಕರು ಮೊಟ್ಟೆ ಖರೀಧಿ ಮಾಡಲು ಹೋದರೆ ಕೋಳಿ ಫಾರ್ಮಗಳಲ್ಲಿ ಬೇಡಿಕೆ ಆಧಾರದ ಮೇಲೆ ಮೊಟ್ಟೆಗಳ ದೊರೆಯುತ್ತಿಲ್ಲ ಅವರು ನೀಡಿದ ಅಲ್ಲಿದೊರೆಯುವ ಸೀಮಿತ ಟ್ರೈಗಳನ್ನು ಮಾತ್ರ ತೆಗೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ಮಾಡಿರುವ ಮಾತೃಪೂರ್ಣ ಯೋಜನೆಯಿಂದ ಮೊಟ್ಟೆಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಕೋಳಿ ಫಾರ್ಮ್ ಮಾಲಕರಿಗೆ ಸಂತಸದ ವಿಚಾರವಾಗಿದೆ.
ಬಾಕ್ಸ್
ಮಾತೃಪೂರ್ಣ ಯೋಜನೆಯಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆ ಕಂಡಿದೆ ಹಾಗಾಗಿ ಮೊಟ್ಟೆ ಖರೀದಿಸಲು ಹೋದರೆ ಮೊಟ್ಟೆದರವು ಗಗನಕ್ಕೆರಿದೆ ವಿಧಿ ಇಲ್ಲದೇ ಮೊಟ್ಟೆ ಖರೀದಿ ಮಾಡುತ್ತಿದ್ದೇವೆ.
-ಶಿವನಗೌಡ ಪಾಟೀಲ ಗ್ರಾಹಕ
ಬಾಕ್ಸ್
ಜಿಲ್ಲೆಯಲ್ಲಿ 1.10 ಲಕ್ಷ ಗರ್ಭಿಣಿ ಹಾಗೂ ಬಾಣಂತಿಯರಿದ್ದು, ಊಟಕ್ಕೆ 66 ಸಾವಿರ ಮಹಿಳೆಯರು ಬರುತ್ತಾರೆ ಇವರಿಗೆ ಪ್ರತಿ ತಿಂಗಳು ಆಯಾ ಅಂಗನವಾಡಿ ಕೇಂದ್ರಗಳ ಶಿಕ್ಷಕರು 16,50 ಲಕ್ಷ ಮೊಟ್ಟೆ ಬೇಡಿಕೆ ಇದ್ದುದ್ದರಿಂದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಗಗನಕ್ಕೆರಿದೆ. ಹಾಗಾಗಿ ಈ ಯೋಜನೆಗೆ ನೀಡಿರುವ ಅನುದಾನ ಸಾಲುತ್ತಿಲ್ಲ. ಈ ಕುರಿತು ಮೇಲಾಧಿಕಾರಿಗೆ ತಿಳಿಸಲಾಗಿದೆ.
ಎಂ ಮುನಿರಾಜು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

loading...