ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ “ಕುಮಾರಣ್ಣ ಬಾಂಡ್” ವಿಮಾ ಯೋಜನೆ

0
6
loading...

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವ ಅವರ ಅಭಿಮಾನಿಗಳಿಬ್ಬರು “ಕುಮಾರಣ್ಣ ಬಾಂಡ್”ಎಂಬ ವಿಶೇಷ ವಿಮಾ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಡಿ.16ರಂದು ಹೆಚ್.ಡಿ. ಕುಮಾರಸ್ವಾಮಿ 59ನೇ ವರ್ಷಕ್ಕೆ ಪದರ್ಪಣೆ ಮಾಡುತ್ತಿದ್ದಾರೆ. ಈ ಪ್ರಯುಕ್ತ ಅವರ ಅಭಿಮಾನಿಗಳಾದ ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಸೈಯ್ಯದ್ ಶಾಹಿದ್ ಮತ್ತು ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ “ಕುಮಾರಣ್ಣ ಬಾಂಡ್”ಯೋಜನೆಯನ್ನು ಪರಿಚಯಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕುಗಳಲ್ಲಿ ಇದೇ ಡಿ.16ರಂದು ಜನಿಸುವ ಮಕ್ಕಳಿಗೆ ತಲಾ 5000 ರೂ. ವಿಶೇಷ ಬಾಂಡ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕುಮಾರಸ್ವಾಮಿ ಹುಟ್ಟಹಬ್ಬದ ದಿನವಾದ ಡಿ.16ರಂದು ಜನಿಸಿದ ಮಕ್ಕಳಿಗಷ್ಟೇ ಈ ಬಾಂಡ್ ಲಭ್ಯವಾಗಲಿದೆ. ಪೋಷಕರು ಮಗುವಿನ ಜನ್ಮ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಮಾತ್ರ ಈ ಯೋಜನೆಗೆ ಅರ್ಹರು. ಈ ಬಾಂಡ್ 6 ವರ್ಷಕ್ಕೆ 10 ಸಾವಿರ ರೂ. 12 ವರ್ಷಗಳಿಗೆ 20 ಸಾವಿರ, 18 ವರ್ಷಕ್ಕೆ 40ಸಾವಿರ, 24 ವರ್ಷಕ್ಕೆ 80ಸಾವಿರ ರೂ. ಮೌಲ್ಯ ಹೊಂದಲಿದೆ ಎಂದು ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 99457 67862, 79759 11528 ಗೆ ಸಂಪರ್ಕಿಸಬಹುದು ಎಂದು ಕುಮಾರಣ್ಣ ಬಾಂಡ್ ಯೋಜನೆಯ ಪ್ರಾಯೋಜಕರು ಮನವಿ ಮಾಡಿದ್ದಾರೆ.

loading...