1998ರ ಕೃಷ್ಣಮೃಗ ಬೇಟೆ ಕೇಸ್ನಲ್ಲಿ ಸಲ್ಲು 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಎರಡು ದಿನ ಜೈಲಿನಲ್ಲೂ ಇದ್ದರು. ನಂತರ ಜೋಧ್ಪುರ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಆದರೆ, ಸಲ್ಮಾನ್ ಖಾನ್ ದೇಶದಿಂದ ಹೊರಹೋಗಲು ಕೋರ್ಟ್ನ ಅನುಮತಿ ಪಡೆಯಬೇಕೆಂದು ಜಾಮೀನು ಮಂಜೂರು ವೇಳೆ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಇಂದು ಸಲ್ಮಾನ್ ತಾವು ವಿದೇಶಕ್ಕೆ ತೆರಳಲು ಅನುಮತಿ ಕೋರಿ ಜೋಧ್ಪುರ್ ಕೋರ್ಟ್ಗೆ ಅರ್ಜಿ ಸಲ್ಲಿದ್ದರು.
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಬಾಲಿವುಡ್ ನಟನಿಗೆ ದೇಶದಿಂದ ಹೊರಹೋಗಲು ಸಮ್ಮತಿಸಿದೆ. ಮೇ 25ರಿಂದ ಜುಲೈ 10ರವರೆಗೆ ಕೆನಡಾ, ನೇಪಾಳ ಮತ್ತು ಅಮೆರಿಕಾ ರಾಷ್ಟ್ರಗಳಿಗೆ ಸಲ್ಮಾನ್ ತೆರಳಲಿದ್ದಾರೆ.
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಬಾಲಿವುಡ್ ನಟನಿಗೆ ದೇಶದಿಂದ ಹೊರಹೋಗಲು ಸಮ್ಮತಿಸಿದೆ. ಮೇ 25ರಿಂದ ಜುಲೈ 10ರವರೆಗೆ ಕೆನಡಾ, ನೇಪಾಳ ಮತ್ತು ಅಮೆರಿಕಾ ರಾಷ್ಟ್ರಗಳಿಗೆ ಸಲ್ಮಾನ್ ತೆರಳಲಿದ್ದಾರೆ.
loading...