ಕವಿ ಸಿದ್ಧರಾಮ ತಳವಾರ ರಚಿಸಿದ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆ

ಬೈಲೂರಿನ ನಿಷ್ಕಲ ಮಂಟಪದಲ್ಲಿ ತಿಂಗಳ ಜ್ಞಾನ ಕಾರ್ಯಕ್ರಮದ ಅಂಗವಾಗಿ ಯುವ ಕವಿ ಸಿದ್ದರಾಮ ತಳವಾರ ಅವರ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆಗೊಳಿಸುತ್ತಿರುವ ಶ್ರೀಗಳು.
ಬೈಲೂರಿನ ನಿಷ್ಕಲ ಮಂಟಪದಲ್ಲಿ ತಿಂಗಳ ಜ್ಞಾನ ಕಾರ್ಯಕ್ರಮದ ಅಂಗವಾಗಿ ಯುವ ಕವಿ ಸಿದ್ದರಾಮ ತಳವಾರ ಅವರ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆಗೊಳಿಸುತ್ತಿರುವ ಶ್ರೀಗಳು.
loading...

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.

ದೀಪದ ಬೆಳಕಲ್ಲಿ ನಾವು ನಡೆಯುವ ದಾರಿಯನ್ನು ಕಾಣಬೇಕೆ ಹೊರತು ದೀಪ ಹಿಡಿದ ಕೈಗಳನ್ನು ನೋಡಬಾರದು,  ಈ ನಿಟ್ಟಿನಲ್ಲಿ ಅಕ್ಷರಕ್ಕೆ ಜಾತಿಯ ಹಂಗಿಲ್ಲ ಎಂದು ತೋರಿಸಿಕೊಟ್ಟ ತಳ ಸಮುದಾಯದ ಕವಿ ಸಿದ್ಧರಾಮ ತಳವಾರ ಅವರೆ ಕಾರ್ಯಶ್ಲಾಘನೀಯ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಬೈಲೂರಿನ ನಿಷ್ಕಲ ಮಂಟಪದಲ್ಲಿ ತಿಂಗಳ ಜ್ಞಾನ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಯುವ ಕವಿ ಸಿದ್ದರಾಮ ತಳವಾರ ಅವರ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,ಇಂದಿನ ಆಧುನಿಕ ಯುಗಕ್ಕೆ ಮಾರು ಹೋಗಿರುವ ಜನತೆ ಪುಸ್ತಕ ಓದುವ ಹವ್ಯಾಸವನ್ನೆ ಮರೆತ್ತಿದ್ದಾರೆ. ಪುಸ್ತಕದಲ್ಲಿನ ಸಾಹಿತ್ಯ ಜ್ಞಾನ ಬೇರೆ ಎಲ್ಲಿ ಸಿಗಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಎಲ್ಲರು ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿಜ್ಷಾನಿಗಳು ಸದಾ ಬುದ್ದಿಯನ್ನು ಹರವಿಟ್ಟುಕೊಂಡು ಕೆಲಸ ಮಾಡಿದರೆ ಕವಿ ತನ್ನ ಹೃದಯವನ್ನು ತೆರೆದಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುತ್ತಾರೆಅದಕ್ಕೆ ಕವಿಗಳಿಗೆ ಹೃದಯ ವೈಶಾಲ್ಯತೆ ಇರುತ್ತದೆ. ಆದಿ ಕವಿ ಪಂಪನಿಂದ ಹಿಡಿದು ಇಂದಿನ ಯುವ ಕವಿಗಳೂ ಕೂಡ ಹತ್ತು ಹಲವು ರೀತಿಯ ಕಾವ್ಯಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುತ್ತಲೇ ಇದ್ದಾರೆ. ಇಂತಹ ಸಾಹಿತಿಗಳು ಈ ಭಾಗದಲ್ಲಿಮತ್ತಷ್ಟು ಬೆಳೆಯುವಲ್ಲಿ ನಿಷ್ಕಲ ಮಂಟಪ ಹಾಗೂ ಶ್ರೀಗಳು ಸದಾ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆ ಪಡುವ ವಿಷಯ  ಸಿದ್ದರಾಮ ತಳವಾರ ಅವರು ರಚಿಸಿ ಕವನ ಸಂಕಲ ಮಾದರಿಯಾಗಿದೆ ಎಂದರು.

ಪುಸ್ತಕದ ಪರಿಚಯ ಮಾಡಿದ ಸವದತ್ತಿಯ ಎಸ ವಿ ಬೆಳ್ಳುಬ್ಬಿ ಕಾಲೇಜಿನ ಉಪನ್ಯಾಸಕ ಪ್ರೋ.ಕೆ ರಾಮರೆಡ್ಡಿ ಮಾತನಾಡಿ, ಸಿದರಾಮ ಅವರ ಕವಿತೆಗಳು ಹದಕೊಂಡಿದ್ದು ಈ ನಾಡಿನ ಉತ್ತಮ ಕವಿ ಎಂದರು.

ಯುವ ಕವಿ ಸಿದ್ದರಾಮ ತಳವಾರ ಹಾಗೂ ದಾಸೋಹ ಸೇವೆ ನೀಡಿದ ಹಾವೇರಿಯ ಹುರಳೀಕುಪ್ಪಿ ಕುಟುಂಬದವರನ್ನು ಅವರನ್ನು ಸತ್ಕರಿಸಲಾಯಿತು. ಧಾರವಾಡದ ಸಂಗೀತ ಕಲಾವಿದರು ವಚನ ಹಾಗೂ ದಾಸರ ಗೀತೆ ಹಾಡಿ ಮನರಂಜಿಸಿದರು.

ಈರಯ್ಯ ಕರಡಿ ಅಧ್ಯಕ್ಷತೆ ವಹಿಸಿದ್ದರು. ಬೈಲೂರು, ತಿಗಡೊಳ್ಳಿ, ತೇಗೂರ, ದಾಸ್ತಿಕೊಪ್ಪ ಗ್ರಾ,ಸ್ಥರು ಹಾಜರಿದ್ದರು.

loading...