ದೇವರಿಗೆ ಮೊರೆ ಹೋದ ಬಂಡಾಯ ಶಾಸಕರು

0
7
loading...

ಮೈಸೂರು, 26- ಕೆಲವು ದಿನಗಳ ಹಿಂದೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಂತರ ರೆಡ್ಡಿ ಬಣದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯ ಮಂತ್ರಿ  ಯಡಿಯೂರಪ್ಪನವರ  ವಿರುದ್ಧ  ಬಹಿರಂಗ ಸಮರವನ್ನು ಸಾರಿ ರೆಸಾರ್ಟಿನಲ್ಲಿ ಮೋಜು ಮಾಡಿದ್ದ ರೇಣುಕಾಚಾರ್ಯ ನೇತೃತ್ವದ ಏಳು ಶಾಸಕರು ಇಂದು ಮೈಸೂರಿಗೆ ತೆರಳಿ ಚಾಮುಂಡಿ ದೇವಿಯ ವಿಶೇಷ ಪೂಜೆಯನ್ನು ಮಾಡಿಸಿದ್ದಾರೆಂದು ವರದಿಯಾಗಿದೆ.

            ಮೈಸೂರಿನ ಚಾಮುಂಡಿ ದೇವಿಯ ದೇವಾಲಯದಲ್ಲಿ ಪೂಜೆ ನಡೆಸಿದ ನಂತರ ಇವರು ಸುತ್ತೂರ ಮಠಕ್ಕೆ ತರೆಳಿ ಸುತ್ತೂರು ಸ್ವಾಮಿಗಳೊಂದಿಗೆ ಚರ್ಚೆಯನ್ನು ನಡೆಸಿದರೆಂದು ಹೇಳಲಾಗಿದೆ.

            ಮೈಸೂರಿನಲ್ಲಿ ವರದಿಗಾರರು ಇವರನ್ನು ಸುತ್ತು ಹಾಕಿ  ವಿವಿಧ ಪ್ರಶ್ನೆಗಳನ್ನು ಕೇಳಿದಾಗ ಇವರು ನಾವಯ ಸಹಜವಾಗಿ ದೇವಿಯ ಪೂಜೆ ಮಾಡಿಸಲು ಬಂದಿದ್ದೇವೆ. ನಮ್ಮ ಮೈಸೂರು ಬೆಟ್ಟಿಗೆ ಯಾವುದೇ ರೀತಿಯ ರಾಜಕೀಯ ಮಹತ್ವ ಇರುವುದಿಲ್ಲ. ಸಹಜವಾಗಿ ನಾವು ಮೈಸೂರಿಗೆ ಬಂದಿರುವುದರಿಂದ ಸುತ್ತೂರು ಮಠಕ್ಕೆ ಹೋಗಿ ಸುತ್ತೂರು ಸ್ವಾಮಿಗಳನ್ನು  ಚರ್ಚೆ ಮಾಡಿದ್ದೇವೆ. ಇದು ರಾಜಕೀಯ ಉದ್ದೇಶದ ಭೆಟ್ಟಿ ಅಗಿರುವದಿಲ್ಲ ಎಂದು ಹೇಳಿದ್ದಾರೆ.            ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಅವರ ಕುರ್ಚಿಯಿಂ ದ ಕೆಳಗೆ ಇಳಿಸಬೇಕು ಎಂದು ಇವರು ಬಲವಾದ ಪಟ್ಟನ್ನು ಹಿಡಿದಿದ್ದರು. ಆದರೆ ರೆಡ್ಡಿ ದೊರಡಗಳು ಸಂಧಾನಕ್ಕೆ ಒಪ್ಪಿಕೊಂಡಿದ್ದರಿಂದ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಕೆಳಗೆ ಇಳಿಸಲು ಇವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ತಮ್ಮ ಪ್ರಯತ್ನಕ್ಕೆ ಯಾವುದೇ ರೀತಿಯ ಫಲ ದೊರೆಯದ್ದರಿಂದ ಇವರು ಇದೀಗ ದೇವರ ಮೊರೆ ಹೋಗಿರಬಹುದು  ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೆ ಆ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಬಣದ ವಿರುದ್ಧ ಕಟುವಾದ ಶಬ್ದಗಳಲ್ಲಿ ಮಾತಿನದಾಳಿ ನಡೆಸಿದ್ದು ಇವರು ಈಗ ಅದೇ ಮುಖ್ಯ ಮಂತ್ರಿಗಳ ಜೊತೆಗೆ  ಹೊಂದಾಣಿಕೆ ಮಾಡಿಕೊಳ್ಳುವದು ಮುಜುಗರದ ಸಂಗತಿ ಆಗಿದೆ ಎಂದು ಹೇಳಲಾಗಿದೆ.  ಅದಕ್ಕಾಗಿಯೇ ಇದುವರೆಗೆ ತಾವು  ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿರುವುದರಿಂದ  ಈಗ ಅವರು  ದೇವರ ಮತ್ತು ಸ್ವಾಮಿಗಳ ಮೊರೆಯನ್ನು ಹೋಗಿರಬಹುದು. ಎಂಬ ಊಹಾಪೂಹಗಳು ರಾಜಕೀಯ ವಲಯದಲ್ಲಿ ಈಗ ವ್ಯಾಪಕವಾಗಿ ಕೇಳಿ ಬರತೊಡಗಿರುವುದು ಕಂಡು ಬರುವ  ಸಂಗತಿಯಾಗಿದೆ.

loading...

LEAVE A REPLY

Please enter your comment!
Please enter your name here