ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೋಳಿ ಪರ ಬಿರುಸಿನ ಪ್ರಚಾರ

0
31
loading...

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೋಳಿ ಪರ ಬಿರುಸಿನ ಪ್ರಚಾರ

ಕನ್ನಡಮ್ಮ ಸುದ್ದಿ

ಸಂಕೇಶ್ವರ 02:ಯಮಕನಮರಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಗೋಟುರ ಗ್ರಾಮದ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು .
ಮಂಗಳವಾರ ಗೋಟುರ ಗ್ರಾಮದಲ್ಲಿ ಸತೀಶ ಜಾರಕಿಹೊಳಿ ಪರ ತಾಲೂಕು ಪಂಚಾಯತಿ ಸದಸ್ಯರಾದ ನಿಂಗನಗೌಡ ಪಾಟೀಲ,ಮುಖಂಡರಾದ ರವಿಂದ್ರ ಮಾಸೇವಾಡಿ ,ಕಲಗೌಡ ಕಮತೆ ,ಹನುಮಂತ ಶೇಖನವರ ಚಾಲನೆ ನೀಡಿ ಶಾಸಕ ಸತೀಶ ಜಾರಕಿಹೊಳಿ ಅವರು ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅವರ ಅಭಿವೃದ್ಧಿ ಕಾರ್ಯಗಳೆ ನಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಮುಖಂಡರು ವಿಶ್ವಾಸ ವ್ಯಕ್ತ ಪಡಿಸಿದರು ‌.ಈ ಸಂಧರ್ಭದಲ್ಲಿ ಗೋಟುರ ಗ್ರಾಮದ ರವಿಂದ್ರ ಜಾಡರ,ವಿನಯ ಕೋಳಿ,ನಂದಾ ಮನ್ನಿಕೇರಿ ,ಸಚಿನ್ ಮನ್ನಿಕೇರಿ,ದತ್ತಾ ಮನಗುತ್ತಿ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು .

loading...