ಗಣಿಗಾರಿಕೆಯ ಕುರಿತು ಗಹನ ಚರ್ಚೆ

0
5
loading...

ಬೆಂಗಳೂರು,26- ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಶಿಫಾರಸ್ಸು ಮಾಡುವಂತೆ ಕೇಂದ್ರ ಸರಕಾರ ರಾಜ್ಯಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಗ್ರಹ ಕಛೇರಿ ಕೃಷ್ಣಾದಲ್ಲಿ ಇಂದು ಮಹತ್ವದ ಸಭೆ ನಡೆದಿದೆ.
ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐಗೆ ವಹಿಸುವ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ರಂಗನಾಥ ಮತ್ತು ಕಾನೂನು ಸಚಿವ ಸುರೇಶ ಕುಮಾರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯ ಮಂತ್ರಿಗಳು ಗಹವಾದ ಚರ್ಚೆಯನ್ನು ನಡೆಸಿದ್ದಾರೆ.
ಆಂಧ್ರ ಹಾಗೂ ಕರ್ನಾಟಕದಲ್ಲಿ ತೀವ್ರ ಕೋಲಾಹಲ ಎಬ್ಬಿಸಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಂಧ್ರ ಪ್ರದೇಶ ಸರಕಾರ ಈಗಾಗಲೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅಲ್ಲದೆ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದೆ. ಅದೇ ರೀತಿ ಅಕ್ರಮ ಗಣಿಗಾರಿಕೆಯನ್ನು ನಮ್ಮ ರಾಜ್ಯದಲ್ಲಿ ಸ್ಥಗಿತಗೊಳಿಸಿ ಪ್ರಕರನವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಒತ್ತಡ ರಾಜ್ಯದಲ್ಲಿ ಹೆಚ್ಚಾಗತೊಡಗಿದೆ. ಅಲ್ಲದೆ ಕೇಂದ್ರ ಗಣಿ ಸಚಿವರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಸಿಬಿಐಗೆ ಪ್ರಕರಣವನ್ನು ತನಿಖೆಗೆ ವಹಿಸಲು ಶಿಫಾರಸ್ಸು ಮಾಡಬೇಕೆಂದು ಕೋರಿದ್ದಾರೆ. ಹೀಗಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ತಮ್ಮ ಗ್ರಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಈ ಸಭೆ ತೀವ್ರ ಮಹತ್ವವನ್ನು ಪಡೆದುಕೊಂಡಿದೆ.
ಅಕ್ರಮ ಗಣಿಗಾರಿಕೆ ಸಿ.ಬಿ.ಐ ತನಿಖೆಗೆ ವಹಿಸುವ ವಿಷಯ ಭಾಜಪಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತವರು ಯಡಿಯೂರಪ್ಪ ಸಚುವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅಷ್ಟೇ ಅಲ್ಲ ಕೆಲ ದಿನಗಳ ಹಿಂದೆ ಭಿನ್ನಮತ ಚಟುವಟಿಕೆ ನಡೆಸಿ ಮುಖ್ಯ ಮಂತ್ರಿಯ ವಿರುದ್ಧ ಸಮರ ಸಾರಿ ಮುಖ್ಯ ಮಂತ್ರಿಗಳ ಅಧಿಕಾರವನ್ನು ಮೊಟಕು ಗೊಳಿಸಲು ಸಮನ್ವಯ ಸಮೀತಿಯ ರಚನೆಗೆ ಕಾರಣವಾಗಿದ್ದರು.
ಮುಖ್ಯ ಮಂತ್ರಿ ಯಡಿಯೂರಪ್ಪ ಈ ಸಚಿವರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಭಾಜಪಕ್ಕೆ ನಷ್ಟ ಆಗುವದು ಸತ್ಯ ಸಂಗತಿ ಆಗಿದೆ.
ಅಲ್ಲದೆ ಮುಂಬರುವ ಬಿಬಿಎಂಪಿ ಚುನಾವಣೆ ವಿಧಾನ ಪರಿಷತ್ ಚುನಾವಣೆ ಪಂಚಾಯತಿ ಸಂಸ್ಥಗಳು ಚುನಾವಣೆಗಳ ಮೇಲೆ ವಿವಿಧ ರೀತಿಯ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದು ನಡೆದ ಸಭೆಯಲ್ಲಿ ಈ ಎಲ್ಲ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಯಿತೆಂದು ಹೇಳಲಾಗಿದೆ.

loading...

LEAVE A REPLY

Please enter your comment!
Please enter your name here