ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

0
9
loading...

ಬಾಗಲಕೋಟ : ಸ.30 : ಜಿಲ್ಲೆಯ ವ್ಯಾಪ್ತಿಯಲ್ಲಿ

ಬರುವ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ

ಇರುವ ಮೇಲ್ವಿಚಾರಕರ ಹುದ್ದೆಯನ್ನು ಗೌರವ ಸಂಭಾವನೆ

ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿ

ಆಹ್ವಾನಿಸಿದೆ.

ಜಮಖಂಡಿ ತಾಲೂಕಿನ ಚಿಮ್ಮಡ (ಮಹಿಳಾ-

2ಎ), ಹುನ್ನೂರ (ಗ್ರಾಮೀಣ ಅಭ್ಯರ್ಥಿ-ಜಿಎಂ), ಜಗದಾಳ

(ಜಿಎಂ), ಹುನಗುಂದ ತಾಲೂಕಿನ ನಾಗೂರ (ಮಹಿಳಾ-

3ಎ), ಗಂಜಿಹಾಳ (ಜಿಎಂ) ಹಾಗೂ ಬೀಳಗಿ ತಾಲೂಕಿನ

ಸೊನ್ನ (ಅಂಗವಿಕಲ-ಜಿಎಂ), ಕಾತರಕಿ (2ಎ) ಗ್ರಾಮ

ಪಂಚಾಯತ ಗ್ರಾಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆ

ಖಾಲಿ ಇದ್ದು, ನಿಯಮಾನುಸಾರ ಭರ್ತಿ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ

ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸ್ಥಳೀಯ ಗ್ರಾಮ

ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.

ನಿಗದಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿ

ಮಾತ್ರ ಅರ್ಜಿ ಸಲ್ಲಿಸಬೇಕು. ಗ್ರಂಥಾಲಯ ವಿಜ್ಞಾನದಲ್ಲಿ

ತರಬೇತಿ ಪಡೆದವರಿಗೆ ಆಧ್ಯತೆ ನೀಡಲಾಗುವುದು.

ಅಯೋಮಿತಿ ಸಾಮಾನ್ಯ 35, 2ಎ,2ಬಿ,3ಎ,3ಬಿಗೆ 38

ಹಾಗೂ ಪ.ಜಾತಿ, ಪಂಗಡ, ಪ್ರವರ್ಗಕ್ಕೆ 40

ನಿಗದಿಪಡಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ

ದಾಖಲಾತಿಗಳೊಂದಿಗೆ ಅಕ್ಟೌಬರ 31 ರೊಳಗಾಗಿ

ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ದಿ

ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಅರ್ಜಿ ಫಾರಂಗಳಿಗಾಗಿ ಮುಖ್ಯ ಗ್ರಂಥಾಲಯ

ಅಧಿಕಾರಿಗಳು, ಜಿಲ್ಲಾ ಕೇಂದ್ರ ಗ್ರಂಥಾಲಯ, ನವನಗರ,

ಬಾಗಲಕೋಟ ಇವರಿಂದ ಬೆಳಿಗ್ಗೆ 10 ರಿಂದ ಸಂಜೆ 5.30ರ

ಒಳಗೆ ಪಡೆಯಬಹುದಾಗಿದೆಯೆಂದು ಜಿಲ್ಲಾ ಮುಖ್ಯ

ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here