Home ಬೆಳಗಾವಿ

ಬೆಳಗಾವಿ

Belgaum city and district news

ಸೌಧಕ್ಕೆ ಮುತ್ತಿಗೆ, ಲಾಠಿಚಾರ್ಜ್, ಕಲ್ಲು ತೂರಾಟ

ಎಸ್ಪಿ ಸೇರಿ ಅನೇಕ ಪೊಲೀಸರಿಗೆ ಗಾಯ ಬೆಳಗಾವಿ, ಡಿ.11: ಸುವರ್ಣ ಸೌಧದ ಗೇಟನ್ನುಮುರಿದು ಒಳ ನುಗ್ಗಲು ಯತ್ನಿಸಿದ ಮಾದಿಗ ದಂಡೋರ ಸಮಾಜದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಅದನ್ನು ಪ್ರತಿಭಟಿಸಿ ಕಲ್ಲು ತೂರಾಟ ನಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ್ ಸೇರಿದಂತೆ 20 ಕ್ಕೂ ಪೊಲೀಸರು ಕಲ್ಲೇಟು ತಿಂದು ಗಾಯಾಗೊಂಡಿದ್ದಾರೆ. ನ್ಯಾಯಮೂರ್ತಿ ಏ.ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿ ಮಂಗಳವಾರ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ಮಾದಿಗ ಸಮುದಾಯ ಹಾಗೂ ವಿವಿಧ ಹಿಂದುಳಿದ ಸಮುದಾಯ ಜನ  

ರಾಮದುರ್ಗ ನಾಗರಿಕರ ಗಮನಕ್ಕೆ

ಬೆಳಗಾವಿ:ಜೂನ್:8:(ಕರ್ನಾಟಕ ವಾರ್ತೆ): ರಾಜ್ಯದಲ್ಲಿ 2 ಹಂತಗಳಲ್ಲಿ ತೆಗೆದುಕೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ-2011 ಮುಕ್ತಾಯದ ಹಂತ ತಲುಪಿದೆ. ಈಗ ಮೇಲ್ವಿಚಾರಕರಿಂದ ಮರುಪರೀಶೀಲನಾ ಕಾರ್ಯ ನಡೆದಿದೆ. ಈ ಹಂತದಲ್ಲಿ ಗಣತಿ ವೇಳೆ ಉಪಸ್ಥಿತರಿಲ್ಲದ ಕುಟುಂಬಗಳ ಮನೆಗಳು/ ಬೀಗ ಹಾಕಿದ ಮನೆಗಳು/ ದೂರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕುಟುಂಬಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಗಣತಿ ಅಂಕಿ ಅಂಶಗಳ ಕರಡು ಪಟ್ಟಿಯನ್ನು ಜೂನ್ 15 ರ ನಂತರ ಪ್ರಕಟನೆ ಮಾಡಲಾಗುತ್ತದೆ.ಸಾರ್ವಜನಿಕ ಸಾಮಾಜಿಕ, ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛೆಪಡದ ಕುಟುಂಬಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ...

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕೃಷಿ ಇಲಾಖೆಯಿಂದ ಚೆಕ್ ವಿತರಣೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬಾಬು ಮರ್ಯಾಕಾಚೆ ಹಲಗಾ ಗ್ರಾಮದ ರೈತನ್ನು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ ಅವನ ಶಾಸಕ ಸಂಜಯ ಪಾಟೀಲ, ಕೃಷಿ ಇಲಾಖೆಯಿಂದ ಅವನ ಪತ್ನಿ ಶಾಂತಾ ಬಾಬು ಮರ್ಯಾಕಾಚೆ ರೂ.5 ಲಕ್ಷ ಕೃಷಿ ಇಲಾಖೆ ಚೆಕ್ಕನ್ನು ಹಸ್ತಾಂತರಿಸಿದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಜಿ.ಬಿ.ಕಲ್ಯಾಣಿ ಇವರು ಉಪಸ್ಧಿತರಿದ್ದರು.

ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ:16 ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಜತ್ತ ಜಾಂಬೊಟಿ ರಸ್ತೆ ಕಾಮಗಾರಿಗೆ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ಸಂಸದ ಸುರೇಶ ಅಂಗಡಿ ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕ ಸಂಜಯ ಪಾಟೀಲ, ಎಸ್ಹೆಚ್ಡಿಪಿ ಯೋಜನೆಯಲ್ಲಿ 4 ಕೋಟಿ 13 ಲಕ್ಷ ರೂ.ಗಳು ಮಂಜುರಾಗಿದ್ದು, ಬಹು ವರ್ಷಗಳಿಂದ  ಗ್ರಾಮದ ರಸ್ತೆ ದುರಸ್ಥಿಯ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದರು. ಆದರೆ ಕಾರ್ಯ ಸ್ವಲ್ಪ ವಿಳಂಬವಾಗಿದ್ದೆ ಮುಂದಿನ ದಿನಗಳಲ್ಲಿ ಅಕ್ಕ ಪಕ್ಕದ ಗ್ರಾಮವನ್ನು ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಂಜು ಧರೆಣ್ಣವರ,...

ವಿರುಪಾಕ್ಷ ಶಿವಾಚಾರ್ಯರ 28 ನೇ ಪುಣ್ಯ ಸ್ಮರಣೋತ್ಸವ

(ಹುಕ್ಕೇರಿ ಕಾರ್ಯಾಲಯದಿಂದ) ಹುಕ್ಕೇರಿ 28  :  ಇಲ್ಲಿಯ ಹಿರೇಮಠದ ಲಿಂ. ವಿರುಪಾಕ್ಷ ಶಿವಾಚಾರ್ಯರ 28 ನೇ ಪುಣ್ಯಸ್ಮರಣೋತ್ಸವ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಆಚರಿಸಲಾಯಿತು. ಎಂ.ಚಂದರಗಿಯ ವೀರಭದ್ರ ಶಿವಾಚಾಯ್ ಸ್ವಾಮಿಗಳು ಮಾತನಾಡಿ ಮಠಾಧ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಮ್ಮ ಗುರುಗಳಾದ ವಿರುಪಾಕ್ಷ ಶಿವಾಚಾರ್ಯರ ಹೆಸರು ನಿರಂತರವಾಗಿ ಉಳಿಯಲು ಅವರ ಸಾಧನೆಯನ್ನು ಮೈಗೂಡಿಸಿಕೊಂಡು ವಿರುಪಾಕ್ಷಲಿಂಗ ಸಂಸ್ಕ್ಕತ ಪಾಠಶಾಲೆಯನ್ನು ಆರಂಭಿಸುತ್ತಿರುವದು ತಮಗೆ ಸಂತಸ ತಂದಿದೆಯೆಂದರು. ರೇಣುಕ ಜ್ಯೌತಿ ಮಾಸ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಜಾನನ ಮನ್ನಿಕೇರಿಯವರು ಗುರುವಿನ ಸಾನಿಧ್ಯದಲ್ಲಿ ಬೆಳೆದು ಬದುಕು ಕಾಣುವದು...

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ

ಬೆಳಗಾವಿ: 03 : ಪ್ರಸಕ್ತ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಇದೇ ಅ.27ಕ್ಕೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ 6 ರಂದು ಮಧ್ಯಾಹ್ನ 3.30 ಗಂಟೆಗೆ ಹಳೆಯ ಜಿಲ್ಲಾ ಪಂಚಾಯತ ಕಟ್ಟಡದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಯಂತಿ ಆಚರಣೆ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರು, ಹಾಗೂ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಪೂರ್ವಭಾವಿ ಸಭೆ ಕರೆಯಲಾಗಿದೆಯೆಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲಿ ತಿಳಿಸಿದ್ದಾರೆ. ವಿಭನೆ

ಮರಾಠಿ ಮೇಳಾವಾ ಯಶಸ್ಸುಗೊಳಿಸಲು ಕುಟಿಲ ತಂತ್ರವೇ ….?

ಇದೇ ಮೇ ತಿಂಗಳ ದಿ.20ರಂದು ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಎಂಇಎಸ್ ಪ್ರೇರಿತ ವಿವಿಧ ಸಂಘಟನೆಗಳು ವರ್ಷದ ಅಸಂಬದ್ಧ ಸಂಪ್ರದಾಯದಂತೆ ಕನ್ನಡ ವಿರೋಧಿ ಮೇಳಾವಾ ನಡೆಸುತ್ತಿವೆ. ಈ ಮೇಳಾವಾಕ್ಕೆ ಬಹುತೇಕ ಪ್ರಜ್ಞಾವಂತ ಮರಾಠಿಗರ ಬೆಂಬಲವಿಲ್ಲ. ಇದು ಕೇವಲ ಎಂಇಎಸ್ಗೆ ಹಾಗೂ ಕನ್ನಡ ವಿರೋಧಿಗಳಿಗೆ ಬೇಕಾದ ಮೇಳಾವಾ ಆಗಿರುವುದರಿಂದ ಇದನ್ನು ಯಶಸ್ವಿಗೊಳಿಸಬೇಕು ಎನ್ನುವ ಕುಟಿಲ ತಂತ್ರವೇ ಶುಕ್ರವಾರ ಸುಟ್ಟು ಹಾಕಿದ ಕನ್ನಡ ಬಾವುಟದ ಘಟನೆಯಾಗಿರುಬಹುದು ಎನ್ನುವ ಸಂಶಯಗಳು ಬಹುತೇಕ ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕನ್ನಡ ಬಾವುಟವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಕನ್ನಡ...

ದೈಹಿಕ ಶಿಕ್ಷಕರ ಪದಾಧಿಕಾರಿಗಳ ನೇಮಕ

ಬೈಲಹೊಂಗಲ : 09 ತಾಲೂಕಿನ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಎಂದು ದೈಹಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷ, ಶಾಸಕರ ಮಾದರಿ ಮತಕ್ಷೇತ್ರ ಶಾಲೆ ನಂ.4ರ ದೈಹಿಕ ಶಿಕ್ಷಕ ಬಸವರಾಜ ಭರಮನ್ನವರ ತಿಳಿಸಿದ್ದಾರೆ. ವನ್ನೂರ ಶಾಲೆಯ ಎಸ್.ಆಯ್.ಮಿರ್ಜನ್ನವರ ಗೌರವ ಅಧ್ಯಕ್ಷರಾಗಿ, ಮೂಗಬಸವ ಶಾಲೆ ಬಿ.ಎಸ್.ಜಕಾತಿ ಉಪಾಧ್ಯಕ್ಷರಾಗಿ, ನಯಾನಗರದ ಜಿ.ಬಿ.ಪಟ್ಟಣಶೆಟ್ಟಿ ಪ್ರಧಾನ ಕಾರ್ಯದರ್ಶಿಗಳಾಗಿ, ದೇವಲಾಪೂರದ ಎಸ್.ಎ.ಪೆಂಡಾರಿ ಖಜಾಂಚಿಯಾಗಿ, ಎಂ.ಆಯ್.ಕುರಿ ಸಹ ಕಾರ್ಯದರ್ಶಿ, ಕೆಂಗಾನೂರದ ಎಂ.ಜಿ.ನಾಗಣ್ಣವರ ಸಂಘಟನಾ ಕಾರ್ಯದರ್ಶಿಯಾಗಿ, ಜಿ.ಬಿ.ಚಿಕ್ಕೊಪ್ಪ, ಎಸ್.ಎಸ್.ಅಂತರಗಟ್ಟಿ, ಎಂ.ಕೆ.ಮಾಡಗೇರಿ, ಎ.ಆರ್.ಸುಂಕದ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆಂದು ಅಧ್ಯಕ್ಷ ಬಸವರಾಜ...

ಭಾವುರಾವ ಕಾಕತಕರ ಕಾಲೇಜು ಕಬ್ಬಡ್ಡಿ ಚಾಂಪಿಯನ್

ಕನ್ನಡಮ್ಮ ಸುದ್ದಿ ಬೆಳಗಾವಿ: ಇಲ್ಲಿಯ ಭಾವುರಾವ ಕಾಕತಕರ ಕಾಲೇಜಿನ ಪುರುಷರ ಕಬ್ಬಡ್ಡಿ ತಂಡವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ವಿಭಾಗೀಯ ಮಟ್ಟದ ಕಬ್ಬಡ್ಡಿ ಪಂದ್ಯದಲ್ಲಿ ಚಾಂಪಿಯನ್‍ಶಿಪ್ ಪದವಿಗೆ ಪಾತ್ರವಾಗಿದೆ. ಈ ಪಂದ್ಯಗಳು ಜಿ.ಎಸ್.ಎಸ್. ಕಾಲೇಜಿನಲ್ಲಿ ಈಚೆಗೆ ಜರುಗಿದ್ದವು. ಈ ಪಂದ್ಯಗಳಲ್ಲಿ ಬೆಳಗಾವಿ ವಿಭಾಗ ಮಟ್ಟದ ಹನ್ನೊಂದು ಕಾಲೇಜುಗಳು ಭಾಗಿಯಾಗಿದ್ದವು. ಕಾಕತಕರ ಕಾಲೇಜು ಸೆಮಿಫೈನಲ್‍ನÀಲ್ಲಿ ಖಾನಾಪುರದ ಮರಾಠಾ ಮಂಡಳ ಕಾಲೇಜನ್ನು ಪರಾಭವಗೊಳಿಸಿ ಅಂತಿಮ ಪಂದ್ಯಕ್ಕೆ ಲಗ್ಗೆಯಿಟ್ಟಿತು.ಅಂತಿಮ ಹಣಾಹಣಿಯಲ್ಲಿ ರಾಮದುರ್ಗದ ಸಿ.ಎಸ್.ಬಿ.ಕಲಾ ಮತ್ತು ಎಸ್.ಆರ್.ಪಿ ಹಾಗೂ ಜೆ.ಎಲ್.ಆರ್ ವಾಣಿಜ್ಯ ಕಾಲೇಜಿನ ತಂಡವನ್ನು 26 ಅಂಕಗಳಿಂದ ಸೋಲಿಸಿ ಜಯಶಾಲಿಯಾಯಿತು. ತಂಡದಲ್ಲಿ ಕಾರ್ತಿಕ...

ಕೊಡಚವಾಡದಲ್ಲಿ ರೈತನ ಆತ್ಮಹತ್ಯೆ

  ಖಾನಾಪುರ 9: ತಾಲೂಕಿನ ಕೊಡಚವಾಡ ಗ್ರಾಮದ ರೈತ ಚಂದ್ರಶೇಖರ ಪೂಜಾರ (55) ಮಂಗಳವಾರ ಗಿಡಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 6.5 ಎಕರೆ ಹೊಲ ಹೊಂದಿದ್ ಅವರು ವಿವಿಧೆಡೆ 3.5 ಲಕ್ಷಗಳಷ್ಟು ಸಾಲ ಪಡೆದಿದ್ದರು. ಚಂದ್ರಶೇಖರ ಅವರ ಕುಟುಂಬದ ಸದಸ್ಯರು ಅವರಿಗೆ ಮಾನಸಿಕ ತೊಂದರೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಅವರು ಸಾವಿಗೆ ಶರಣಾಗಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...