ಮುಗುಳು ನಗೆ ಇರಲಿ ಮುಖದ ತುಂಬ

0
14
loading...

ನಗೆ ವಿಶ್ವವ್ಯಾಪಕ.ಅದು ಸ್ವರ್ಗ,ಮರ್ತ್ಯ,ಪಾತಾಳಲೋಕಗಳಿಗೂ ಹರಡಿಕೊಂಡಿದೆ,ನಗು ಮಾನವನ ಸಂತೋಷದ ಲಕ್ಷಣ.ನಗುನಗುತಾ ನಲಿದರೆ ಭಾಳು ಸಾಕಾರವಾಗುವುದು.ಮಾನವ ತನ್ನ ಜೀವನದಲ್ಲಿ ತಾನೂ ನಗುತ್ತಾ ಇತರರನ್ನು ನಗಿಸುತ್ತ ಬಾಳಿದರೆ ಅವನ ಜೀವನದಲ್ಲಿ ಎಂತಹ ಕಷ್ಟದ ಘಳಿಗೆಯೂ ಕೂಡ ದು:ಖ ತುಮುಲಗಳನ್ನು ಮರೆ ಮಾಡಬಲ್ಲದು.ಅಂದರೆ ಬದುಕಿನಲ್ಲಿ ಬರುವ ದು:ಖವನ್ನು ನುಂಗಿಕೊಂಡು ಸಂತಸದಿಂದ ಬದುಕಬೇಕು.

ಸಹಜವಾಗಿ ಯಾವುದೋ ಒಂದು ಕೆಲಸಕ್ಕೂ ನಗು ಸಹಜ ಸಾಧನ.ಗಟ್ಟಿ ಮೋರೆ ಹಾಕಿಕೊಂಡು ಯಾರನ್ನಾದರೂ ಮಾತನಾಡಿಸಿದರೆ ಶಿ ಏನಪ್ಪಾ ಈ ಮನುಷ್ಯ ಎಷ್ಟೊಂದು ಒರಟಾಗಿದ್ದಾನೆಷಿಎಂದು ಮಾತನಾಡಿಕೊಳ್ಳುವರು ಅದೇ ನಗು ಮೊಗದಿಂದ ಮಾತನಾಡಿ ಆ ಮನುಷ್ಯನ ಹತ್ತಿರ ಎಲ್ಲರೂ ಸಂಕೋಚವಿಲ್ಲದೇ ತಮ್ಮ ಕಷ್ಟ ಸುಖ ಹಂಚಿಕೊಳ್ಳುವರು.

ಒಂದು ಊರಿನಲ್ಲಿ ಒಬ್ಬ ಧನಕ ವ್ಯಾಪಾರಿ ಇದ್ದ.ಅವನು ಶ್ರೀಮಂತನೇನೋ ನಜ.ಆದರೆ ಪರಸ್ಪರರ ಒಡನಾಡುವಿಕೆಯಲ್ಲಿ ದರ್ಪ,ಕಟು ಭಾವಗಳಿಂದ ವರ್ತಿಸುತ್ತಿದ್ದ. ಅದೇ ಉಆರಿನಲ್ಲಿ ಒಬ್ಬ ಬಡವನದ್ದ.ಇದ್ದುದರಲ್ಲಿ ತಿಂದುಂಡು 4 ಜನರೊಡನೆ ನಗುನಗುತ್ತ ಬದುಕು ಸಾಗಿಸುತ್ತಿದ್ದ.ಒಂದು ದಿನ ಶ್ರೀಮಂತನಗೆ ಜ್ವರ ಬಂದು ಹಾಸಿಗೆ ಹಿಡಿದ.ಅವನ ಬಳಿಗೆ ಜನರು ವಿಚಾರಿಸಲು ಬರಲಿಲ್ಲ.ಆಗ ಇಷ್ಟೊಂದು ಶ್ರೀಮಂತನಾದ ನನ್ನ ಬಳಿಗೆ ನನ್ನ ಅನಾರೋಗ್ಯ ವಿಚಾರಿಸಲು ಯಾರೂ ಬರುತ್ತಿಲ್ಲವಲ್ಲ.ಏನು ಮಾಡಬೇಕು ಎಂದು ತೋಚಲಲ್ಲ.ಒಂದು ದಿನ ಆ ಬಡವನನ್ನು ತನ್ನ ಮನೆಗೆ ಕರೆಯಿಸಿದ.ಆಗ ಜನರು ಈ ಬಡವನನನ್ನು ಶ್ರೀಮಂತ ಯಾವ ಕಾರಣಕ್ಕಾಗಿ ಮನೆಗೆ ರೆಯಿಸಿರಬಹುದು ಎಂದು ನೋಡಲು ಶ್ರೀಮಂತನ ಮನೆಯ ಹತ್ತಿರ ಬಂದು ಎಲ್ಲೆಂದರಲ್ಲಿ ನಂತು ನೋಡತೊಡಗಿದರು.ಆಗ ಆ ಜನರ ಕಂಡ ಶ್ರೀಮಂತ ನಾನು ನನ್ನನ್ನು ನನ್ನ ಮನೆಗೆ ಕರೆಸಿದ್ದಕ್ಕೆ ಇಷ್ಟೊಂದು ಜನ ಸೇರಿದ್ದಾರಲ್ಲ ಯಾಕೆ.? ಎಂದು ಆ ಬಡವನನ್ನು ಪ್ರಶ್ನಿಸಿದ.ಆಗ ಆ ಬಡವ ನೀವು ಯಾವತ್ತೂ ನನ್ನನ್ನು ಮಾತನಾಡಿಸಿದವರಲ್ಲ ಈ ಬಡವನ ಹತ್ತಿರ ಸಾಹುಕಾರನ ಕೆಲಸವಾದರೂ ಏನು.? ಎಂಬ ಕುತೂಹಲಕ್ಕೆ ಬಂದಿರಬಹುದು ಸಾಹುಕಾರ್ರೆ ಎಂದ.ಅಂದರೆ ನನು ಇಷ್ಟೊಂದು ಜನರಿಗೆ ಬೇಕಾದವನೋ.? ಎಂದ ಸಾಹುಕಾರ. ಇಲ್ಲ ಸಾಹುಕಾರರೇ ನಾನೊಬ್ಬ ಬಡವ ದುಡಿದು ತಿನ್ನದೇ ಗತಿಯಿಲ್ಲ.ಆದರೆ ಎಲ್ಲರೊಡನೆಯೂ ನಗುನಗುತ್ತ ಅವರ ಕಷ್ಟ ಸುಖ ಹಂಚಿಕೊಂಡು ಬದುಕುತ್ತೇನೆ ಅಷ್ಟೇ. ಅದಕ್ಕೆ ಅವರು ಇವನನ್ನು ಸಾಹುಕಾರ ಯಾಕೆ ಕರೆಸಿರಬಹುದು ಎಂದುಕೊಂಡು ಬಂದಿದ್ದಾರೆ ಬೇರೇನೂ ಇಲ್ಲ. ಎನ್ನಲೂ ತಾನು ಅನಾರೋಗ್ಯ ಪೀಡಿತನಾದರೂ ಹತ್ತಿರಕ್ಕೆ ಸುಳಿಯದ ಜನ ಇವನನ್ನು ನಾನು ಕರೆಸಿದರೆ ನನ್ನ ಮನೆಗೆ ಕರೆಸಿದರೆ ಬರಲು ಕಾರಣ ಇವನ ನಡವಳಿಕೆ.ಹಾಗೂ ಆತ ಸದಾ ನಗುನಗುತ್ತ ಎಲ್ಲರೊಡನೆ ಬದುಕುತ್ತಿರುವುದು ಎಂಬುದನ್ನು ಅರಿತು ಅಂದಿನಂದ ತಾನೂ ಕೂಡ ಅವನಂತೆ ನಗುನಗುತ್ತ ಎಲ್ಲರೊಡನೆ ಬೆರೆತು ಅವರ ಕಷ್ಟ ಸುಖ ಕೇಳಿ ತನ್ನಂದಾದ ಸಹಾಯ ಸಹಕಾರ ನಡುತ್ತ ಬದುಕತೊಡಗಿದ,ಜನ ಕೂಡ ಅವನನ್ನು ಉತ್ತಮ ಸಾಹುಕಾರ ಎಂದು ಕಾಣತೊಡಗಿದರು.

ಮಾನವ ತಾನು ಬಡವನಿರಲಿ.ಶ್ರೀಮಂತನಿರಲಿ ಸದಾ ಹಸನ್ಮುಖಿಯಾಗಿರಬೇಕು.ಅಂದಾಗ ಜೀವನ ಸುಗಮವಾಗಿ ಸಾಗುವುದು.ಆತ್ಮೀಯತೆ ಬೆಳೆಯುವುದು.ಆತ್ಮೀಯತೆ ಎಂದರೆ ಪ್ರತ್ಯೇಕತೆಯ ಅಂತ್ಯ ಅದು ಶಾಶ್ವತವಾಗ ಬೇಕಾದರೆ ಬದುಕಿನಲ್ಲಿ ನಗುವುದನ್ನು ನಗುತ್ತಾ ಬದುಕುವುದನ್ನು ರೂಡಿಸಿಕೊಳ್ಳಬೇಕು.

ಚಲನಚಿತ್ರ.ನಾಟಕ,ಹರಡೆಯಂಥ ದೃಶ್ಯ ಮಾದಯಮಗಳಲ್ಲಿ ಕೂಡ ನಗುವ ದೃಶ್ಯ ಬಂದಾಗ ಪಡುವ ಖುಷಿ ಉಳಿದ ದೃಶ್ಯಗಳಲ್ಲಿ ಅಷ್ಟೊಂದು ಪರಿಣಾಮ ಬೀರದು.ಅದಕ್ಕಾಗಿಯೇ ಚಾರ್ಲಿಚಾಪ್ಲಿನ್,ಲಾರೆನ್ ಮತ್ತು ಹಾರ್ಡಿ. ನರಸಿಂಹರಾಜು.ಎನ್,ಎಸ್,ರಾವ್, ಮೊದಲಾದ ಕಲಾವಿದರು ಅಭಿನಯಿಸಿದ ಚಲನಚಿತ್ರ ದೃಶ್ಯಗಳು ಇಂದಿಗೂ ಎಂತಹವರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ.ಇದು ಭಾಷೆಯನ್ನು ಕೂಡ ಮೀರಿದ್ದು ಎಂಬುದಕ್ಕೆ ಸಾಕ್ಷಿ ಕೂಡ.

ರಾಜ ಮಹಾರಾಜರ ಕಾಲದಲ್ಲೂ ಕೂಡ ಹಾಸ್ಯಕ್ಕೆಂದೇ ತಮ್ಮ ಆಸ್ಥಾನದಲ್ಲಿ ವಿದೂಷಿಕರಿಗೆ ಸ್ಥಾನ ಮಾನ ನೀಡುವ ಮೂಲಕ ರಾಜ ಮಹಾರಾಜರೂ ಕೂಡ ವಿರಾಮ ಕಾಲದಲ್ಲಿ ಹಾಸ್ಯವನ್ನು ಬಯಸುತ್ತಿದ್ದರೆಂಬುದಕ್ಕೆ ಸಾಕ್ಷಿ.

ನಮ್ಮ ನವ್ಯ ಕವಿಗಳುಕೂಡ ಹಾಸಯಕ್ಕೆ ಒತ್ತು ನಡಿ ಅನೇಕ ಹನಿ ಗವನಗಳಲ್ಲಿ ಹಾಸ್ಯ ಉಕ್ಕಿಸುವ ಸಾಲುಗಳನ್ನು ಬರೆಯುತ್ತಿರುವುದಕ್ಕೆ ಉದಾಹರಣೆ ಕೂಡ.ಷೀನನು ನಕ್ಕು ನನ್ನ ನಗಿಸು ಜುಮ್ಮೆನುತಿದೆ ನನ್ನ ಮನಸುಷಿ ಎಂಬ ಭಾವಗೀತೆ ಕೂಡ ನಗುವಿನ ಮಹತ್ವ ಸಾರಿದೆ.

ನಗೆಗೆ ಹಲವು ವಿಧ.ಕುಹಕ ನಗೆ.ಮುಗುಳು ನಗೆ,ಅಟ್ಟಹಾಸದ ನಗು,.ಏನೇ ಆಗ;ಲಿ ಇವು ಆಯಾ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುತ್ತಿವೆ.ಆದರೆ ನಗುವಿಗಾಗಿ ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ಸಂಘಟನೆ ಮಾಡುವ ಮಟ್ಟಿಗೆ ನಮ್ಮ ಯಾಂತ್ರಕ ಬದುಕು ದುಸ್ತರವಾಗಿದೆ ನಗಲೂ ಬಿಡುವು ಮಾಡಿ ಕೊಳ್ಳಬೇಕಾದ ಅನಿವಾರ್ಯತೆಯ ಒತ್ತಡದಲ್ಲಿ ನಾವಿದ್ದೇವೆ. ಹರಟೆ ಮಲ್ಲರಾದ .ಗಂಗಾವತಿ ಪ್ರಾಣೇಶ್,ರವಿ ಭಜಂತ್ರಿ,ಸುಧಾ ಬರಗೂರ,ರಿಚರ್ಡ ಲೂಯಿಸ್ ಮೊದಲಾದವರೂ ಇಂದಿನ ವೈಜ್ಞಾನಕ ಯುಗದಲ್ಲಿ ನಗೆಯ ಮಹತ್ವವನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳುವ ಮೂಲಕ ನಮ್ಮ ಸಂಸ್ಕ್ಕತಿ ನಾಗರಿಕತೆಯ ಅರಿವನ್ನು ಮೂಡಿಸುವಲ್ಲಿ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿರುವರು ಎಂದರೆ ಅತಿಶಯೋಕ್ತಿಯಲ್ಲ.

ಜೀವನದಲ್ಲಿ ನೋವುಗಳು ಅನವಾರ್ಯ,ಆ ನೋವುಗಳನ್ನು ಮರೆತು ನಗಬಲ್ಲವನು ಭೂಮಿಯಲ್ಲ ಸ್ವರ್ಗವನ್ನು ಕಾಣಬಲ್ಲ.ತಿಳಿ ನಗು ಗಂಡಸರ ಮುಖಕ್ಕೆ ಶೋಭಿಸಿದರೆ,ಮಂದಸ್ಮಿತ ನಗು ಮಹಿಳೆಯರಿಗೆ ಭೂಷಣ.ನಮ್ಮ ಹಿರಿಯರೂ ಕೂಡ ನಗುನಗುತ್ತ ಬಾಳಿರಿ ಎಂದು ಆಶೀರ್ವದಿಸುವುದನ್ನು ಕಂಡರೆ ಬದುಕಿನಲ್ಲಿ ನಾವು ನಗುನಗುತ್ತ ಇರಬೇಕು ಎನ್ನುವುದರ ಮಹತ್ವ ಸಾರುತ್ತದೆ.ನಮ್ಮ ಒಂದು ಕಿರು ನಗೆ ಬೇರೆಯವರಲ್ಲಿ ಸಂತಸ,ಆನಂದವನ್ನು ಚಿಮ್ಮಿಸುವ ಶಕ್ತಿ ಹೊಂದಿದೆಯಾದರೆ ನೀವು ಏನೇ ಆಗಿರಿ,ಯಾವ ಹುದ್ದೆಯಲ್ಲಿಯೇ ಸೇವೆಯಲ್ಲಿರಿ,ನಿಮ್ಮ ಮುಖದಲ್ಲಿ ಕಿರುನಗೆಯ ಭಾವ ಇರಲಿ,          ವೈ.ಬಿ.ಕಡಕೋಳ

        ಮುನವಳ್ಳಿ, 9449518400, 8147275277

loading...

LEAVE A REPLY

Please enter your comment!
Please enter your name here