ಟ್ರೆಂಡ್ ಸೆಟ್ಟರ್ ನಿರ್ದೇಶಕ ರಾಜೇಂದ್ರಬಾಬು ಇನ್ನಿಲ್ಲ

0
14
loading...

ಬೆಂಗಳೂರು, ನ.3- ಸ್ಯಾಂಡಲ್ವುಡ್ನ ಸೆಂಟಿಮೆಂಟ್ ನಿರ್ದೇಶಕನೆಂದೇ ಹೆಸರುವಾಸಿಯಾಗಿ ಕನ್ನಡ ಚಿತ್ರರಂಗಕ್ಕೆ ರಾಷ್ಟ್ತ್ರಮಟ್ಟದಲ್ಲಿ ಮಾನ್ಯತೆ ತಮದುಕೊಟ್ಟಿದ್ದ ಚರ್ತುಭಾಷ ನಿದೇರ್ಶಕ  ಡಿ.ರಾಜೇಂದ್ರಬಾಬು  ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕರುಳಿನ ಕೂಗು , ಕರುಳಿನ ಕರೆ , ಹಾಲುಂಡ ತವರು ಸೇರಿದಂತೆ ಅನೇಕ ಸದಾಭಿರುಚಿ ಚಿತ್ರಗಳನ್ನು ನಿದೇರ್ಶಶಿಸಿ

ತನ್ನದೆಯಾದ ಟ್ರೆಂಡ್ ಸೃಷ್ಟಿಸಿಕೊಂಡಿದ್ದ ಬಾಬು ಅವರು ಭಾನುವಾರ ಬೆಳಗ್ಗೆ ನಗರದ ಎಂ.ಎಸ್. ರಾಮಾಯ್ಯ ಅಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ಕೊನೆಯುಸಿರೆಳೆದರು.

62 ವಯಸ್ಸಿನ ಬಾಬು ಅವರಿಗೆ ಪತ್ನಿ ಸುಮಿತ್ರಾ ಹಾಗೂ  ಉಮಾಶಂಕರಿ ಮತ್ತು ನಕ್ಷತ್ರ  ಇಬ್ಬರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಆಗಲಿದ್ದಾರೆ.

ಕಳೆದ ಹಲವಾರು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.  ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಎಂ.ಎಸ್.ರಾಮ0್ಯು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೈದರಬಾದ್ಗೆ ತೆರಳಿದ್ದ ಬಾಬು ಅವರ ಪತ್ನಿ ಬಂದ ನಂತರ  ಸಂಜೆ ಬಳ್ಳಾರಿ ರಸ್ತೆಯ ಹೆಬ್ಬಾಳದಲ್ಲಿರುವ ವಿದ್ಯುತ್ ಚಿತಗಾರದಲ್ಲಿ ಹಿಂದೂ ಸಂಪ್ರಾಯದಂತೆ ವಿಧಿ ವಿಧಾನಗಳನ್ನು ಕುಟುಂಬದ ಸದಸ್ಯರು ಹಾಗೂ ಆಪಾರ ಆಭಿಮಾನಿಗಳ ಶೋಕಚಿತ್ತದ ನಡುವೆ ಆಂತ್ಯಸಂಸ್ಕ್ತ್ರರ ನಡೆಸಲಾಯಿತು.

ಇತ್ತೀಚಿಗೆ ಚಿತ್ರರಂಗದಿಂದ ದೂರ ಉಳಿದಿದ್ದರೂ ಕುಚುಕು, ಕುಚುಕು ಹಾಗೂ ಆರ್ಯನ್, ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಮತ್ತೇ ಸಕ್ರೀಯರಾಗಿದ್ದರು.ಶಿವರಾಜ್ಕುಮಾರ್,ಮತ್ತು  ರಮ್ಯ ಅಭಿನ0ುದ ಆ0ುರ್ನ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಪೂರ್ಣವಾಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಚಿತ್ರ ನಿರ್ದೇಶನ ಮಾಡಿ ಹೆಸರು ಪಡೆದುಕೊಂಡಿದ್ದರು. ಮಲೆಯಾಳಂನಲ್ಲಿ ರಕ್ತಾಭಿಷೇಕಂ, ಅದೇ ರೀತಿ ಹಿಂದಿ0ುಲ್ಲಿ ನಿರ್ದೇಶನ ಮಾಡಿದ ಪ್ಯಾರ್ ಕರ್ಕೆ ದೇಖೋ ಕೂಡ ಜನಪ್ರಿ0ುವಾಗಿತ್ತು.

ರಾಜೇಂದ್ರಸಿಂಗ್ ಬಾಬು, ಕೆ.ಎಸ್.ಆರ್.ದಾಸ್ ಹಾಗೂ ವಿ.ಸೋಮಶೇಖರ್ ಅವರ ಗರಡಿ0ುಲ್ಲಿ ಸಹಾ0ುಕ ನಿರ್ದೇಶಕರಾಗಿ ಪಳಗಿದ ಬಾಬು ಅವರು ನಂತರ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದರು.

ಕನ್ನಡದ ಕೆಲವೇ ಯಶಸ್ವೀ ನಿರ್ದೇಶರಲ್ಲಿ ಒಬ್ಬರಾಗಿದ್ದ ಬಾಬು ಅವರು ,ಒಲವಿನ ಉಡುಗೊರೆ, ರಾಮಾಚಾರಿ, ಅಪ್ಪಾಜಿ, ಹಾಲುಂಡ ತವರು, ನಾನು ನನ್ನ ಹೆಂಡತಿ, ಜೀವನದಿ, ಸ್ವಾಭಿಮಾನ, ಜೋಡಿ ಹಕ್ಕಿ, ದೇವರ ಮಗ, ಆಟೋ ಶಂಕರ್, ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.

ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಉಪೇಂದ್ರ, ಸುದೀಪ್ ನಟನೆ0ು ಚಿತ್ರಗಳನ್ನು ಹೆಚ್ಚಾಗಿ ನಿರ್ದೇಶನ ಮಾಡಿದ್ದರೂ ವಿಶೇಷವಾಗಿ ರವಿಚಂದ್ರನ್ ಮತ್ತು ಬಾಬು ಜೋಡಿ ತುಂಬ ಜನಪ್ರಿ0ುವಾಗಿತ್ತು.

ಒಂದು ಕಾಲದಲ್ಲಿ ರಾಜೇಂದ್ರಸಿಂಗ್ ಬಾಬು ನಿದೇರ್ಶನ ,ಮತ್ತು  ಹಂಸಲೇಖ ಅವರ ಸಂಗೀತ , ಎಂದರೆ ಪ್ರೇಕ್ಷಕರು ಚಿತ್ರ ನೋಡಲು ಮುಗೀಬೀಳುತ್ತಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ರೆಬಲ್ಸ್ಟಾರ್ ಅಂಬರೀಷ್, ಸಾಹಸಸಿಂಹ ವಿಷ್ಣುವರ್ಧನ್ ಉಪ್ಪಿ ಸೇರಿದಂತೆ ಅನೇಕ ನಟನಟಿಯರು ಜನಪ್ರಿಯರಾಗಲು ಕಾರಣ ಇವರ ಸದಾಭಿರುಚಿ ಚಿತ್ರಗಳು ಎಂದರೆ ಅತೀಶಯೋಕ್ತಿಯಾಗಲಾರದು.

1980ರಲ್ಲಿ ನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರೂ  ಅವರ ಮನಸ್ಸು ಮಾತ್ರ ನಿದೇರ್ಶಕನ ಕಡೆ ಸೆಳೆಯುತ್ತಿತ್ತು.  ಕುರುಬರ ಲಕ್ಕ ಎಂಬ ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದರೂ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಆನಂತರ ನಟನೆ0ುನ್ನು ಕೈ ಬಿಟ್ಟು ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು.

ಇವರ ಚಿತ್ರರಂಗದ ಸಾಧನೆ0ುನ್ನು ಪರಿಗಣಿಸಿ 2011ರಲ್ಲಿ ಕರ್ನಾಟಕ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ0ುನ್ನು ಹಾಗೂ 2012ನೆ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ0ುನ್ನು ನೀಡಿತ್ತು.  ಆನಂತರ ವಿವಾದ ನ್ಯಾಯಾಲ0ುಕ್ಕೆ ಹೋಗಿದ್ದರಿಂದ   ಅವರಿಗೆ ಕಣಗಾಲ್ ಪ್ರಶಸ್ತಿ ಕೈ ತಪ್ಪಿತ್ತು.

ಗಣ್ಯರ ಭೇಟಿ

ರಾಜೇಂದ್ರಸಿಂಗ್ ಬಾಬು ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗದ ಅನೇಕ ಗಣ್ಯರು ಆರ್.ಟಿ. ನಗರದಲ್ಲಿರುವ ಬಾಬು ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಅಂಬರೀಷ್ ,ಶಿವರಾಜ್ಕುಮಾರ್, ಜಗ್ಗೇಶ್, ಗಣೇಶ್, ರಾಘವೇಂದ್ರರಾಜ್ಕುಮಾರ್,ಚಿತ್ರ ನಿರ್ಮಾಪಕರಾದ ದ್ವಾರಕೀಶ್ ಮತ್ತು ರಾಜೇಂದ್ರಸಿಂಗ್ ಬಾಬು , ರಾಕ್ಲೈನ್ವೆಂಕಟೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗಾರಾಜು, ಪಾರ್ವತಮ್ಮ ಶಿವರಾಜ್ಕುಮಾರ್, ನಟಿಯರಾದ ಜಯಮಾಲಾ, ಹೇಮಾಚೌಧರಿ, ಜಯಂತಿ, ರಮ್ಯಾ, ಸೇರಿದಂತೆ ಅನೇಕರು ಆಗಮಿಸಿ ಕಂಬಿನಿ ಮಿಡಿದರು.

loading...

LEAVE A REPLY

Please enter your comment!
Please enter your name here