ಬೆಳಗಾವಿ

Belgaum city and district news

ಸಿದ್ದು ಸರ್ಕಾರದಲ್ಲಿನ ಸಚಿವರ ಪ್ರಯಾಣ ಭತ್ಯೆ ಕೇಳಿದರೆ ಬೆಚ್ಚಿ ಬಿಳತಿರಾ…!

video
https://youtu.be/xRvAg4JEaOA ಕಳೆದ ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಸಚಿವರು ಪ್ರಯಾಣ ಭತ್ಯೆಗಾಗಿ ಸುಮಾರು 24ಕೋಟಿ ಹಣ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ.ಸಾರ್ವಜನಿಕರ ಹಣ ದುಂದು ವೆಚ್ಚ ಮಾಡುತ್ತಿದ್ದು,ಈ ಬಗ್ಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪ್ರಯಾಣದ ವಿವರವನ್ನು‌ ಸಂಗ್ರಹಿಸುತ್ತಿದ್ದು,ಅವು ದೊರೆತ ಮೇಲೆ ಹೆಚ್ಚಿನ ತನಿಖೆಗೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಕರಣವನ್ನು‌ ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ತಿಳಿಸಿದ್ದಾರೆ.

ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್

video
https://youtu.be/ltC0WqK_JPg ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರತಿಭಟನೆ ನಡೆಸಿದ್ದು, ನಗರದಲ್ಲಿ ನಿರಸಪ್ರತಿಕ್ರಿಯೆ ವ್ಯಕ್ತವಾಗಿದೆ.

Special Interview With SHALINI RAJNEESH ( IAS ) || 10- 09- 2018 || Kannadamma News

video
https://www.youtube.com/watch?v=Aq9VokKt0ac ಇಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಬೆಳಗಾವಿ ವಿಭಾಗದ ಸಭೆ ನಡೆಸಿದ ಅವರು ಶಾಲೆಗಳ ದುರಸ್ತಿ ಮತ್ತು ಹೊಸ ಕಟ್ಟಡಗಳ ನಿರ್ಮಾಣ ಮಾಹಿತಿ ಪಡೆದರು.ಶಾಲೆ ದುರಸ್ತಿ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ .

ನೂತನ ಲೋಕಮಾನ್ಯ ತಿಲಕ ಗಣೆಶೋತ್ಸವ ಮಹಾ ಮಂಡಳ ಆರಂಭ

video
https://youtu.be/ZMnZ_PqmIxU ಈಗಾಗಲೇ ಬೆಳಗಾವಿಯಲ್ಲಿ 354 ಮಹಾ ಮಂಡಳ ಅದರ ಜೊತೆಗೆ ಸ್ವಂತದಾಗಿ ನೂತನವಾಗಿ ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳ ನಗರದಲ್ಲಿ ರಚನೆಯಾಗಿದೆ ಎಂದು ವಿಜಯ ಜಾಧವ ಹೇಳಿದರು.

ಸಿಎಂ ಆಗಲು ಇನ್ನೂ ಕಾಲಾವಕಾಶ ಇದೆ:ಸತೀಶ್ ಜಾರಕಿಹೊಳಿ

video
https://youtu.be/zOfMd59FZiw ಸಿಎಂ ಆಗಲು ಇನ್ನೂ ಕಾಲಾವಕಾಶ ಇದೆ. ರಮೇಶ ಜಾರಕಿಹೊಳಿ ಹೇಳಿರುವ ಮಾತು ಮುಂದಿನ ಹತ್ತು ವರ್ಷಗಳಲ್ಲಿ ಆಗಬಹುದು. ಅದನ್ನು ಚರ್ಚೆ ಮಾಡುತ್ತೇವೆ ಎಷ್ಟು ಜನ ಬೆಂಬಲ ಸೂಚಿಸುತ್ತಾರೋ ಕಾದು ನೋಡೋಣ ಎಂದರು ಮಾಧ್ಯಮ ಜೊತೆ ಮಾತನಾಡಿದ ಅವರು ಬರುವ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವ ಮನಸ್ಸು ಇಲ್ಲ. ಆದರೆ ಹೈಕಮಾಂಡ್ ನಿರ್ಣಯ ತೆಗೆದುಕೊಂಡರೆ ನೋಡೋಣ ಎಂದರು.

ಸೆ.29ರಂದು ಡಾ.ವಿಷ್ಣು ವರ್ಧನ ಗಾನ ಸಿರಿ ಕಾರ್ಯಕ್ರಮ: ನಿವೇದಿತಾ

video
https://youtu.be/v5fxYOx_mTQ ಡಾ.ವಿಷ್ಟುವರ್ಧನ ಅವರ ಜನ್ಮ‌ದಿನದ ಸವಿನೆನಪಿಗಾಗಿ ಅವರ ಚಲನಚಿತ್ರ ಆಯ್ದ ಸುಮಧುರ ಗೀತೆಗಳ ಡಾ.ವಿಷ್ಣು ವರ್ಧನ ಗಾನ ಸಿರಿ ಎಂಬ ಶಿರ್ಷೀಕೆಯಡಿ ಸೆ.29ರಂದು ರಾಮನಾಥ ಮಂಗಲ‌ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಿವೇದಿತಾ ಚಂದ್ರಶೇಖರ ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಸುವರ್ಣಸೌಧದಲ್ಲಿ ಇಲಾಖೆ ಕಾರ್ಯ ಆರಂಭದ ನಂತರವೇ ಸ್ವಾಮಿಜೀಗಳ ಪ್ರವೇಶ ಮಾಡುತ್ತೆವೆ: ಚಂದ್ರಶೇಖರ ಶ್ರೀ

video
https://youtu.be/XEOWF46oqCU ಬೆಳಗಾವಿ ಸುವರ್ಣಸೌಧ ದಲ್ಲಿ ಇಲಾಖೆಗಳ ಕಾರ್ಯ ಆರಂಭವಾಗುವವರೆಗೂ ಉ.ಕ.ಸ್ವಾಮಿಗಳು ಸುವರ್ಣಸೌಧ ಪ್ರವೇಶ ಮಾಡಬಾರದೆಂಬ‌ ನಿರ್ಣಯ ತೆಗೆದುಕೊಂಡಿದ್ದೆವೆ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ :ಯಾರ ಗೆಲವು ಅಲ್ಲ ಪಕ್ಷದ ಗೆಲವು :ಪಿಎಲ್ ಡಿ ಬ್ಯಾಂಕ್ ಬಗ್ಗೆ ಸತೀಶ ಪ್ರತಿಕ್ರಿಯೆ

video
https://youtu.be/EP2y8ZsZVr0 ಇಂದು ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಯಮಕನಮರಡಿ ಬ್ಲಾಕ್ ಬೂತ್ ಮಟ್ಟದ ಅದ್ಯಕ್ಷ ಕಾರ್ಯಗಾರ ಸಭೆಯ ಆಗಮಿಸಿದ ಅವರು ನಿನ್ನೆ ನಡೆದ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲವು ನಮ್ಮ ಗೆಲವು ಅಲ್ಲ ಲಕ್ಷ್ಮಿ ಹೆಬ್ಬಾಳಕರ್ ಗೆಲವು ಅಲ್ಲ ,ಇದು ಕಾಂಗ್ರೆಸ್ ಪಕ್ಷದ ಗೆಲವು ಎಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಬಗ್ಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಸ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದರು .

ಶುಕ್ರವಾರ ಲಕ್ಷ್ಮಿ ಗೆ ಒಲಿದ ವಿಜಯದ ಮಾಲೆ :ಪಿಎಲ್ ಡಿ ಬ್ಯಾಂಕ್ ಹೆಬ್ಬಾಳಕರ್ ವಶಕ್ಕೆ.

video
https://youtu.be/hDw4Lz9KC0M ತೀವ್ರ ಕೂತುಹಲ ಮೂಡಿಸಿದ ಬೆಳಗಾವಿ ತಾಲೂಕಿನ ಪಿಎಲ್ ಬ್ಯಾಂಕ್ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣಾ ಇಂದು ನಡೆಯಿತು.ಮುಂಜಾನೆಯಿಂದ ನಗರದ ಪಿಎಲ್ ಡಿ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು .ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ನಾಯಕರ ಪ್ರತಿಷ್ಠೆ ಪಣವಾಗಿತ್ತು ,ಚುನಾವಣಾ ಕೇಂದ್ರದ ಸುತ್ತಲೂ ಪೋಲಿಸ ಬೀಗಿ ಬಂದೂಬಸ್ತ ಒದಗಿಸಲಾಗಿತ್ತು .ಆಯ್ಕೆ ನಂತರ ಪ್ರವಾಸಿ ಮಂದಿರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಮಾತನಾಡಿ ಜಿಲ್ಲೆಯ ಎಲ್ಲ ನಾಯಕರು ಒಗಟ್ಟಾಗಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ,ಈ ಚುನಾವಣಾಯಿಂದ ರಾಜ್ಯ ಸರಕಾರಕ್ಕೆ ಯಾವುದೆ ತೊಂದರೆಯಿಲ್ಲ ಎಂದು ತಿಳಿಸಿದರು...

ಮದ್ಯದ ಅಂಗಡಿಗೆ ಪರವಾನಿಗೆ ಬೇಡಾ: ದೇವೆಂದ್ರ ನಗರದ ನಿವಾಸಿಗಳ ಪ್ರತಿಭಟನೆ

video
https://youtu.be/WcL10LsvhmU ನಗರದ ಉದ್ಯಮಬಾಗದ ಖದರೇವಾಡಿ ರಸ್ತೆ ಪಕ್ಕ ಹೊಸದಾಗಿ ಆರಂಭವಾಗುತ್ತಿರುವ ವೈನ್ ಶಾಪ್ ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಶುಕ್ರವಾರ ದೇವೆಂದ್ರ ನಗರದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
loading...