Home ಬೆಳಗಾವಿ

ಬೆಳಗಾವಿ

Belgaum city and district news

ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ ಚಿಕ್ಕೋಡಿಗೆ 3ನೇ ಸ್ಥಾನ ಇನ್ನೂ ಹಿಂದುಳಿದ ಬೆಳಗಾವಿ

  ಕನ್ನಡಮ್ಮ ಸುದ್ದಿ ಬೆಳಗಾವಿ:12 ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೊಡಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡ ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಕನಸು ನಿರಾಸೆಯಾಗಿದೆ ಚಿಕ್ಕೋಡಿಗೆ 3ನೇ ಸ್ಥಾನ ಲಭಿಸಿದರೇ ಬೆಳಗಾವಿಗೆ 23ನೇ ಸ್ಥಾನ ಸಿಕ್ಕಿದೆ. ಪಿಯುಸಿಯಲ್ಲಿ ಪ್ರಥಮಗಳಿಸಿದ್ದ ಉಡುಪಿ ಜಿಲ್ಲೆಯೇ ಪ್ರಥಮ ಸ್ಥಾನಗಳಿಸಿದೆ. ಬೆಳಗಾವಿ ಈ ಸಲವೂ ಚಿಕ್ಕೋಡಿಗಿಂತ ಹಿಂದೆ ಉಳಿದಿದೆ. ಹೆಸರಾಂತ ಶಿಕ್ಷಣ ಸಂಸ್ಥೆಗಳು ಬೆಳಗಾವಿ ಭಾಗದಲ್ಲಿಯೇ ಕೇಂದ್ರಿಕೃತವಾಗಿದ್ದರೂ ಪ್ರತಿವರ್ಷ ಚಿಕ್ಕೋಡಿಗಿಂತ ಹಿಂದುಳಿಯುವಂತಾಗಲು ಕಾರಣವಾದರು ಏನು ಎಂಬುದು ಎಲ್ಲರಲ್ಲಿ ಕಾಡುತ್ತಿದೆ.

ಪಿಯು ರಿಸಲ್ಟ್ ಪ್ರಕಟ: ಟಾಪ್ 10ನಲ್ಲಿ ಬಾರದ ಕುಂದಾನಗರಿ

  ಕನ್ನಡಮ್ಮ ಸುದ್ದಿ ನಿರೀಕ್ಷೆಯಂತೆ ಈ ಬಾರಿ ಯಾವುದೇ ಗೊಂದಲವಿಲ್ಲದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಜಿಲ್ಲೆ ಪ್ರಥಮಗಳಿಸಿದರೇ ಬೆಳಗಾವಿ ಜಿಲ್ಲೆ ಮಾತ್ರ ಟಾಪ್ 10ರಲ್ಲಿ ಬೆಳಗಾವಿ ಜಿಲ್ಲೆಗೆ 28ನೇ ಸ್ಥಾನ ಬಂದಿದೆ. ಎಂದಿನಂತೆ ಉಡುಪಿ ಜಿಲ್ಲೆ ಅಗ್ರ ಸ್ಥಾನ ಕಾಯುವಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಪರೀಕ್ಷೆಯಲ್ಲಿ ರಾಜ್ಯದ 48 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿತ್ತು. ಈ ಬಾರಿ ಯಾವುದೇ ಅಕ್ರಮಗಳಿಗೆ ಅವಕಾಶ ಮಾಡಿಕೊಡದೆ ಜಿಲ್ಲೆಯಲ್ಲಿ ಸುಸಜ್ಜಿತವಾಗಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದ ಬೆಳಗಾವಿ ಜಿಲ್ಲೆ. ಈ ಬಾರಿ ರಾಜ್ಯದ 10 ಸ್ಥಾನಗಳಲ್ಲಿ ಬರಬಹುದೆಂಬ ನಿರೀಕ್ಷೆಯನ್ನು ಜಿಲ್ಲೆಯ...

ಚಿಕ್ಕೋಡಿ ಎಡಿಎಚ್ಒ ಮುನ್ನಾಳ ಅಮಾನತು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 04: ಅಧಿವೇಶನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಲ್ಲಿಸದ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕುಡಚಿ ಶಾಸಕ ಪಿ. ರಾಜೀವ್ ಅವರು ರಾಯಬಾಗ ತಾಲೂಕಿನ ಕುಡಚಿ ಮತ್ರಕ್ಷೇತ್ರದಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮತಕ್ಷೇತ್ರದಲ್ಲಿ ಜನಸಂಖ್ಯೆಗೆ ಈಗಿರುವ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿವೆಯೇ? ಎಂಬುದು ಸೇರಿದಂತೆ ಇನ್ನೀತರ ಪ್ರಶ್ನೆಗಳನ್ನು ವಿಧಾನಸಭೆಯಲ್ಲಿ ಕೇಳಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತಾಲಯಕ್ಕೆ ಚಿಕ್ಕೋಡಿ ಎಡಿಎಚ್ಒ ಮಾಹಿತಿ...

ಯುಪಿಎಸ್ ಸಿ ಪರೀಕ್ಷೆ ಕಬ್ಬಿನದ ಕಡಲೆಯಲ್ಲ: ನಂದಿನಿ

ಕನ್ನಡಮ ಸುದ್ದಿ ಬೆಳಗಾವಿ ; ಮಾಜಿ ರಾಷ್ಟ್ರಪತಿ ಡಾ. ಕಲಾಂ ಅವರು ಹೇಳಿದ ಹಾಗೇ ಕನಸುಗಳನ್ನು ಕಾಣಿ ಅವು ನನಸಾಗುವುದರ ತನಕ ಬಿಡಬಾರದು ಅಂದಾಗ ಮಾತ್ರ ನಾವು ಹಿಡಿದ ಗುರಿ ತಲುಪಲು ಸಾದ್ಯ ಎಂದು ಐಎಎಸ್ ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೋಲಾರದ ನಂದನಿ ಕೆ.ಆರ್. ಹೇಳಿದರು. ಅವರು ಬುಧವಾರ ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾಡಳಿತದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಗಳಿಸಿದ ಜಾಣ ಜಾಣೆಯರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯುಪಿಎಸ್ ಸಿ ಪರೀಕ್ಷೆ...

ಜನತಾ ಪರಿವಾರದ ನಾಯಕರು ಮರಳಿ ಗೂಡಿಗೆ: ಕುಮಾರಸ್ವಾಮಿ

ಕನ್ನಡಮ್ಮ ಸುದ್ದಿ ಬೆಳಗಾವಿ:11 ಜೆಡಿಎಸ್ ಪಕ್ಷವನ್ನು ಸ್ವತಃ ಮುಖ್ಯಮಂತ್ರಿಗಳೇ ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಕೆಲ ಯಶಸ್ವಿ ಕಂಡರೂ ಅದು ಅವರಿಗೆ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಇಂದಿಲ್ಲಿ ಹೇಳಿದರು. ಅವರು ಗುರುವಾರ ನಗರದ ಹೊರ ವಲಯದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಮೂಲ ಜನತಾ ದಳದ ಪಕ್ಷದಲ್ಲಿ ಇದ್ದು ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನು ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕಂಡರೂ ಅದು ಪ್ರಯೋಜನವಾಗುವುದಿಲ್ಲ ಎಂದರು. ಭ್ರಷ್ಟಾಚಾರ ಮುಕ್ತ ಆಡಳಿತ...

ಕಿಷ್ಕಿಂದೆಯಂತಾಗಿರುವ ಬೆಳಗಾವಿ ಹಿಂದಕ್ಕೆ ಸಾಗಲು ಜನಪ್ರತಿನಿಧಿಗಳೇ ಕಾರಣ ! – ಸ್ಮಾರ್ಟ್ ಬೆಳಗಾವಿಯಾಗುವುದು ಬೇಡವೇ – ಇಲ್ಲಿ ಎಲ್ಲಕ್ಕೂ ಅಡ್ಡಗಾಲು

ಕನ್ನಡಮ್ಮ ವಿಶೇಷ ಬೆಳಗಾವಿ:19 ಬೆಳಗಾವಿ ಮಹಾನಗರ ಪಾಲಿಕೆ ವಾರದ ಹಿಂದೆ ನಡೆಸಿದ ಭಾರೀ ಕಾರ್ಯಾಚರಣೆ ನಗೆಪಾಟಲಿಗೀಡಾಗಿದೆ. ಬೇಸ್‍ಮೆಂಟ್ ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಪಾಲಿಕೆಯ ಅಧಿಕಾರಿಗಳು ಆರಂಭ ಶೂರತ್ವ ತೋರಿಸಿರುವುದು ಬೆಳಗಾವಿ ಜನತೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಖಡೇಬಜಾರ, ಮಾರುತಿಗಲ್ಲಿ, ಗಣಪತಿಗಲ್ಲಿಯಲ್ಲಿ ಏಕಕಾಲಕ್ಕೆ ವಿವಿಧ ತಂಡಗಳಾಗಿ ಪಾಲಿಕೆ ಕೈಗೊಂಡ ಕಾರ್ಯಾಚರಣೆ ವ್ಯಾಪಾರಿಗಳ ಪಾಲಿಗೆ ನಡುಕ ಹುಟ್ಟಿಸಿತ್ತು. ಆದರೆ ಅಷ್ಟೇ ವೇಗದಲ್ಲಿ ತಾನು ಕೈಗೊಂಡ ಕಾರ್ಯಾಚರಣೆಯಿಂದ ಪಾಲಿಕೆ ಹಿಂದೆ ಸರಿದಿರುವುದು ಬೆಳಗಾವಿ ಪಾಲಿಕೆಯಿಂದ ಯಾವ ಕೆಲಸವೂ ಆಗದು ಎನ್ನುವುದನ್ನು ಮತ್ತೇ ತೋರ್ಪಡಿಸಿದೆ. ಒಂದೇ ದಿನಕ್ಕೆ ರಾಜಾರೋಷದಲ್ಲಿ ಇಂಥ ಕಾರ್ಯಾಚರಣೆ...

ಜಿಪಂ ಸದಸ್ಯರು ಸೇರಿ ಹಲವು ತಾಲೂಕು ಪಂಚಾಯ್ತಿ ಸದಸ್ಯರು ಶೀಘ್ರ ಜೆಡಿಎಸ್ ಸೇರ್ಪಡೆ

.ಕನ್ನಡಮ್ಮ ಸುದ್ದಿ ಬೆಳಗಾವಿ : 25 ಕಾಗತಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಿದಗೌಡ ಸುಣಗಾರ, ಸೇರಿದಂತೆ ಹಲವಾರು ಜನ ಶೀಘ್ರವೇ ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಕಾಗತಿ ಗ್ರಾಮ ಯಮಕನಮರ್ಡಿ ಮೀಸಲು ಕ್ಷೇತ್ರವಾದ್ದರಿಂದ ಪಕ್ಕದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶಿದಗೌಡ ಸುಣಗಾರ , ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಆಗಿರುವ ಶಿದಗೌಡ ಸುಣಗಾರ ಹಿಂದೆ ,ಲಕ್ಷ್ಮಿ ಹೆಬ್ಬಾಳಕರ ಅವರ ವಿರುದ್ಧ ಬಂಡಾಯವಾಗಿ ಸ್ಪರ್ದೇ ಮಾಡಿದ್ದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಮಾಜಿ ಸಚಿವ...

ಸಹೋದರನಿಗೆ ಟಾಂಗ್ ಕೊಟ್ಟ ಶಾಸಕ ಸತೀಶ

ಕನ್ನಡಮ್ಮ ಸುದ್ದಿ ಬೆಳಗಾವಿ ;18 ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಇತಿ ಮಿತಿಯೋಳಗೆ ಇದ್ದರೆ ಸಚಿವ ಸ್ಥಾನಕ್ಕೊಂದು ಗೌರವ. ಅವರು ಬೇರೆಯವರಿಗೆ ಟಿಕೆಟ್ ಇಸಿದುಕೊಂಡುವುದಕ್ಕಿಂತ ಅವರು ಗೋಕಾಕ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯಾಸ ಪಡಬೇಕಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ತಿರಗೇಟು ನೀಡಿದರು. ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾವು ಯಾವುದೇ ಕಾರಣಕ್ಕೂ ಯಮಕನಮರಡಿ ಕ್ಷೇತ್ರವನ್ನು ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು ರಾಯಚೂರು ಗ್ರಾಮೀಣ ಒಂದೇ ಕ್ಷೇತ್ರಯಾಕೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದಲ್ವಾ...

ಐವರು ನಕಲಿ ಪತ್ರಕರ್ತರನ್ನು ಬಂಧಿಸಿದ ಎಪಿಎಮ್‍ಸಿ ಪೊಲೀಸರು

ಕನ್ನಡಮ್ಮ ಸುದ್ದಿ ಬೆಳಗಾವಿ:5 ನಗರದ ಫಾರ್ಮಸಿ ಕಾಲೇಜಿನ ಎರಡನೇ ವರ್ಷದ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿ ಅವರ ಮೇಲೆ ಹಲ್ಲೆ ಮಾಡಿ ಪತ್ರಕರ್ತರೆಂದು ಬ್ಲಾಕ್ ಮೇಲ್ ಮುಖಾಂತರ 30 ಸಾವಿರಕ್ಕೂ ಹೆಚ್ಚು ಹಣದ ಬೇಡಿಕೆಯಿಟ್ಟು ಮಾಧ್ಯಮಗಳಲ್ಲಿ ನಿಮ್ಮ ಮರ್ಯಾದೆ ಹರಾಜ ಹಾಕಲಾಗುವುದು ಎಂದು ಬೇದರಿಸಿದ್ದ ಐವರನ್ನು ಎಪಿಎಮ್‍ಸಿ ಪೊಲೀಸ್‍ರು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡೆಸಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ನಗರದಲ್ಲಿ ಬ್ಲ್ಯಾಕ್ ಮೇಲ್ ನಡೆಸುವ ತಂಡಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಹಾಕಿತ್ತು. ಅದರಂತೆ ಶುಕ್ರವಾರ ಪಾರ್ಮಸಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು...

ಕಳೆದುಕೊಂಡಿದ್ದಕಿಂತ ಹೆಚ್ಚಿನದನ್ನು ಪಡೆದ ಜಾರಕಿಹೊಳಿ ಬ್ರದರ್ಸ್- ಒಬ್ಬರು ರಾಜ್ಯ-ಮತ್ತೊಬ್ಬರು ರಾಷ್ಟ್ರ ರಾಜಕಾರಣಕ್ಕೆ – ನಿಗೂಢವಾಗುತ್ತಿದೆ ಲಖನ್ ರಾಜಕೀಯ ನಡೆ

ಕನ್ನಡಮ್ಮ ಸುದ್ದಿ ಬೆಳಗಾವಿ 30: ಗಡಿಜಿಲ್ಲೆಯಲ್ಲಿ ಮಾಸ್ಟರ ಮೈಂಡ್ ಅಂತಲೇ ಖ್ಯಾತಿ ಗಳಿಸಿರುವ ಸತೀಶ ಜಾರಕಿಹೊಳಿ ಕಳೆದುಕೊಂಡದ್ದಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ಹುಟ್ಟುಹಾಕಿ ಗೆಲುವಿನ ನಗೆ ಬೀರಿದ್ದಾರೆ. ಹೌದು, ಸಚಿವ ಸ್ಥಾನ ಬಿಟ್ಟುಕೊಟ್ಟ ಬಳಿದ ತನ್ನದೇ ಸೈದ್ಧಾಂತಿಕ ರಾಜಕಾರಣ ಆರಂಭಿಸಿದ್ದ ಸತೀಶ ಜಾರಕಿಹೊಳಿ ಎಐಸಿಸಿ ಪ್ರಧಾನ ಕಾರ್ಯದಶಿ೯ ಹುದ್ದೆ ದೊರೆತಿರುವುದು ಸಾಮಾನ್ಯ ವಿಷಯವೇನಲ್ಲ. ಕಳೆದ ಸುಮಾರು ತಿಂಗಳಿನಿಂದ ಸಹೋದರರ ಮುನಿಸು ಜಿಲ್ಲೆಯಲ್ಲಿ ವಿಚಿತ್ರ ರೂಪ ಪಡೆದುಕೊಂಡಿತ್ತು. ಆದರೆ ಸತೀಶ ಜಾರಕಿಹೊಳಿ ಮಾತ್ರ ಎಲ್ಲವನ್ನು ಅಳೆದು ತೂಗುವ ಮೂಲಕ...
loading...