ಬೆಂಗಳೂರು ನಗರ ಸುಂದರವಾಗಿದೆ – ಮಮ್ತಾ

0
8
loading...

NRP_7257ಬೆಂಗಳೂರು, 8- ಕರ್ನಾಟಕದ ಎಲ್ಲ ರೈಲು ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವದೆಂದು ಕೇಂದ್ರ ರೈಲು ಸಚುವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಶಿವಮೊಗ್ಗಾ ಇಂಟರ್ ಸಿಟಿ ಸೇರಿದಂತೆ ವಿವಿಧ ಮೂರು ರೈಲುಗಳಿಗೆ ಸಚಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

    ಬಜೆಟಿನಲ್ಲಿ ಪ್ರಕಟಿಸಿರು ವಂತೆ ಎಲ್ಲ ರೈಲು ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು ಈ ನಿಟ್ಟಿನಲ್ಲಿ ಕರ್ನಾಟಕದ ಜನತೆ ಕೇಂದ್ರ ಸರಕಾರದ ಮೇಲೆ  ವಿಶ್ವಾಸ ಇರಿಸಬೇಕು ಎಂದರು.

    ಯಶವಂತಪುರ- ಮೈಸೂರು ಎಕ್ಸ್ಪ್ರೆಸ್ ಯಶವಂತಪುರ- ಸೊಲ್ಲಾಪೂರ ಗೋಲಗುಂಬರ  ಎಕ್ಸ್ಪ್ರೆಸ್ ರೈಲು ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಿದ್ದು ರಾಜ್ಯದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಅವರು ಹೇಳಿದರು.

    ಕರ್ನಾಟಕ ಹವಾ ನಿಯಂತ್ರಿತ ರಾಜ್ಯವಾಗಿದ್ದು ಅದರಲ್ಲಿಯೃ ಬೆಂಗಳೂರು ಸುಂದರ ಸುಖಿ ನಗರವಾಗಿದೆ. ಎಂದ ಅವರು ಬೆಂಗಳೂರು ಮತ್ತು ಬೈಯ್ಯಪ್ಪನ ಹಳ್ಳಿ ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ಮಟ್ಟಕ್ಕೆ ಏರಿಸುವ ಭರವಸೆಯನ್ನು ನೀಡಿದರು.

    ಈ ಸಂಬಂಧ ಈಗಾಗಲೇ ಟೆಂಡರ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವದೆಂದರು. ತಾವು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಜೊತೆಗೆ ಇಂದು ಮಾತುಕತೆ ನಡೆಸಿದ್ದು ರಾಜ್ಯದ ಯೋಜನೆಗಳನ್ನು ತ್ವತಿತ ಗತಿಯಲ್ಲಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇನೆ ಎಂದರು.

    ಮಂಗಳೂರು ಭಾಗದ ಜನರ ಪ್ರಮುಖ ಬೇಡಿಕೆಯಾದ ಕಾರವಾರ – ಮುಂಬೈ ರೈಲನ್ನು  ಮಂಗಳೂರು ವರೆಗೂ ವಿಸ್ತರಿಸುವ ಯೋಜನೆಗೆ ತಕ್ಷಣದಿಂದಲೇ ಕ್ರಮ ತೆಗೆದುಕೊಳ್ಲುವದಾಗಿ ಅವರು ಹೇಳಿದರು.              ಬೆಂಗಳೂರು- ಹುಬ್ಬಳ್ಳಿ  ವಿಶೇಷ ಮೈಸೂರು – ತಿರುಪತಿ ವಿಶೇಷ ಚಾಮರಾಜ ನಗರ- ಪುದುಚೇರಿ ವಿಶೇಷ ರೈಲು ಹಾಗೂ ಬೆಂಗಳೂರು – ಮಂಗಳೂರು ಹಗಲು ರೈಲು ಯೋಜನೆಗಳು ಈಗಾಗಲೇ ಆರಂಭಗೊಂಡಿವೆ ಇದಲ್ಲದೆ ಬೀದರ ಚಾಮರಾಜ ನಗರ  ಗುಲ್ಬರ್ಗಾ ಮತ್ತು ವಾಡಿ ಗಳಲ್ಲಿ ರೈಲು ನಿಲ್ದಾನ ನವೀಕರಿಸಲಾಗುತ್ತಿದೆ ಎಂದರು.

ವಿವಿಧ ನಗರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ವಿಶೇಷ ರಜೆ ರೈಲುಗಳನ್ನು ಓಡಿಸಲಾಗುವದು ಅದರಲ್ಲಿಯೂ ದೇಶದ 287 ರಜೆ ಕಾಲದ ರೈಲುಗಳನ್ನು  ಕೂಡಿಸುವುದಕ್ಕೆ ಯೋಜನೆ ಸಿದ್ದವಾಗಿದೆ ಎಂದು ಹೇಳಿದ ಅವರು  ಅನೇಕ ವಿಶೇಷ ರೈಲುಗಳು ಈಗಾಗಲೆ ಕಾರ್ಯಾರಂಭ ಮಾಡಿದೆ ಎಂದರು.

ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಕೇಂದ್ರ ರೈಲು ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಇ. ಅಹಮ್ಮದ ಸಂಸದರಾದ ಪಿ.ಸಿ. ಮೋಹನ್, ಬಿ.ವಾಯ್. ರಾಘವೇಂದ್ರ ಸಚಿವರಾದ  ಈಶ್ವರಪ್ಪ ಮಮ್ತಾಜ ಅಲೀಖಾನ್ ಶಾಸಕ, ದಿನೇಶ ಗುಂಡೂರಾವ,  ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here