ಬೆಳಗಾವಿ

Belgaum city and district news

ಪರಿಶಿಷ್ಟರಿಗೆ ಮೀಸಲಾತಿ ನೀಡಲು ಗಡಿನಾಡು ಕನ್ನಡ ಸೇನೆ ಒತ್ತಾಯ

ರಾಮದುರ್ಗ: ರಾಮದುರ್ಗ ವಿಧಾನ ಸಭಾ ಕ್ಷೇತ್ರವನ್ನು ಪರಿಶಿಷ್ಠ ಜಾತಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಗಡಿನಾಡು ಕನ್ನಡ ಸೇನೆಯ ತಾಲೂಕಾ ಘಟಕದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ ಮೂಲಕ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲುಕಾಗಿರುವ ರಾಮದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಪರಿಶಿಷ್ಠ ಜಾತಿಯ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ವರೆಗೆ ಆಯ್ಕೆಯಾದ ಎಲ್ಲ ಪಕ್ಷಗಳ ಶಾಸಕರು ಪರಿಶಿಷ್ಠರ ಅಭಿವೃದ್ದಿಗೆ ಪ್ರಾಮಾಣಿಕ ಕೆಲಸ ಮಾಡಿರುವದಿಲ್ಲ ಮತ್ತು ರಾಮದುರ್ಗದಲ್ಲಿ ಪರಿಶಿಷ್ಟ ಜಾತಿಯ ಜನಪ್ರತಿನಿಧಿಗಳು ಹೆಚ್ಚೆಂದರೆ ಪುರಸಭೆ ಅಧ್ಯಕ್ಷರಾಗಿದ್ದಾರೆ ಕಾರಣ ರಾಂದುರ್ಗ ತಾಲೂಕನ್ನು ಬರುವ ವಿಧಾನ...

ವಿಚಾರಣಾಧೀನ ಕೈದಿ ನೇಣಿಗೆ ಶರಣು

ಬೆಳಗಾವಿ : 26 ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ವಿಚಾರಾಧೀನ ಕೈದಿಯೋರ್ವ ಜೈಲಿನಲ್ಲಿ ನೇಣಿಗೆ ಶರಣಾದ ಘಟನೆ ಶನಿವಾರ ಬೆಳಗ್ಗೆ ಜೈಲಿನಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಮಳ್ಳೋಳ್ಳಿ ಗ್ರಾಮದ ಅಬ್ದುಲ್ಸಾಾಬ್ ಮೌಲಾಸಾಬ್ ನದಾಪ್ (28) ಆತ್ಮಹತ್ಯೆ ಮಾಡಿಕೊಂಡ ಕೈದಿಯಾಗಿದ್ದಾನೆ. ಕೆಲ ವರ್ಷಗಳ ಹಿಂದೆ ರಾಮದುರ್ಗ ತಾಲೂಕಿನಲ್ಲಿ ನಡೆದ ದಾಯಾದಿ ಕಲಹದ ಕೊಲೆ ಪ್ರಕರಣದಲ್ಲಿ ಅಬ್ದುಲ್ಸಾದಬ್ ಬಂಧನಕ್ಕೊಳಗಾಗಿ ರಾಮದುರ್ಗ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿದ್ದ. ಕಳೆದ 45 ದಿನಗಳ ಹಿಂದೆ ಹೆಚ್ಚಿನ ವಿಚಾರಣೆಗಾಗಿ ಹಿಂಡಲಗಾ ಕಾರಾಗೃಹಕ್ಕೆ ಈತನನ್ನು ಸ್ಥಳಾಂತರಿಸಲಾಗಿತ್ತು. ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ...

ಕಿವುಡ-ಮೂಕ ಮಕ್ಕಳ ಶಾಲೆ ಪ್ರವೇಶಕ್ಕೆ ಅರ್ಜಿ

ಬೆಳಗಾವಿ,30-ಪ್ರಸಕ್ತ ಸಾಲಿಗೆ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆ ಆಜಮ ನಗರ ಬೆಳಗಾವಿ ಇಲ್ಲಿ ವಸತಿಯುತ ಬಾಲಕಿಯರ ಶಾಲೆಗೆ ಪೂರ್ವ ಪ್ರಾಥಮಿಕ ದಿಂದ 10ನೇ ತರಗತಿಯವರೆಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಪಾಲಕರು ಮಕ್ಕಳ ವೈದ್ಯಕೀಯ ಪ್ರಮಾಣ ಪತ್ರ (ಸೂಕ್ತ ಪ್ರಾಧಿಕಾರ/ಮಂಡಳಿಯಿಂದ ಪಡೆದಿರತಕ್ಕದ್ದು), ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಇನ್ನತರ ದಾಖಲಾತಿಗಳೊಂದಿಗೆ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು ಸರ್ಕಾರಿ ಕಿವುಡ ಮಕ್ಕಳ ಶಾಲೆ ಬೆಳಗಾವಿ ಇವರನ್ನು ದೂರವಾಣಿ ಸಂಖ್ಯೆ:...

ಬೃಹತ್‌ ಜೈವಿಕ ಉದ್ಯಾನವನಕ್ಕೆ ಸಚಿವ ರಮಾನಾಥ ಭೇಟಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ಅರಣ್ಯ ವಿಭಾಗದಿಂದ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಳಿ ನಿರ್ಮಿಸುತ್ತಿರುವ ಬೃಹತ್‌ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ರಮಾನಾಥ ರೈ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಡಿ. 30 ರಂದು ಬೆಳಗಾವಿ ವಿಭಾಗ ಮಟ್ಟದ ಶೈಕ್ಷಣಿಕ ಕಾರ್ಯಾಗಾರ

ಬೆಳಗಾವಿ 27-ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗ ಹಾಗೂ ನಾಗನೂರ ರುದ್ರಾಕ್ಷಿಮಠದ ಇವರ ಸಹಯೋಗದೊಂದಿಗೆ ಇದೇ ಡಿಸೆಂಬರ್ 30 ರಂದು ಶಿವಿಭಾಗ ಮಟ್ಟದ ಶೈಕ್ಷಣಿಕ ಕಾರ್ಯಾಗಾರಷಿ ವನ್ನು ಬೆಳಗಾವಿ ಶಿವಬಸವನಗರದಲ್ಲಿರುವ ನಾಗನೂರ ಶ್ರೀ. ಪ್ರಭುದೇವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10-30 ಗಂಟೆಗೆ ಬಿಜಾಪೂರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶ್ರೀ. ಸಿದ್ದರಾಮ ಮಹಾಸ್ವಾಮಿಗಳು, ಘೋಡಗೇರಿ ಶಿವಾನಂದ ಮಠದ ಶ್ರೀ. ಮಲ್ಲಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಬೆಳಗಾವಿ ಜೈನ ಇಂಜನೀಯರಿಂಗ್ ಕಾಲೇಜಿನ ನಿರ್ದೇಶಕರು...

ವಾಜಪೇಯಿ ವಸತಿ ಯೋಜನೆ: ವಿಸ್ತರಣೆ

ಬೆಳಗಾವಿ 1: ಸಾರ್ವಜನಿಕರ ಬೇಡಿಕೆ ಮೇರೆಗೆ ಬೆಳಗಾವಿ (ದಕ್ಷಿಣ) ಮತಕ್ಷೇತ್ರದ ವಸತಿ ರಹಿತ ನಾಗರಿಕರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ (ಉ್ಚ3) ಮಾದರಿ ಕಟ್ಟಡಗಳಲ್ಲಿ ವಸತಿಗಾಗಿ ಇನ್ನೂ ಅರ್ಜಿ ಪಡೆಯದ ಫಲಾನುಭವಿಗಳ ಅನುಕೂಲಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಬೆಳಗಾವಿ ಶಹಾಪೂರದ ಚಿಂತಾಮಣರಾವ ಪಿ.ಯು ಕಾಲೇಜಿನಲ್ಲಿ ಡಿಸೆಂಬರ್ 31 ರಿಂದ ಜನೇವರಿ 10 ರವರೆಗೆ ವಿತರಿಸಲಾಗುತ್ತಿದೆ. ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಜನೇವರಿ 15 ರೊಳಗೆ (ಬೆಳಿಗ್ಗೆ 10 ರಿಂದ ಸಂಜೆ 5-30 ಗಂಟೆಯವರೆಗೆ) ರಜಾ ದಿನಗಳಲ್ಲಿ ಹೊರತುಪಡಿಸಿ ಕಚೇರಿ ವೇಳೆಯಲ್ಲಿ ಕಲಾಮಂದಿರ ಟಿಳಕವಾಡಿ ಬೆಳಗಾವಿ ಇಲ್ಲಿ...

ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ

ಚಿಕ್ಕೌಡಿ 18: ತಾಲೂಕಿನ ಯಕ್ಸಂಬಾದ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಅಂಗಸಂಸ್ಥೆಯಾದ ಶಿವಶಂಕರ ಜೊಲ್ಲೆ ಪ್ರೌಢ ಶಾಲೆಯ 2013 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ನೂರಕ್ಕೆ ನೂರುಷ್ಠಾಗಿದೆ. ಒಟ್ಟು 55 ವಿದ್ಯಾರ್ಥಿಗಳ ಪೈಕಿ 19 ವಿದ್ಯಾರ್ಥಿಗಳು ಉತ್ತಮ ಶ್ರೇಣಿ, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಪ್ರಮೋದ ಸುರೇಶ ಕಮತೆ 96.16 (601/625) ಪ್ರಥಮ, ಮಹದೇವ ಸದಾಶಿವ ಶಿಂಧೆ  93.44 (584/625) ದ್ವಿತೀಯ, ಜ್ಯೌತಿ ಸುದಾಕರ ಚೌಗಲ...

ದೈಹಿಕ, ಮಾನಸಿಕವಾಗಿ ಬಲಿಷ್ಠರಾಗಲು ಕ್ರೀಡೆ ಸಹಕಾರಿ: ತವಗಮಠ

ಕನ್ನಡಮ್ಮ ಸುದ್ದಿ ಯಮಕನಮರಡಿ :ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠರಾಗಲು ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಗಂಗಾಧರ ಸ್ವಾಮಿ ತವಗಮಠ ಹೇಳಿದರು. ಶುಕ್ರವಾರ ಉಳ್ಳಾಗಡ್ಡಿ ಖಾನಪುರ ಗ್ರಾಮದ ಡಿ.ಬಿ ಹೆಬ್ಬಾಳಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 2017-18ನೆ ಸಾಲಿನ ಹುಕ್ಕೇರಿ ತಾಲ್ಲೂಕ ಮಟ್ಟದ ದಸರಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದು ಬಹಳ ಕಠಿಣವಿದ್ದು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು. ಪೊಲೀಸ ಮತ್ತು ಸೈನಿಕ ನೇಮಕಾತಿಯಲ್ಲಿ...

ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸುವುದೇ ಪ್ರತಿಭಾ ಕಾರಂಜಿ

ಯಮಕನಮರಡಿ: ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸುವುದೇ ಪ್ರತಿಭಾ ಕಾರಂಜಿಯ ಉದ್ದೇಶವಾಗಿದ್ದು ಕಳೆದ 2 ವಂಷಂಜಗಂಳಿಂದ ನಮ್ಮಲ್ಲಿ ಇಂತಹ ಸ್ಫರ್ಧೆಗಳು ನಡೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿಯಾಗಿದ್ದು ವಿದ್ಯಾರ್ಥಿಗಳಿಗೂ ಓದಿನ ನಡುವೆ ಮನರಂಜನೆ ಹಾಗೂ ತಿಳುವಳಿಕೆ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಯ.ವಿ.ಎಸ್ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಎ.ಎಮ್. ಹೊನ್ನಾಳಿ ಹೇಳಿದರು. ಅವರು ಹುಕ್ಕೇರಿ ತಾಲೂಕಿನ ಯಮಕನಮರಡಿ ವಾಯ್.ವಿ.ಎಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ದಿ 02 ರಂದು ಏರ್ಪಡಿಸಲಾಗಿದ್ದ ವಲಯ ಮಟ್ಟದ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಲಯಮಟ್ಟದಲ್ಲಿ ಬರುವ ಕ್ಲಸ್ಟರಗಳಾದ ದಡ್ಡಿ, ಹತ್ತರಗಿ, ಹುನೂರ ಮಾಸ್ತಿಹೊಳಿ, ಕುರಣಿ ಹಾಗೂ ಹೆಬ್ಬಾಳ ಕ್ಲಸ್ಟರಗಳ ಶಾಲೆಗಳು ಭಾಗವಹಿಸಿದ್ದು, ಶಾಲಾ ಮಕ್ಕಳ ವೈಯಕ್ತಿಕ...

ದೇಶೀಯ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಉತ್ತಮ ಕ್ರೀಡಾಪಟುವಾಗಲು ಸಾಧ್ಯ : ರಮೇಶ

ಗೋಕಾಕ;  18.ಶಿಕ್ಷಣ ಜೋತಿಗೆ ವಿದ್ಯಾರ್ಥಿಗಳು ಛಲ ಮತ್ತು ಕಠಿಣ ಪರಿಶ್ರಮದಿಂದ ದೇಶೀಯ ಕ್ರೀಡೆಗಳಲ್ಲಿ ಹೆಚ್ಚು-ಹೆಚ್ಚು ಭಾಗವಹಿಸುವದರಿಂದ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯ ಮತ್ತು ರಾಷ್ಟ್ತ್ರಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ದಿಶೆಯಲ್ಲಿ ಮುಂದೆ ಬರಬೇಕೆಂದು ಅರ್ಜುನ ಪ್ರಶಸ್ತಿ ಪುರಸ್ಕ್ಕತ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ರಮೇಶ ಕರೆ ನೀಡಿದರು. ಇಲ್ಲಿಯ  ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬುಧವಾರದಂದು ಆಯೋಜಿಸಲಾಗಿರುವ 13 ನೇ ಸತೀಶ ಶುಗರ್ಸ ಅವಾರ್ಡ್ಸ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಮ್ಮ...
loading...