About the Post

Author Information

ವಿದ್ಯಾವಂತರಲ್ಲಿ ಮೂಡನಂಬಿಕೆ ಜೀವಂತ:ತೋಂಟದ ಶ್ರೀ

ಧಾರವಾಡ 8- ಇಂದು ವಿಜ್ಞಾನ ಓದಿ ದೊಡ್ಡ-ದೊಡ್ಡ ಪದವಿ ಪಡ ೆದವರೂ ಕೂಡ ರಾಹುಕಾಲ, ಗುಳಿಕ ಕಾಲಗಳ ಮೂಢ ನಂಬಿಕೆಯಲ್ಲಿಯೇ ಜೀವಿಸುತ್ತಿದ್ದಾರೆ. ಇದು ನಿಜವಾದ ಕಲಿಕೆ ಯಲ್ಲ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಹಾಗೂ ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಗೊಡುಗೆ ಕಾರ್ಯಕ್ರಮ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಭರತನು ಸಕಲ ಸೌಲಭ್ಯಗಳ ಮಧ್ಯೆದಲ್ಲಿ ಆಯೋಧ್ಯೆಯಲ್ಲಿ ವಾಸವಿರುವಾಗ ಆತನಗೆ ರಾಮನ ಕೊರತೆಯು ಕಾಡುತ್ತಿತ್ತು. ಹಾಗೆಯೇ ಲಿಆಧ್ಯಾತ್ಮನವು ಮತ್ತು ಧರ್ಮದ ಪ್ರಸ್ತುತತೆ ಬಗ್ಗೆ ವಿಶ್ಲೇಷಣೆ ನೀಡಿದ ಶ್ರೀಗಳು, ಬೇಂದ್ರೆ ಯವರ ಕುಣಿಯೋಣ ಬಾರಾ ಮತ್ತು ಪಾತರಗಿತ್ತಿ ಪಕ್ಕ ಕವಿತೆಗಳ ಮೂಲಕ ಧಾರವಾಡ ಮತ್ತು ಕಲ್ಯಾಣನಗರದ ವಿಶೇಷತೆ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಎಸ್.ಬಿ.ಹಿಂಚಿಗೇರಿ ಮಾತ ನಾಡಿ, ಶಿಕ್ಷಣವನ್ನು ಮುಕ್ತ ಮನಸ್ಸಿನಿಂದ ಕಲಿಯಬೇಕು. ನಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ದರ್ಪಣ ಜೈನ,ರಾಷ್ಟ್ತ್ರೀಯ ಮತ್ತು ರಾಜ್ಯಮಟ್ಟದ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ತಾವು ಗುರುತಿಸಿಕೊಳ್ಳಬೇಕು. ಇಂದು ಬಹುತೇಕ ವಿದ್ಯಾರ್ಥಿಗಳು ವಿಜ್ಞಾನ ಅಧ್ಯಯನ ಮಾಡಿ, ಉನ್ನತ ಪದವಿ ಪಡೆದರೂ ಅವರಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸೃಜನಶೀಲತೆಯು ಕಡಿಮೆಯಾಗುತ್ತಿದೆ ಎಂದು ಶ್ರೇಷ್ಠ ಕಂಪನಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿ ಜೀವನ ವ್ಯರ್ಥವಾಗಿ ಹಾಳು ಮಾಡಿಕೊಳ್ಳದೇ ಅದನ್ನು ಒಂದು ತಪಸ್ಸು ಆಗಿ ಸ್ವೀಕರಿಸಬೇಕು ಎಂದರು.

ಇಂದು ಮುಕ್ತವಾಗಿ ತೆರೆದುಕೊಂಡ ಆಧುನಿಕ ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಸಂಗತಿಗಳು ವಿಪುಲ ವಾಗಿವೆ. ಹೀಗಾಗಿ ಇಂಟರ್ನೆಟ್ನಲ್ಲಿಯ ಉತ್ತಮ ವಿಷಯ, ಒಳ್ಳೆಯ ಪುಸ್ತಕ, ಉತ್ತಮ ಸ್ನೇಹಿತ ಬಳಗ ಹೀಗೆ ಉತ್ತಮವಾಗಿರುವುದೇ ನಮ್ಮ ಬದುಕಿನ ಆಯ್ಕೆಯಾಗಬೇಕು. ಕೇವಲ ಕಠಿಣ ಪರಿಶ್ರಮ ಯಶಸ್ಸಿನ ಸಾಧನವಲ್ಲ. ಅದಕ್ಕೆ ತಕ್ಕಂತೆ ಜಾಣತನದ ಕ್ರಮವೂ ಅಗತ್ಯ ಎಂದು ಸಲಹೆ ನೀಡಿದರು.

ಮಹಾವಿದ್ಯಾಲಯದ ಕಳೆದ ಸಾಲಿನಲ್ಲಿ ಪ್ರಥಮ ಸ್ಥಾನಗಳಿಸಿ ಪರ ಮೇಶ್ವರ ನಂದಿಕೊಪ್ಪ ವಿದ್ಯಾರ್ಥಿಗೆ ಲಿಅಪರಂಜಿಳಿ ಪದಕ ನೀಡಿ ಸನ್ಮಾನಿಸ ಲಾಯಿತು. ಇದರ ಜೊತೆಗೆ ಮಹಾ ವಿದ್ಯಾಲಯ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶೇಷ ಬಹುಮಾನ ಮತ್ತು ಪುರಸ್ಕಾರ ಪಡೆದರು. ಈ ವರ್ಷದ ವಿದ್ಯಾರ್ಥಿಗಳಿಗಾಗಿ 1,85,000 ರೂ. ಶಿಷ್ಯವೇತನ ನೀಡಲಾಯಿತು.

ಕವಿ ಚೆನ್ನವೀರ ಕಣವಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ನಾಡೋಜ ಎಂ.ಎಂ. ಕಲಬುರ್ಗಿ ಉಪಸ್ಥಿತರಿದ್ದರು. ಉಪ ನ್ಯಾಸಕ ಕೇಯೂರ ಕರಗುದರಿ ಪ್ರಾರ್ಥಿಸಿ ನಂತರ ವಾರ್ಷಿಕ ವರದಿ ಓದಿದರು.ಪ್ರಾಚಾರ್ಯ ಶಶಿಧರ ತೋಡಕರ ಸ್ವಾಗತಿಸಿದರು. ಅನಿಲ ಕುಮಾರ ನಿರೂಪಿಸಿದರು. ಮುಕ್ತಾರ ಅಹ್ಮದ ಗುಳಗುಂದಿ ವಂದಿಸಿದರು. ಮಂಡ್ಯದ ಜಾನಪದ ಕಲಾವಿದರಾದ ಹುರಗಲವಾಡಿ ರಾಮಯ್ಯ ಮತ್ತು ವೃಂದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

 

No comments yet.

Leave a Reply

Facebook Auto Publish Powered By : XYZScripts.com