ಪರಿಸರ: ಅಳಿವು ಉಳಿವು

1
1724
loading...

ವಿಶ್ವದಲ್ಲಿ  ಮನುಷ್ಯ ಜೀವಿ ಏಕಾಂಗಿಯಲ್ಲ ಅವನ ಸುತ್ತ- ಮುತ್ತ ಪ್ರಾಣಿ- ಪಕ್ಷ, ಕಾಡು ಮರ ಕ್ರೀಮಿ ಕೀಟ ನದಿ, ಹಳ್ಳ, ಸರೋವರ, ಸಮುದ್ರ ಸಾಗರ ಗುಡ್ಡ- ಬೆಟ್ಡ, ಗಾಳಿ- ಮಳೆ – ನೀರು ಮಣ್ಣು ಕಲ್ಲು , ಆಕಾಶ ಬೆಳಕು ಇವೆಲ್ಲವುಗಳು ಇವೆ. ಇವುಗಳಲ್ಲವನ್ನು ಒಳಗೊಂಡ ಸಮೂಹವೇ ಪರಿಸರ ಎನ್ನಬಹುದು.

ನಮ್ಮ ಸುತ್ತಮುತ್ತಲೂ ಇರುವ  ಪರಿಸರದಲ್ಲಿ ಹರಿಯುವ ನೀರು, ಹಣ್ಣು ಹಂಪಲು ನೀಡುವ ಸಸ್ಯಗಳನ್ನು ವಾಸಿಸಲು ಇರುವ ನೆಲ ಗಿಡ- ಮರಗಳು ಬೆಳೆಯುವ  ಹಣ್ಣು ಇವುಗಳೆಲ್ಲ ಇರುವುದು ನಮ್ಮ ಬಳಕೆಗಾಗಿ, ಈ ಎಲ್ಲವನ್ನೂ  ಚೆನ್ನಾಗಿಟ್ಟುಕೊಳ್ಳಬೇಕಾದುದು ನಮ್ಮ ಕರ್ತವ್ಯ.

ಸಸ್ಯಗಳು ಕೀಟಗಳಿಗೆ ಆಹಾರ ಕೀಟಗಳು ಕಪ್ಪೆಗೆ ಆಹಾರ ಕಪ್ಪೆಗಳು ಹಾವುಗಳಿಗೆ ಆಹಾರ  ಹಾವುಗಳು ಹದ್ದುಗಳಿಗೆ ಆಹಾರ ಹೀಗೆ ಪರಿಸರದಲ್ಲಿ  ಆಹಾರ ಸರಪಳಿ ಇದೆ. ಪ್ರಕ್ಥತಿಯ ಜೀವಸರಪಳಿಯಲ್ಲಿ ಲಕ್ಕ ಲಕ್ಷ ಜೀವಿಗಳಿರುವಂತೆ ಮನುಷ್ಯನೂ ಒಂದು ಜೀವಿ ಲಕ್ಷೊಪಲಕ್ಷ ಜೀವಿಗಳಂತೆ ಮಾನವಜೀವಿಯೂ ಪ್ರಕೃತಿ ನಿಯಮಗಳನ್ನು ಪಾಲಿಸಿದ್ದರೆ ಬಹುಶಃ ಯಾವದೇ  ಸಮಸ್ಯೆಗಳು ಬರುತ್ತಿರಲಿಲ್ಲ  ಆದರೆ ಬುದ್ದೀ ಜೀವಿಯಾದ  ಮನುಷ್ಯ ಜೀವಿಯು ಪರಿಸರವನ್ನು ತನಗೆ ಸೂಕ್ತವಾದ ರೀತಿಯಲ್ಲಿ ಪರಿವರ್ತನೆ ಮಾಡುತ್ತಾ ಬಂದಿದ್ದಾನೆ.

ನಮ್ಮ ಈ ಭೂಮಿ ಹುಟ್ಟಿರುವುದು ಸರಿ ಸುಮಾರುಇ 500  ಕೋಟಿ ವರುಷದ ಹಿಂದೆ ಮಾನವಜೀವಿ ಆಸ್ತಿತ್ವಕ್ಕೆ  ಬಂದದ್ದು ಇತ್ತೀಚಿನ  ಸುಮಾರು 20 ಲಕ್ಷ ವರ್ಷಗಳ ಹಿಂದೆ ಇಂದು  ಜಗತ್ತಿನ  ಮಾನವರ ಸಂಖ್ಯೆ 800 ಕೋಟಿ ಇರಬಹುದು ಹೀಗೆ ಜ್ವರ ಎರಿದಂತೆ ಎರುತ್ತಿರುವ ಜನಕೋಟಿಗಳಿಗೆ ಅಗತ್ಯ ವಸ್ತುಗಳು  ಹಾಗೂ ಇತರ  ಪದಾರ್ಥಗಳ ಪೂರೈಕೆಗಗಿ ಕಾಡನ್ನು ಕಡಿದು ಕೃಷಿಗೆ ಬಳಸಲಾಗುತ್ತಿದೆ. ಕಟ್ಟಡಗಳನ್ನು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ ಹಾಗೂ ತಾಂತ್ರಿಕ  ಅವಿಷ್ಕಾರಗಳಿಂದಾಗಿ  ಗಣಿಗಳು, ಕಾರ್ಖಾನೆಗಳು, ಗಿರಣಿಗಳು ಕೃತಕವಾದ  ಬೆಳಕು  ನಿಯಂತ್ರಣ ವ್ಯವಸ್ಥೆ  ಧೂಳು ತುಂಬಿದ ಗಾಳಿ, ಕೊರತೆ ನೀರು ದಿನೆ ದಿನೆ ಹೆಚ್ಚಾಗುತ್ತಿವೆ.  ಇದರಿಂದಾಗಿ ವಾಯುಮಾಲಿನ್ಯ, ಜಲಾಮಾಲಿನ್ಯ ಶಬ್ದ ಮಾಲಿನ್ಯ,  ವಿಕಿರಣ ಮಾಲಿನ್ಯಕ್ಕೆ ದಾರಿಯಾಗಿದೆ. 1984 ರಲ್ಲಿ ಮಧ್ಯಪ್ರದೇಶದ ಭೂಪಾಲನಲ್ಲಿ ಸಂಭವಿಸದ ವಿಷಾನಿಲ ಸೋರಿಕೆಯಿಂದಾ ಸಾವಿರಾರು  ಜನರು ಮರಣಹೊಂದಿದ ಘಟನೆ ನಮ್ಮ ಕಣ್ಣ ಮುಂದಿದೆ.  ಲಕ್ಷಾಂತರ ಕಾರ್ಖಾನೆಗಳಿಂದ ಪ್ರತಿನಿತ್ಯ  ಹೊರಬರುವ ವಿಷಪೂರಿತ ಮಲೀನ ನೀರು ನದಿ, ಸಾಗರ ಸೇರಿ ಅಸಂಖ್ಯಾತ ಜಲರಾಶಿಯ ಮಾರಣಹೋಮಕ್ಕೆ  ಕಾರಣವಾಗಿದೆ.

ನಮಗೆ  ಶುದ್ಧಗಾಳಿಬೇಕು. ಶುಚಿಯಾದ ನೀರುಬೇಕು. ಉರುವಲಿಗಾಗಿ ಕಟ್ಟಿಗೆ, ಬೇಕು. ನಿಸರ್ಗದ ಮೇಲೆ ಮಾನವ ಇಂದು ಸತತವಾಗಿ ದಾಳಿ ಮಾಡುತ್ತಿದ್ದಾನೆ. ಗ್ರಾಮೀಣ  ಪ್ರದೇಶಲ್ಲಿ ವಾಸಿಸುವ ಲಕ್ಷಾಂತರ ಜನಕ್ಕೆ ಕುಡಿಯುವ ಶುದ್ಧ ನೀರು  ಇಲ್ಲ. ಒಳ್ಳೇಯ ಶೌಚಾಲಯ ವ್ಯವಸ್ಥೆ ಇಲ್ಲ. ಅರಣ್ಯ ಮಾಯವಾಗಿ ಮಳೆಯು ಕಡಿಮೆಯಾಗಿ ನದಿ, ಕೆರೆ ಜಲಾಶಯಗಳು ಹೂಳು ತುಂಬಿ ಹೊಸಹೊಸ  ರೋಗರುಜೀನಗಳು ಜನರಲ್ಲಿ ಮನೆ ಮಾಡುತ್ತಿವೆ.  ಯಾಕೇ  ಹೀಗಾಯಿತು. ಕಾರಣ ಪರಿಸರ ನಾಶ

ವಾಯು: – ಇಂಧನಗಳ ಬಳಕೆಯಿಂದ ಉತ್ಪತ್ತಿಯಾದ ಇಂಗಾಲಾಮ್ಲ  ಮತ್ತು ಇಂಗಾಲದ ಮೋನಾಕ್ಸೈಡ ವಾಯು ಮಲಿನತೆಗೆ ಕಾರಣವಾಗಿದೆ. ವಾಯು ಮಲಿನತೆಯಿಂದಾಗಿ  ಉಸಿರಾಟಕ್ಕೆ  ಸಂಬಂಧಪಟ್ಟ  ಕಾಯಿಲೆಗಳು ಉಂಟಾಗುತ್ತವೆ. ಇದನ್ನು   ತಡೆಯಲು ಸಾಕಷ್ಟು ಪ್ರಮಾಣದ ಮರಗಿಡಗಳನ್ನು ಬೆಳೆಸಬೇಕು.

ಮಲಿನ ನೀರು: ನೀರು ಜೀವನಾಧಾರ, ನೀರು ಪರಿಸರದ ಒಂದು ಮುಖ್ಯ ಘಟಕ ಶಕ್ತಿ  ಉತ್ಪಾದನೆಗೆ  ಸಾಗಾಣಿಕೆ ಬಾಯಾರಿಕೆ ನೀಗಲಷ್ಟೆ  ಅಲ್ಲದೇ  ಕೃಷಿ  ಕೈಗಾರಿಕೋದ್ಯಮಗಳಿಗೆ ಬೇಕು. ನೀರೂ  ಅಮೂಲ್ಯ ಸಂಪನ್ಮೂಲ  ಕಾರ್ಖಾನೆಗಳಿಂದ ಹೊರಬರುವ ವ್ಯರ್ಥ ವಸ್ತುಗಳು  ಬಗರಗಳ ಮನೆಗಳಿಂದ  ಮಲಮೂತ್ರಗಳನ್ನೌಳಗೊಂಡ ಹೇಸಿಗೆ  ನೀರು ಜಲ ಮಾಲಿನ್ಯಕ್ಕೆ ಮೂಲ ಕಾರಣ  ಕಾಮಾಲೆ, ಕಾಲರಾ ಅತೀಬೇಧಿ ಟೈಪ್ಯಾಡ  ಮುಂತಾದ ಹತ್ತು ಹಲವು ಕಾಯಿಲೆಗಳಿಗೆ ಮಲೀನ ನೀರೆ ಕಾರಣ.

ನೀರಿನ ಬಳಕೆಯ ಮೇಲೆ ಹತೋಟಿ  ತರಬೇಕಾದುದು  ಅತ್ಯವಶ್ಯಕ ಜಲಕ್ಷಾಮ  ಉಂಟಾಗುವ ಕಾಲ ಸನ್ನಿಹಿತವಾಗುತ್ತಿದೆಯೋ ಏನೋ  ಎನ್ನುಂತಾಗಿದೆ. ಅಗತ್ಯವಿರುವಷ್ಟು  ಮಾತ್ರ ನೀರನ್ನು ಬಳಸಬೇಕು.

ವಿಶ್ವ ಸಂಸ್ಥೆಯ ಆದೇಶದಂತೆ   5 ರಂದು  ವಿಶ್ವ ಪರಿಸರ ದಿನ ವನ್ನಾಗಿ ಆಚರಿಸಲು  ನಿರ್ಧರಿಸಲಾಗಿದೆ. ವಿಶ್ವ ಪರಿಸರ ದಿನಾಚರಣೆಯ  ಅಂಗವಾಗಿ ಪರಿಸರ ಅಳಿವು ಉಳಿವು  ಪರಿಸರ ನಾಶದಿಂದಾಗುವ ಪರಿಣಾಮಗಳು  ಪರಿಸರವನ್ನು ಹೇಗೆ ಚೆನ್ನಾಗಿಟ್ಟುಕೊಳ್ಳಬಹುದು ಎಂಬ ಈ ಸಂದರ್ಭೋಚಿತ ಸಕಾಲಿಕ ವಿಶೇಷ ಲೇಖನ

 

 

ನಮ್ಮ ಪರಿಸರದ ಕೆರೆ ಸರೋವರ ಬಾವಿ ನದಿ ನಾಲೆಗಳ ನೀರಿನ  ಬಣ್ಣ ವಾಸನೆ ರುಚಿಗಳ ಬಗ್ಗೆ ನಿಗಾ ಇಡಭೇಕು. ಅವು ಕೆಟ್ಟಲ್ಲಿ  ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಬೇಕು.

ಕೃಷಿ ಭೂಮಿಗಳಲ್ಲಿ  ಇಂದು ನಾವು  ಹೇರಳವಾಗಿ ಕೋಟನಾಶಕಗಳು ಶೀಲೀಂದ್ರ  ನಾಶಕಗಳು ಹಾಗೂ ಕಳೆನಾಶಕಗಳನ್ನು ರಸಗೊಬ್ಬರವನ್ನು  ವೀಪರೀತವಾಗಿ ಬಳಸುತ್ತಿದ್ದೇವೆ.  ಇಲಿ, ಜಿರಳೆ ಮೊದಲಾದವುಗಳ ಹತೋಟಿಗಾಗಿ ಪಾಷಾಣ ಬಳಸುತ್ತಿದ್ದೇವೆ. ಇಂತಹ ಕೀಟನಾಶಗಳು  ಸೇರುವುದು ನಮ್ಮ ದೇಹವನ್ನೇ ಪಿಡುಗು ನಾಶಕಗಳ ಬಳಕೆ ಕಡಿಮೆ  ಮಾಡಿ ಆ ಮೂಲಕ  ಪರಿಸರ ಮಲೀನತೆ ತಡೆಯಬಹುದು.

ಪಾರ್ಥೇನಿಯಂ ಮುಪಟೇರಿಯಂ. ಅಂತರಗಂಗೆ ವಡವಾಟಿ ಹೀಗೆ ಎಲ್ಲೆಡೆ ಕಾಣಿಸುವ  ಕಳೆಗಳು ಸಹಿತ ಪರಿಸರ ನಾಶಕ್ಕೆ ಕಾರಣವಾಗಿವೆ. ಕೃಷಿ ಅಭಿವೃದ್ದಿಗೆ ಇವು ಮಾರಕ  ಈ ಕಳೆಗಳನ್ನು ನಿಯಂತ್ರಿಸಿ ಪ್ರಕೃತಿಯ ಸಮತೋಲನವನ್ನು ಕಾಪಾಡಿ ಪರಿಸರದ ಹಿತರಕ್ಷಣೆ ಮಾಡಬೇಕು.

ಅರಣ್ಯ ನಾಶ: ಒಂದು ಮರ ನೆಡುವುದು ಹತ್ತು ಬಾವಿ ತೋಡಿಸಿದ್ದಕ್ಕೆ ಸಮು ಎಂದಿದ್ದಾರೆ.  ಹಿರಿಯರು ಅರಣ್ಯ ಗಳು  ಇದ್ದರೆ ಮಣ್ಣಿನ  ರಕ್ಷಣೆ ಯಾಗುತ್ತದೆ.  ನೀರು ವ್ಯರ್ಥವಾಗುವುದಿಲ್ಲ ಪ್ರಾಣಿ   ಸಂಕುಲ  ಅರಣ್ಯವಿಲ್ಲದೆ ಸಸ್ಯ ಸಂಪತ್ತಿಲ್ಲದೆ  ಜೀವಿಸಲಾರದು. ಅರಣ್ಯ ಹಸಿರು ಹೊನ್ನು ಇಂತಹ ಅರಣ್ಯಗಳಿಂದ ನಾವು ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಅದನ್ನು ಕಡಿಯುತ್ತಾ  ನಾಶಮಾಡುತ್ತಾ ಬಂದಿದ್ದೇವೆ.  ಇದರಿಂದಾಗಿ ವನ್ಯ ಮೃಗಗಳ ವಿಪರೀತ  ಕಡಿಮೆಯಾಗುತ್ತಾ  ಬಂದಿವೆ. ಇನ್ನು ಕೆಲೌಏ ದಿನಗಳಲ್ಲಿ  ನಾವು ವನ್ಯ ಮೃಗಗಳನ್ನು ಚಿತ್ರದಲ್ಲಿ ಮಾತ್ರ ನೋಡುವ ಹಾಗಾದೀತು. ಮಳೆ ಅಪರೂಪವಾಗುತ್ತಿದೆ. ಮಣ್ಣಿನ  ಸವೆತ ಇಂದು  ಎದುರಿಸುತ್ತಿರುವ  ತೀವ್ರತರಹದ ಅಮಯೆಯಾಗಿದೆ. ಇದರಿಂದಾಗಿ ಪರಿಸರಕ್ಕೆ ಬಹಳ ನಷ್ಟ ಉಂಟಾಗಿದೆ.

ಅರಣ್ಯ ಕೃಷಿ  ಹೆಚ್ಚಬೇಕು. ಸೌದೆಗಾಗಿ ಅರಣ್ಯ ಕಡಿಯುವುದು ವಿಶೇಷವಾಗಿ ಕಡಿಮೆಯಾಗಬೇಕು. ಕಡಿದಂತಹ ಜಾಗದಲ್ಲಿ ಅವುಗಳ ಪುನರ್ ನಿರ್ಮಾಣವಾಗಬೇಕು. ಪ್ರಾಕೃತಿಕ ಅರಣ್ಯಗಳು ಉಳಿಯಬೇಕಲ್ಲವೇ ಅರಣ್ಯಗಳ ನಷ್ಟದಿಂದ ಪರೋಕ್ಷವಾಗಿ ನಮ್ಮ ಕೆರೆಗಳು ಬತ್ತುತ್ತಿವೆ.  ಮರ ಗಿಡಗಳು  ಇಲ್ಲವಾಗಿ ಮಳೆ ನೀರು ಸುರಿದಾಗ ನೀರಿನ ಜೊತೆ ಮಣ್ಣು ಕೊಚ್ಚಿಹೋಗಿ  ಕೆರೆಯ ತಳದಲ್ಲಿ ಶೇಖರವಾಗುತ್ತದೆ.  ಕ್ರಮೇಣವಾಗು ಈ ಹೂಳಿನಿಂದ ಕೆರೆಯು ಹೂತು ಹೋಗುತ್ತದೆ.  ಕೆರೆಯು ಇಲ್ಲವೇನೋ ಎನ್ನುವಂತೆ ಕೆರೆಯು ಬತ್ತುತ್ತದೆ ಕೆರೆಗಳ ರಕ್ಷಣೆ  ನಮ್ಮ ಆದ್ಯ ಕರ್ತವ್ಯ ಅದರಿಂದ ನೀರಿನ ಜೊತೆ ಉತ್ತ, ಹವೆಕೂಡ ದೊರಕುತ್ತದೆ. ಕೆರೆಗಳ ರಕ್ಷಣೆ ನಮ್ಮ ಕರ್ತವ್ಯ.

ಮಳೆ ಬೆಳೆ ಇಲ್ಲವಾಗಿ ಉತ್ತಮ ನೆಲೆ ದೊರಕದೆ ತನ್ನ ವಿನಾಶವನ್ನು ತಾನೆ ಕಂಡುಕೊಳ್ಳುವಂತಾಗಿದೆ. ಜನರಲ್ಲಿ ವೃಕ್ಷಪ್ರಜ್ಞೆ  ಮೂಡಿಸಬೇಕಾಗುತ್ತವೆ.  ಕೇವಲ ಅರಣ್ಯ ಉಳಿಸುವುದಷ್ಟೇ ಅಲ್ಲದೆ ಶಾಲೆ,  ಕಾಲೇಜು  ಕಛೇರಿ ಕಟ್ಟಡಗಳ ಮುಂದೆ ಇಲ್ಲೆಲ್ಲಾ  ಗಿಡಮರ ಬೆಳೆಸುವುದು ಅತ್ಯಗತ್ಯ.

ಪ್ರಾಣಿಗಳ ರಕ್ಷಣೆ ಅರಣ್ಯ ರಕ್ಷಣೆ  ಎರಡೂ  ಒಂದೇ ನಾಣ್ಯದ  ಎರಡು ಮುಖಗಳಿದ್ದಂತೆ ಅರಣ್ಯ ರಕ್ಷಿಸುವುದೆಂದರೆ ಪ್ರಾಣಿಗಳನ್ನು ರಕ್ಷಿಸಿದಂತೆ  ವನ್ಯ   ಜೀವಿಗಳು ಆದಾಯದ ಮೂಲಗಳುಪರ್ಸ ಬೆಲ್ಟ್  ವ್ಯಾನಿಟಿ ಬ್ಯಾಗ್ ತಯಾರಿಕೆಯಾಗಿ ವನ್ಯ ಜೀವಿಚರ್ಮ ಸುಲಿಯುವುದು ವಿಪರೀತವಾಗಿದೆ. ಪ್ರಾಣಿ ರಕ್ಷಣೆಗೆ  ಕಾನೂನು  ನೆರವಾಗಬೇಕಾಗಿದೆ.

ಸಫಾರಿಗಳನ್ನು ಹೆಚ್ಚು ಹೆಚ್ಚಾಗಿ ನಿರ್ಮಿಸಬೇಕಾಗಿದೆ. ಪ್ರಾಣಿ ಸಂಕುಲನದ ಉಳಿವು ಅಗತ್ಯ ವನ್ಯ ಸೀವಿ  ಸಂರಕ್ಷಣೆ ಅಧ್ಯಯನದ  ವಿಷಯವಾಗಬೇಕಾಗಿದೆ.  ಮಕ್ಕಳಿಗೆ ಶೈಕ್ಷಣಿಕ ವಿಷಯವಾಗಿ  ವನ್ಯ ಜೀವಿ ಕುರಿತು  ಪಾಠಗಳಿರಬೇಕು. ವನ್ಯ ಜೀವಿಗಳ  ಚರ್ಮ ಗರಿಕೊಂಬು ಮುಂತಾದವುಗಳಿಂದ ಮಾಡಿದ ವಸ್ತುಗಳನ್ನು ಪ್ರೌತ್ಸಾಹಿಸಬಾರದು. ಅಭಯಾರಣ್ಯಗಳನ್ನು  ನಿರ್ಮಿಸಬೇಕು. ಪಕ್ಷಿ ವೀಕ್ಷಣೆ  ವನ್ಯ ಜೀವಿಗಳಿಗೆ  ಸಂಬಂಧಿಸಿದ ಅಂಚೆ ಚೀಟಿ ಸಂಗ್ರಹ ಮೊದಲಾದ  ಹವ್ಯಾಸ ಬೆಳೆಸಬೇಕು ಪ್ರಕೃತಿಯಲ್ಲಿನ ಒಲವು ಹೆಚ್ಚಿದಂತೆಲ್ಲ ಸಂರಕ್ಷಣೆ ತಾನಾಗಿಯೇ ಆಗುತ್ತದೆ. ಪರಿಸರವೂ ಹತೋಟಿಯಲ್ಲಿರುತ್ತದೆ.

ಪರಿಸರ ಮಾಲಿನ್ಯ:-  ನಮ್ಮ ದೇಶದಲ್ಲಿ  ಕೈಗಾರಿಕೆಗಳು ಬೃಹತ್  ವಿದ್ಯುತ್  ಸ್ಥಾವರಗಳಿವೆ ವಾಯು ಮಾಲಿನತೆಗ ಕೈಗಾರಿಕೆಗಳಿಂದ ಬರುವ ದಟ್ಟವಾದ ಹೊಗೆ ಉಷ್ಣ ವಿದ್ಯುತ್  ಸ್ಥಾವರದಿಂದ  ಬರುವ ಕಲ್ಲಿದ್ದಲು ಸುಟ್ಟು ದೂಳು ಇವೆಲ್ಲ ಕಾರಣ. ವಾಹನಗಳಿಂದ  ಹೊರಬರುವ  ಹೊಣೆಯೂ ಅಷ್ಟೆ ಕಾರಣ  ಅಣುವಿಕಿರಣ.  ಅಣು ವಿದ್ಯುತ್  ಸ್ಥಾವರಗಳಲ್ಲಿ  ಏಕೀಕರಣ ಜನ್ಯ ವಸ್ತು ಸಹ ಬಹಳ ಅಪಾಯಕಾರಿ  ನಮ್ಮ ದೇಶದ ಜಲಸಂಪತ್ತಿನ ಶೇಕಡಾ 70 ಭಾಗ  ಮಲೀನತೆಯಿಂದಾ ನರಳುತ್ತದೆ. ಪರಿಸರ ಮಾಲಿನ್ಯಕ್ಕೆ  ಪರಿಹಾರ  ಕಂಡುಕೊಳ್ಳುವುದು ಇಂದಿನ ಅತ್ಯಗತ್ಯತಳಲ್ಲೊಂದು.ಪರಿಸರ ಶಿಕ್ಷಣ: ಪರಿಸರ ಸಂರಕ್ಷಣೆ ಪರಿಸರ ನಾಶದ ಅರಿವಿಗಾಗಿ ಪರಿಸರ ಶಿಕ್ಷಣ ಅತ್ಯಗತ್ಯ 1972 ರಲ್ಲಿ ಸ್ಟಾಕ್ ಹೋಂ ಎಂಬಲ್ಲಿ ಮಾನವ ಪರಿಸರ  ಎಂಬ ವಿಷಯದ ಬಗ್ಗೆ ಅಂತರ್ ರಾಷ್ಟ್ತ್ರೀಯ ಸಮ್ಮೇಳನ ನಡೆದಾಗ ಪರಿಸರ  ಶಿಕ್ಷಣದ ಕಲ್ಪನೆ ಮೂಡಿ ಬಂದಿದ್ದು ವಿಶೇಷ.

ಪರಿಸರ ಶಿಕ್ಷಣ ಏರ್ಪಡಿಸಿ ಶಿಬಿರದ  ಮೂಲದ ಜನರಲ್ಲಿ ಪರಿಸರ ಪ್ರಜ್ಞೆ  ಮೂಡಿಸಬಹುದು. ಬೆಳೆಸಬಹುದು.

ಶೈಕ್ಷಣಿಕ ಕಾರ್ಯಕ್ರಮಗಳನ್ನು ಇದರ ಸಲುವಾಗಿ ರೂಪಿಸಬಹುದು. ಪರಿಸರ ಕುರಿತು ಭಾಷಣ  ಚರ್ಚೆ  ಏರ್ಪಡಿಸಬಹುದು. ವಿಚಾರ  ಸಂಕೀರಣಗಳನ್ನು  ನಡೆಸಬಹುದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಸ್ತು ಪ್ರದರ್ಶನ  ಏರ್ಪಡಿಸಬಹುದು.  ಪರಿಸರ ಮಾಲಿನ್ಯ ದಿಂದಾಗುವ  ದುಷ್ಪರಿಣಾಮಗಳನ್ನು ಕುರಿತ ಚಲನಚಿತ್ರ ತಯಾರಿಸಿ ಪ್ರದರ್ಶಿಸಬಹುದು.  ನಾಟಕ ಪ್ರದರ್ಶನ  ಸೂಕ್ತ ರಸ್ತೆಗಳಲ್ಲಿ  ಗೋಡೆಗಳ ಮೇಲೆ  ಜನರಲ್ಲಿ ತಿಳುವಳಿಕೆ  ಮೂಡಿಸುವ  ವಿಚಾರವಿರುವ ಬಿತ್ತಿಚಿತ್ರ  ಅಂಟಿಸಬಹುದು. ಸಮಸ್ಯೆಗಳ ಅಧ್ಯಯನವನ್ನು ಸಮಸ್ಯೆಗಳ ಪರಿಹಾರಕ್ಕಾಗಿ ಯತ್ನಿಸಬಹುದು.

            ಪರಿಸರ ಸಂರಕ್ಷಣೆ ಎಲ್ಲಾ ನಾಗರಿಕರ ಕರ್ತವ್ಯ ಪ್ರಜ್ಞಾವಂತನಾದವನು ಪರಿಸರ ಸಮಸ್ಯೆಗಳನ್ನು ತಡೆಹಟ್ಟುವ ಕಾರ್ಯದಲ್ಲಿ ತೋಡಗುತ್ತಾನೆ. ಪರಿಸರ ಸಂರಕ್ಷಣೆಗೆ ಎಲ್ಲಾ ರಾಜ್ಯ ಸರಕಾರಗಳು  ಕಂಕಣಬದ್ಧವಾಗಬೇಕು. ನಮ್ಮ ಪರಿಸರ ನಾವೇ ನಿರ್ಮೂಲನೆಗೊಳಿಸಿದರೆ ಮುಂದಿನ  ಪೀಳಿಗೆ ನಮ್ಮನ್ನಯ  ಶಪಿಸದೇ ಪರಿಸರ  ಸಂರಕ್ಷಣೆ ಒಂದು ವಿಧದಲ್ಲಿ  ನಮ್ಮ ಸಂರಕ್ಷಣೆಯೇ ಆಗಿದೆ. ಅಂದಮೇಲೆ ನಾವೆಲ್ಲಾ ಕೂಡಿ ಪರಿಸರ  ಕಾಪಾಡೋಣ ಪರಿಸರ ಸಂರಕ್ಷಣೆಗೆ  ನಮ್ಮ ಕೈಲಾದಷ್ಟು ನೆರವಾಗೋಣ ಅಲ್ಲವೇ?

ಅಶೋಕ ಮಜ್ಜಿಗಿ

ಸಹ ಶಿಕ್ಷಕರು ಜಮಖಂಡಿ

loading...

1 COMMENT

LEAVE A REPLY

Please enter your comment!
Please enter your name here