ಗಣಿ ದೊರೆಗಳ ಅಕ್ರಮ ಪತ್ತೆ

0
6
loading...

ಬೆಂಗಳೂರು, 8- ಸಚಿವರಾದ ರೆಡ್ಡಿ ಸಹೋದರರು ಮಾಲೀಕತ್ವದ ಗಣಿ ಕಂಪನಿಗಳಿಂದ  ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಕೇಂದ್ರ ತನಿಖಾ ತಂಡ  ಪತ್ತೆ ಹಚ್ಚಿದ್ದು ಇದೀಗ ರಾಜ್ಯ ಸರಕಾರದ ಮೇಲೆ  ತೀವ್ರ ಒತ್ತಡ ಉಂಟಾಗಿದೆ.

    ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಸಿಬಿಐ ತನಿಖೆ ಅಗತ್ಯವಿಲ್ಲ. ಹಾಗೂ ರೆಡ್ಡಿ ಸಹೋದರರನ್ನು ಸಚಿವ ಸಂಪುಟದಿಂದ  ಕೈ ಬಿಡುವ  ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಕೇಂದ್ರ ತನಿಖಾ ತಂಡ ಸರಿಯಾದ ಉತ್ತರವನ್ನೇ ನೀಡಿದ್ದು ಈಗ ಯಡಿಯೂರಪ್ಪ ಅವರ ಮೇಲೆ ಒತ್ತಡ  ಹೆಚ್ಚಾಗುವಂತೆ ಆಗಿದೆ.

    ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಸಾಬೀತು ಪಡಿಸುವ ಮೂಲಕ ರಾಜ್ಯ ಸರಕಾರ ದಿಕ್ಕು ತೋಚದೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಲಿ ಎಂಬುದು ಕೂಡಾ ಕೇಂದ್ರ ತನಿಖಾ ತಂಡದ  ಉದ್ದೇಶವಾಗಿದೆ ಎಂದು ಹೇಳಲಾಗಿದ್ದು, ಇನ್ನು ರೆಡ್ಡಿ ಸಹೋದರರ ಅಕ್ರಮಗಳನ್ನು  ಮುಚ್ಚಿ ಹಾಕಲು  ಅವಕಾಶವೇ ಇಲ್ಲ ಎಂಬ ವಾತಾವರಣ  ಈಗ ಉಂಟಾಗಿದೆ.

ರೆಡ್ಡಿ ಸಹೋದರರ ತಂತ್ರ:

    ಬಳ್ಳಾರಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವದನ್ನು ಕೇಂದ್ರ ತನಿಖಾ ತಂಡ ದೃಢ ಪಡಿಸುತ್ತಲೇ ಬಳ್ಳಾರಿಯ ಗಣಿ ದೊರೆಗಳು ಜಾಗನೂರು  ವಿಮಾನ ನಿಲ್ದಾಣ ಸರ್ವೇ ಕಾರ್ಯ ಆರಂಭಿಸುವ ಮೂಲಕ ವಿಷಯಾಂತರಕ್ಕೆ ಯತ್ನಿಸುತ್ತಿದ್ದಾರೆ.

    ಕಳೆದ ಎರಡು ದಿನಗಳಿಂದ ಕೇಂದ್ರ  ತನಿಖಾ ತಂಡ ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದು ಅಕ್ರಮ ಗಣಿಗಾರಿಕೆಯ ತನಿಖೆಯನ್ನು  ನಡೆಸುತ್ತಿದೆ

    ನಿನ್ನೆ ಹೊಸಪೇಟೆ ತಾಲೂಕಿನ ರೆಡ್ಡಿ ಸಹೋದರರ ಮಾಲೀಕತ್ವದ ಬೇನಾಮಿ ಹೆಸರಿನಲ್ಲಿರುವ ಎರಡು  ಗಣಿಗಳು  ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೃಢಪಟ್ಟಿರುವುದರಿಂದ ಈ ಪೈಕಿ ಒಂದು ಗಣಿಯ ಗುತ್ತಿಗೆಯ ಪರವಾಣಿಗೆಯನ್ನು ಹಿಂದೆ ಪಡೆಯಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.

    ಈ ಬೆಳವಣಿಗೆಯಿಂದ ಎಚ್ಚೆತ್ತು ಕೊಂಡಿರುವ ಗಣಿ ದನಿಗಳು  ಇನ್ನೂ ಹಲವು ಅಕ್ರಮಗಳು ಬಹಿರಂಗವಾಗುವ ಸಾಧ್ಯತೆಗಳು ಇರುವುದರಿಂದ ಜನರ ಗಮನ ಬೇರೆ ಕಡೆಗೆ ಸೆಳೆಯಲು ಇದೀಗ ಬಳ್ಳಾರಿಯ ಜಾಗನೂರು ಬಳಿ ಇರುವ ಸಿರಿವಾರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನೂತನ ವಿಮಾನ ನಿಲ್ದಾಣದ ಜಮೀನು  ಸರ್ವೇ ಕಾರ್ಯ ಆರಂಭಿಸಿದ್ದಾರೆ.

    ಇಂದು ಕರ್ನಾಟಕ ಕೈಗಾರಿಕಾ ಪ್ರವೇಶಾಭಿವೃದ್ದಿ ಮಂಡಳಿಯಿಂದ ಸರ್ವೇ ಕಾರ್ಯ  ಆರಂಭ ಗೊಂಡಿದ್ದು ಅದಕ್ಕೆ ಪೂರ್ವ ಬಾವಿಯಾಗಿ ಕಾಂಗ್ರೆಸ್ ಧುರೀಣ ಮಾಜಿ ಸಚಿವ ದಿವಾಕರ ಬಾಬು ಸೇರಿದಂತೆ ಹಲವು ರೈತ ಧುರೀಣರನ್ನು ಬಂಧಿಸಲಾಗಿದೆ.

    ಅಲ್ಲದೆ ಸರ್ವೇ ಕಾರ್ಯ ನಡೆಯಲಿರುವ ಸಿರಿವಾರ ಭಾಗದ ಸುತ್ತ ಮುತ್ತು ಬಿಗಿ ಪೋಲಿಸ ಬಂದೋಬಸ್ತ ಮಾಡಲಾಗಿದೆ.

    ರೈತ ನಾಯಕನನ್ನು ಬಂಧಿಸಿ ವಿಮಾನ ನಿಲ್ದಾಣ ಸರ್ವೇ ಕಾರ್ಯ ಆರಂಭಿಸಿರುವುದರ ಉದ್ದೇಶವೇ ಗಣಿ ಅಕ್ರಮ ವಿಷಯವನ್ನು ಮುಚ್ಚಿ ಹಾಕಲು ಹಾಗೂ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ದಾಗಿದೆ ಎಂದು ಹೇಳಲಾಗುತ್ತಿದೆ.

    ವಿಮಾನ ನಿಲ್ದಾಣಕ್ಕೆ ಫಲವತ್ತಾದ ಭೂ ಭಾಗದ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ವಶಕ್ಕೆ ತೆಗೆದು ಕೊಳ್ಳುವ ಯತ್ನ ವಿಫಲಗೊಳಿಸ ಬೇಕೆಂದು          ಆ ಭಾಗದ ರೈತರು ಈಗಾಗಲೇ ಸರಕಾರದ ಕ್ರಮಗಳನ್ನು  ವೀರೀಧಿಸಿ ಪ್ರತಿಭಟಿಸುತ್ತಿದ್ದಾರೆ.

    ರೈತರು ದಂಗೆಯೆದ್ದು ಗಲಾಟೆಯಾದರೆ ಗಣಿ ಅಕ್ರಮದ ವಿಷಯ ಮೂಲೆ ಗುಂಪಾಗುತ್ತದೆ ಎಂಬ ಉದ್ದೇಶ ವಿಮಾನ ನಿಲ್ದಾಣ ಸರ್ವೇ ಹುಂದೆ ಇದೆ ಎಂದು ಹೇಳಲಾಗಿದೆ.

    ಒಟ್ಟಾರೆ ಕೇಂದ್ರ ತನಿಖಾ ತಂಡ ನಡೆಸುತ್ತಿರುವ ಗಣಿ ತನಿಖೆ ರೆಡ್ಡಿ ಸಹೋದರರಿಗೆ ನುಂಗಲಾರದ ತುತ್ತಾಗಿದ್ದು ಈ ಬೆಳವಣಿಗೆಯಿಂದ ಅವರು ನಿಜವಾಗಿಯೂ ಬೆಚ್ಚಿ ಬಿದ್ದಿದ್ದಾರೆ.

    ನಿನ್ನೆ ಹೊಸಪೇಟೆ ಪ್ರದೇಶದಲ್ಲಿ ಆರ್ಪಿ ಮೈನ್ಸ್ ಮತ್ತು ಆರ್. ಬಿ. ಎಸ್ ಎಸ್ ಎನ್. ಕಂಪನಿಗಳು ನೇಮ ಉಲ್ಲಂಘಿಸಿ ಕಾನೂನು  ಬಾಹೀರವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ಕೇಂದ್ರ ತನಿಖಾ ತಂಡ ಪತ್ತೆ ಹಚ್ಚಿ  ಈಗಾಗಲೇ ಅದರ ವಿವರಗಳನ್ನು  ಕೇಂದ್ರ ಸರಕಾರಕ್ಕೆ ಕಳಿಸಿದ್ದಾರೆ.

          ಅಲ್ಲದೆ ಬಳ್ಳಾರಿ ಜಿಲೆಯಲ್ಲಿ ಇನ್ನೂ 20 ಕ್ಕೂ ಹೆಚ್ಚು  ಗಣಿಗಳು ಅಕ್ರಮವಾಗಿ ಚಟುವಟಿಕೆ ನಡೆಸಿರುವ ಬಗ್ಗೆ ಕೇಂದ್ರ ತಂಡ ತನ್ನ ತನಿಖೆಯನ್ನು ಮುಂದುವರೆಸಿದೆ.

loading...

LEAVE A REPLY

Please enter your comment!
Please enter your name here