Home ಬೆಳಗಾವಿ

ಬೆಳಗಾವಿ

Belgaum city and district news

Kaannadama – Photo News

video
https://youtu.be/2CabhHcXTu8

ಎಲ್ಲ ಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಿಸುವಂತೆ ಆಗ್ರಹ : ಕರವೆಯಿಂದ ಪ್ರತಿಭಟನೆ

video
https://youtu.be/l4JmJKJSZ98   ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಬುಧವಾರದಂದು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮನೆ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧನ

ಮನೆ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧನ ಕನ್ನಡಮ್ಮ ಸುದ್ದಿ-ಬೆಳಗಾವಿ- ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಕ್ಯಾಂಪ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ನಗರದ ಮನೆಗಳ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಖದೀಮ ನಾಜಿಮ್ ಮುಲ್ಲಾ ಕೊತವಾಲ್ ಗಲ್ಲಿ ನಿವಾಸಿಯಾಗಿದ್ದು,ಇತನ ಮೇಲೆ ಮನೆಗಳ್ಳತನದ ಪ್ರಕರಣಗಳು ಬಹಳವಿದ್ದು.ಬಂಧಿತನಿಂದ ೪.೫೦ಲಕ್ಷ ಮೌಲ್ಯದ ೧೫ ತೊಲೆ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯ ವಿರುದ್ದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು.

ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ

ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ ಕನ್ನಡಮ್ಮ ಸುದ್ದಿ- ಬೆಳಗಾವಿ: ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಬುಧವಾರದಂದು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ‌ ಜಾಹೀರಾತು ಫಲಕಗಳು, ಹೋರ್ಡಿಂಗ್,ಅಂಗಡಿ ಮುಗಟ್ಟುಗಳ, ಶಾಲಾ ಕಾಲೇಜ್ ನಾಮಫಲಕ, ರಾಜಕಾರಣಿಯ ಶುಭಾಶಯ ಕಟೌಟಗಳಲ್ಲಿ ಕನ್ನಡವನ್ನು ಬಳಸದೆ ಸರ್ಕಾರವನ್ನು ಸ್ಪಷ್ಟವಾಗಿ ಉಲ್ಲಘಂನೆ ಮಾಡುತ್ತಿದೆ. ಸರ್ಕಾರದ ಆದೇಶ ಪಾಲಿಸಬೇಕಾದ ಪಾಲಿಕೆ ಅಧಿಕಾರಿಗಳಿ ಆದೇಶ ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಎಲ್ಲದರಲ್ಲಿ‌ ಶೇ.೭೫ರಷ್ಟು ಕನ್ನಡವನ್ನು...

ಸಾಲ ಸಿಗದೇ ರೈತರ ಪರದಾಟ: ಸಹಕಾರಿ ಸಂಘಗಳು ಸಂಕಷ್ಟದಲ್ಲಿ

ಕನ್ನಡಮ್ಮ ಸುದ್ದಿ-ಹಾನಗಲ್ಲ: ರೈತರ ಸಾಲಮನ್ನಾಕ್ಕಾಗಿ ಭಾರೀ ಜಟಾಪಟಿ ನಡೆಯುತ್ತಿದೆ. ಆದರೆ, ಇನ್ನೊಂದೆಡೆ ಕಳೆದ ಸಾಲಿನ ಸಾಲಮನ್ನಾದ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡದೆ ಇರುವುದರಿಂದ ಈ ಬಾರಿಯ ಸಾಲ ಸಿಗದೆ ರೈತರು ಪರದಾಡುವಂತಾಗಿದೆ. ತಾಲೂಕಿನಲ್ಲಿ ಒಟ್ಟು 36 ಸಹಕಾರಿ ಸಂಘಗಳಿದ್ದು, 2017-18ನೇ ಸಾಲಿನಲ್ಲಿ ತಾಲೂಕಿನ 34 ಸಹಕಾರಿ ಸಂಘಗಳ ಮೂಲಕ ರೈತರು ಪಡೆದಿದ್ದ ಸಾಲಮನ್ನಾ ಹಣ ರಾಜ್ಯ ಸರ್ಕಾರದಿಂದ ಇದುವರೆಗೂ ಜಮಾ ಆಗಿಲ್ಲ. ಬರೋಬ್ಬರಿ 2ಕೋಟಿ 40 ಲಕ್ಷ ರೂ. ಹಣ ಬಿಡುಗಡೆಯಾಗಬೇಕಿದೆ. ಈ ಹಣ ಬಿಡುಗಡೆಯಾಗದ ಹೊರತು ರೈತರಿಗೆ 2018-19ನೇ ಸಾಲಿನ ಸಾಲ ಕೈಗೆ...

ಬೆಳಗಾವಿ ಮಿನಿ ಬಸ್ ನಿಲ್ಡಾಣಗಳ ಸ್ಥಿತಿ ಅಧೋಗತಿ : (ಸ್ಟೋರಿ ೩)

video
https://youtu.be/eM4loRSr148   ಬೆಳಗಾವಿ ನಗರದ ಬಹುತೇಕ ಮಿನಿ ಬಸ್ ನಿಲ್ಡಾಣಗಳು ದುಸ್ಥಿತಿಗೆ ಒಳಗಾಗಿದ್ದು ಇದರಿಂದಾಗಿ ನಾಗರಿಕರಿಗೆ ತೊಂದರೆ ಆಗುತ್ತಿದೆ. ಬಸ್ ನಿಲ್ದಾಣದಲ್ಲಿ ವಿದ್ಯುತ ದೀಪದ ವ್ಯವಸ್ಥೆಯು ಇಲ್ಲದ ಕಾರಣ ಮಹಿಳೆಯರಿಗೆ ರಾತ್ರಿ ವೇಳೆ ಪ್ರವಾಸ ಮಾಡಲು ಅಭದ್ರತೆ ಕಾಡುತ್ತಿದೆ. ಆದರಿಂದ ಮಹಾನಗರ ಪಾಲಿಕೆಯು ಸದರಿ ನಿಲ್ದಾಣಗಳನ್ನು ಕೂಡಲೆ ದುರುಸ್ತಿ ಮಾಡಿ ಜನರ ಸಮಸ್ಸೆಗೆ ಸ್ಪಂದಿಸಬೇಕಾಗಿದೆ

ವಿಷ ಸೇವನೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ಸವದತ್ತಿ ತಾಲೂಕಿನ ಇಟನಾಳ ಗ್ರಾಮದ ರಾಮಚಂದ್ರ ಈರಪ್ಪಾ ಕುರಣ್ಣವರ ಎಂಬ ೪೫ ವಯಸ್ಸಿನ ವ್ಯಕ್ತಿ ಕುಡಿದ ಮತ್ತಿನಲ್ಲಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದ ಜಿಲ್ಲಾಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ. ವಿಷ ಸೇವಿಸದ ವ್ಯಕ್ತಿ ಕುಡಿದ ಅಮಲಿನಲ್ಲಿ ಬೆಳಿಗಿನ ಜಾವ ೮ ಗಂಟೆಗೆ ವಿಷ ಸೇವಿಸಿದ್ದಾನೆ. ತಕ್ಷಣ ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರಹವಾನಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ ೧೧.೩೦ ಗಂಟೆಗೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಶೇಕ್ ಹೋಮ್ಯುಯೊಪತಿಯ ಹತ್ತಿರದಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಜೂ.೧೯ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.೩ರಂದು ನಿಧನ ಹೊಂದಿದ್ದಾನೆ. ವ್ಯಕ್ತಿಯ ವಯಸ್ಸು ಸುಮಾರು ೫೦ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ದೊರತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಟಿಎಂ ಕೊಠಡಿಯಲ್ಲಿ ಶವವನ್ನು ಇಡಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ ಕನ್ನಡಮ್ಮ ಸುದ್ದಿ -ಬೆಳಗಾವಿ: ನಗರದ‌ ಬೀಮ್ಸ್ ಆಸ್ಪತ್ರೆ ಯಲ್ಲಿ ಹೊರ‌ ಗುತ್ತಿಗೆ ಆದಾರ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಯುವಕನಿಗೆ ಕೆಲ ತಿಂಗಳಿಂದ ವೇತನ‌‌ ನೀಡದಿರುವುದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ನಗರದ ಬಾಕ್ಸೈಟ್ ರಸ್ತೆಯ ನಿವಾಸಿಯಾಗಿರುವ ರಾಕೇಶ ಕಾಂಬಳೆ ಎಂಬ ೨೨ವರ್ಷದ ಯುವಕ ಕೆಲ ತಿಂಗಳಿಂದ ವೇತನ ನೀಡಿದಿರುವುದಕ್ಕೆ ಮನನೊಂದು ಬೆಳಿಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈತ ಕಳೆದ ಒಂದೂವರೆ ವರ್ಷದಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕಾಂಟ್ಯಾಕ್ಟ...
loading...