Home Authors Posts by admin

admin

9081 POSTS 0 COMMENTS

ಪ್ರಭಾವಿಗಳ ಮನೆಯ ಮೇಲೆ ಐಟಿ ದಾಳಿ: ಕೇಂದ್ರಕ್ಕೆ ವರದಿ ಸಲ್ಲಿಕೆ

ಬೆಳಗಾವಿ:1 ಕುರಿ ಕೊಬ್ಬಿದಷ್ಟೂ ಲಾಭವೇ ಎಂಬ ಗುಪ್ತ ನೀತಿಯ ಕೇಂದ್ರ ಆದಾಯ ತೆರಿಗೆ ಇಲಾಖೆ ಈಗ ಜಿಲ್ಲೆಯ ರಾಜಕೀಯ ನಾಯಕರ ಮನೆ ಮೇಲೆ ಶುಕ್ರವಾರವೂ ದಾಳಿ ಮುಂದುವರೆಸಿತು.

ಭಯಮುಕ್ತರಾಗಿರುವಲ್ಲಿ ದೇವರು ಇರುತ್ತಾನೆ : ಡಾ.ಮಲ್ಲಿಕಾ ಘಂಟಿ

ಬೀಳಗಿ: ಎಲ್ಲಿ ಹೆಣ್ಣು ಮಕ್ಕಳು ಸುಖ-ನೆಮ್ಮದಿಗಳಿಂದ ಸಂತುಷ್ಟರಾಗಿ, ಭಯಮುಕ್ತರಾಗಿ ಇರುತ್ತಾರೆಯೋ ಅಲ್ಲಿ ದೇವರು ಇರುತ್ತಾನೆ ಎಂಬ ವಾಸ್ತವ ಇಂದಿನ ಸಮಾಜದಲ್ಲಿ ಒಡಮೂಡಬೇಕು. ಒಟ್ಟು ಸಾಹಿತ್ಯದಲ್ಲಿ ಬಹುಪಾಲು ಸಾಹಿತ್ಯ ಹೆಣ್ಣು ಮಕ್ಕಳಿಂದಲೇ ರಚಿತವಾಗಿದೆ. ಆದ್ದರಿಂದ ಹೆಣ್ಣನ್ನು ಒಂದು ಸಾಂಸ್ಕೃತಿಕ ಶಕ್ತಿ ರೂಪಿಣಿಯಾಗಿ ಕಾಣಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.

ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸಂಬಂಧ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಕುಮಟಾ: ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸಂಬಂಧ ಮಂಗಳವಾರ ಪುರಸಭೆಯ ತುರ್ತು ಸಾಮಾನ್ಯ ಸಭೆ ಬಿಸಿಬಿಸಿ ಚರ್ಚೆ ನಡೆದಿದ್ದು, ಪುರಸಭೆ ವ್ಯಾಪ್ತಿಯ ಕಸ ನಿರ್ವಹಣೆಗೆ ತ್ಯಾಜ್ಯ ಘಟಕ ನಿರ್ಮಾಣದಲ್ಲಿ ಪುರಸಭೆ ತಕ್ಷಣ ಸಕ್ರಿಯಗೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಎದುರು ಸಮಸ್ಯೆ ಕೊಡೊಯ್ದು ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಾಂಗ್ರೇಸ್‌-ಬಿಜೆಪಿ ಒಳ ಒಪ್ಪಂದ ಸತ್ಯಕ್ಕೆ ದೂರ: ಹಯ್ಯಾಳ

ಬಸವನಬಾಗೇವಾಡಿ : ಪ್ರಸಕ್ತ ಎಪಿಎಂಸಿ ಚುನಾವಣೆಯಲ್ಲಿ 2ಸ್ಥಾನ ಗೆದ್ದು ಮತ ಗಳಿಕೆಯಲ್ಲಿ ಜೆಡಿಎಸ್‌ 2ನೇ ಸ್ಥಾನದಲ್ಲಿದೆ, ಕಾಂಗ್ರೇಸ್‌- ಬಿಜೆಪಿಯೂಂದಿಗೆ ಒಳ ಒಪ್ಪಂದ ಮಾಡಿಕೂಂಡಿದೆ ಎಂದು ಹೇಳಿ ಜಂಬ ಕೊಚ್ಚಿಕೊಳ್ಳುತ್ತಿರುವ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಹೇಳಿಕೆ ಸತ್ಯಕ್ಕೆ ದೂರಾಗಿದೆ ಎಂದು ಹೂವಿನಹಿಪ್ಪರಗಿ ಕಾಂಗ್ರೇಸ್‌ ಬ್ಲಾಕ್‌ ಅಧ್ಯಕ್ಷ ಎಂ.ಬಿ.ಹಯ್ಯಾಳ (ಸಾಸನೂರ) ಹೇಳಿದರು.

ನಗದು ರಹಿತ ವ್ಯವಹಾರ ಶಿಬಿರ ಯಶಸ್ವಿ

ಜಮಖಂಡಿ: ಸಮೀಪದ ಚಿಕ್ಕಪಡಸಲಗಿ ಗ್ರಾಮದ ಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಶಾಖೆ ಆಲಗೂರ ಹಾಗೂ ಸ್ಥಳೀಯ ಜ್ಞಾನಜ್ಯೋತಿ ಸಾಕ್ಷರತಾ ಕೇಂದ್ರ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಗದು ರಹಿತ ವ್ಯವಹಾರದ ಕುರಿತು ಹಾಗೂ ಬ್ಯಾಂಕಿನ ವಿವಿಧ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ದಿ.23 ರಂದು ಜಮಖಂಡಿ ಶುಗರ್ಸ್‌ನ ಕಬ್ಬು ನುರಿಸುವ ಕಾರ್ಯ ಮುಕ್ತಾಯ

ಜಮಖಂಡಿ: ಸಮೀಪದ ಹಿರೇಪಡಸಲಗಿ-ನಾಗನೂರ ಗ್ರಾಮದ ಕೃಷ್ಣಾ ತೀರ ರೈತ ಸಂಘದ ಜಮಖಂಡಿ ಶುಗರ್ಸ್‌ನ ಕಾರ್ಯಕ್ಷೇತ್ರದಲ್ಲಿಯ ಎಲ್ಲ ಪಕ್ವವಾದ ಮತ್ತು ನೊಂದಾಯಿಸಿದ ಕಬ್ಬು ಮುಗಿದಿರುವ ಕಾರಣ ಕಾರ್ಖಾನೆಯ ಪ್ರಸಕ್ತ 2016-17ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಇದೇ ದಿನಾಂಕ 23 ರಂದು ಮುಕ್ತಾಯ ಗೊಳಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ನ್ಯಾಮಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲ ಕಬ್ಬನ್ನು ಕಬ್ಬು ಕಟಾವು ಆದೇಶ ಪತ್ರಗಳನ್ವಯ ಕಟಾವು ಮಾಡಿ ಇದೇ ದಿನಾಂಕ 22 ರಂದು ಸಾಯಂಕಾಲ 6 ಘಂಟೆಯ ಒಳಗಾಗಿ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ: ಸಾವಳಗಿ

ಜಮಖಂಡಿ: ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿವೆ. ಆದರೆ ಸರ್ಕಾರದ ತಾರತಮ್ಯ ನೀತಿಯಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರ ವರ್ಗದವರು ಅನೇಕ ಸಂಕಟಗಳನ್ನು ಎದುರಿಸುತ್ತಿದ್ದಾರೆ.

ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ

ಜಮಖಂಡಿ: ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ಪ್ರೌಢಶಾಲೆ ಮಕ್ಕಳಿಗಾಗಿ ನಡೆದ ತಾಲ್ಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ನಗರದ ಬಿಎಲ್‌ಡಿಇ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕೀರ್ತಿ ಶಿಂಧೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಅಶೋಕ ಮೀಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದುಡ್ಡಿನ ಆಸೆಗಾಗಿ ದುಷ್ಟತನಕ್ಕೆ ಕೈ ಹಾಕಬೇಡಿ: ದಾನೇಶ್ವರ ಶ್ರೀ

ಜಮಖಂಡಿ: ಧರ್ಮ ಹಾಗೂ ಸತ್ಯದಿಂದ ನಡೆದವರಿಗೆ ಮಠ ಯಾವಾಗಲೂ ಆದರಿಸುತ್ತದೆ. ದೇವರ ಧ್ಯಾನ, ದಾನ-ಧರ್ಮ ಮಾಡುವವರು ನಮ್ಮವರು ಎಂದು ಕ್ಷೇತ್ರ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ನುಡಿದರು.

ಬಸವೇಶ್ವರರ ಮೂರ್ತಿಗೆ ಅವಮಾನ : ನ್ಯಾಯವಾದಿಗಳ ಖಂಡನೆ

ಬಸವನಬಾಗೇವಾಡಿ : ವಿಜಯಪುರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಮಂಗಳವಾರ ಬೆಳಗ್ಗೆ ಪಟ್ಟಣದಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ದೂರುಳಿದು ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.
loading...