ಬೆಳಗಾವಿ

Belgaum city and district news

ದಲಿತ ಕೇರಿಯ ಮೇಲೆ ಸವರ್ಣಿಯರ ದಾಳಿ

(ವರದಿ ರಾಜೇಂದ್ರ ಕೊಂಡೆಬೆಟ್ಟು) ಚಿಕ್ಕೌಡಿ : ದಲಿತ ಯುವಕನೂರ್ವ ಗ್ರಾಮದ ಸುವರ್ಣಿಯರ ಮಹಿಳೆ ಮೇಲೆ ಕೈ ಹಾಕಿದ ಘಟನೆುಂದ ರೊಚ್ಚಿಗೆದ್ದ ಸುವರ್ಣಿಯರು ದಲಿತ ಕೇರಿಯ ಮೇಲೆ ಹಠಾತ್ತನೆ ದಾಳಿ ನಡೆಸಿದ್ದ ಘಟನೆ ತಾಲೂಕಿನ ಭೋಜ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯ ನಂತರ ದಲಿತರು ಹಾಗೂ ಸುವರ್ಣಿಯರ ನಡುವೆ ಬಿನ್ನಾಭಿಪ್ರಾಯ ಉಂಟಾಗಿದ್ದರಿಂದ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಶನಿವಾರ ರಾತ್ರಿ ಗ್ರಾಮದ ಜೈನ ಕುಟುಂಬದ ಮಹಿಳೆ ಪದ್ಮಶ್ರೀ ಮಹಾವೀರ ಸವದತ್ತಿ ರಾತ್ರಿ 8 ಗಂಟೆ ಸುಮಾರಿಗೆ ಓಷದ ತರಲು ಹೋಗುತ್ತಿದ್ದಾಗ ಎದುರಿಗೆ ಬಂದ ಮದ್ಯದ ಅಮಲಿನಲ್ಲಿದ್ದ ದಲಿತ...

ರೈಲು ನಿಲ್ದಾಣದಲ್ಲಿ ಕಾಲು ಜಾರಿ ಬಿದ್ದ ಮೃತಪಟ್ಟ ಯುವಕ

ಚಿಂಚಲಿ (ರಾಯಬಾಗ): 30- ಚಲಿಸುತ್ತಿರುವ ರೈಲುಗಾಡಿಯಿಂದ ಕಾಲು ಜಾರಿ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ, ಶನಿವಾರ ಬೆಳಿಗ್ಗೆ ರಾಯಬಾಗ ತಾಲೂಕಿನ ಚಿಂಚಲಿ ರೇಲ್ವೆ ಸ್ಟೇಶನದಲ್ಲಿ ನಡೆದಿದೆ. ಮೈಸೂರ ದಿಂದ ದೆಹಲಿಗೆ ಹೊರಡುವ ಸುವರ್ಣ ಜಯಂತಿ ಏಕ್ಸ್ಪ್ರೆಸ್ಸ್ ರೈಲುಗಾಡಿಯಿಂದ  ಶನಿವಾರ ಬೆಳಿಗ್ಗೆ ಚಿಂಚಲಿ ರೈಲು ನಿಲ್ದಾಣದಲ್ಲಿ ಕಾಲು ಜಾರಿ ಬಿದ್ದ ಮೃತಪಟ್ಟ ಯುವಕನ್ನು ಹಾರುಗೇರಿ ಗ್ರಾಮದ ಮಹಾವೀರ ಸನ್ನಕ್ಕಿನ್ನವರ (28) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಘಟಪ್ರಭಾದ ರೈಲ್ವೆ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...  

ಕಲ್ಲೌಳ್ಲಿಯಲ್ಲಿ ಶಿವರಾಜಕುಮಾರ ರಸಮಂಜರಿ

ಗೋಕಾಕ , 30 - ಗೋಕಾಕ ತಾಲ್ಲೂಕಿನ ಕಲ್ಲೌಳ್ಳಿಯ ಭರಮದೇವರ ಜಾತ್ರಾ ಮಹೋತ್ಸವದ ನಿಮಿತ್ಯ ಸೋಮವಾರ ದಿ.31 ರಂದು ಸಂಜೆ 6 ಗಂಟೆಗೆ ಬಲಭೀಮ ರಂಗಮಂದಿರದಲ್ಲಿ ರಸಮಂಜರಿ ಕಾರ್ಯಕ್ರಮ ಹುಬ್ಬಳ್ಳಿಯ ಜ್ಯೂ. ಶಿವರಾಜಕುಮಾರ ತಂಡದಿಂದ ನಡೆಯಲಿದೆ. ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಲಭೀಮ ವ್ಯ.ಸೇ.ಸ.ಸಂಘದ ಅಧ್ಯಕ್ಷ ನೀಲಕಂಠ ಬಸಪ್ಪ ಕಪ್ಪಲಗುದ್ದಿ ವಹಿಸುವರು. ಜಿ.ಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಜ್ಯೌತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಈರಪ್ಪ ಕಡಾಡಿ, ಎಪಿಎಂಸಿ ನಿರ್ದೇಶಕರಾದ ಅಶೋಕ ನಾಯ್ಕ,...

ನ್ಯಾಯವಾದಿ ಕೆ.ಎಸ್. ಪುಂಡಿಪಲ್ಲೆ ನೇಮಕ

ಚಿಂಚಲಿ (ರಾಯಬಾಗ):30 ರಾಯಬಾಗ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿಯ ಅಪರ ಸರಕಾರಿ ವಕೀಲರಾಗಿ (ಎ.ಜಿ.ಪಿ) ತಾಲೂಕಿನ ಬಾವಚಿ ಗ್ರಾಮದ ನ್ಯಾಯವಾದಿ ಕೆ.ಎಸ್. ಪುಂಡಿಪಲ್ಲೆ ನೇಮಕ ಗೊಂಡಿದ್ದಾರೆ. ಈಗಾಗಲೇ ಪುಂಡಿಪಲ್ಲೆ ಅವರು ರಾಯಬಾಗ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ...  

ಬಸವೇಶ್ವರ ಪ್ರತಿಮೆಯ ಪ್ರತಿಷ್ಠಾಪನಾ ಶಂಕು ಸ್ಥಾಪನೆ

ಗೋಕಾಕ , 30 - ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮದ ಬಸವೇಶ್ವರ ವೃತ್ತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಗಜ್ಯೌತಿ ಬಸವೇಶ್ವರರ ಕಂಚಿನ ಮೂರ್ತಿಯ ಪ್ರತಿಷ್ಠಾಪನೆಯ ಅಡಿಗಲ್ಲು ಸಮಾರಂಭ ನ. 1. ರಂದು ಸಂಜೆ 5 ಗಂಟೆಗೆ ಬಸವೇಶ್ವರ ಸರ್ಕಲ್ದಲ್ಲಿ ನಡೆಯಲಿದೆ. ಸಾನಿಧ್ಯವನ್ನು ಪ್ರಭುಲಿಂಗ ಮಹಾಸ್ವಾಮಿಗಳು ಹಾಗೂ ಬಸಲಿಂಗಯ್ಯ ಮಹಾಸ್ವಾಮಿಗಳು ವಹಿಸುವರು. ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಅಡಿಗಲ್ಲು ಸಮಾರಂಭವನ್ನು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ಸುರೇಶ ಸಾವಳಗಿ ವಹಿಸುವರು. ಮುಖ್ಯ ಅತಿಥಿಗಳಾಗಿ ಯಾದವಾಡ ಗ್ರಾಪಂ ಸದಸ್ಯರಾದ ಮಲ್ಲಪ್ಪ ಚಕ್ಕೆನ್ನವರ, ಹಣಮಂತ ಹುಣಸಿಕಟ್ಟಿ,...

ಬಳೋಬಾಳದಲ್ಲಿ ಕಬಡ್ಡಿ ಪಂದ್ಯಾವಳಿ

ಗೋಕಾಕ , 30 -  ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನವ್ಹಂಬರ 1 ರಂದು ಕರ್ನಾಟಕ ರಾಜ್ಯೌತ್ಸವ ನಿಮಿತ್ಯ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಬಳೋಬಾಳ ಘಟಕದ ವತಿಯಿಂದ ಜಿಲ್ಲಾಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಪಂದ್ಯಗಳಲ್ಲಿ ವಿಜೇತ ಕಬಡ್ಡಿ ತಂಡಗಳಿಗೆ ಪ್ರಥಮ ಬಹುಮಾನ 10,001 ರೂ, ದ್ವಿತೀಯ ಬಹುಮಾನ 7001 ರೂ, ಹಾಗೂ ತೃತೀಯ ಬಹುಮಾನ 5000 ರೂ, ಗಳನ್ನು ನೀಡಲಾಗುವುದು. ಈ ಹೊನಲು ಬೆಳಕಿನ ಪದ್ಯಾವಳಿ ಕಾರ್ಯಕ್ರಮದ ಉದ್ಘಾಟನೆಯನ್ನು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ...

ಘಟಪ್ರಭಾದಲ್ಲಿ ರಾಜ್ಯೌತ್ಸವ ಸಮಾರಂಭ

ಗೋಕಾಕ , 30 - ಅರಭಾಂವಿಯ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಕರ್ನಾಟಕ ರಾಜ್ಯೌತ್ಸವ ಕಾರ್ಯಕ್ರಮ ಮಂಗಳವಾರ 1 ರಂದು ಮುಂಜಾನೆ 9 ಗಂಟೆಗೆ ಮಾರುತಿ ದೇವರ ದೇವಸ್ಥಾನದಲ್ಲಿ ನಡೆಯಲಿದೆ. ಸಾನಿಧ್ಯವನ್ನು ಸಿದ್ಧಲಿಂಗ ಮಹಾಸ್ವಾಮಿಗಳು ಅರಭಾಂವಿ ಮಠ, ಘಟಪ್ರಭಾದ ಮಲ್ಲಿಕಾರ್ಜುನ ದೇವರು, ಅರಭಾವಿಯ ಶಿವಾನಂದ ಹಿರೇಮಠ ಸ್ವಾಮೀಜಿ ವಹಿಸುವರು.ಉದ್ಘಾಟನೆಯನ್ನು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು. ಅಧ್ಯಕ್ಷತೆಯನ್ನು ಕರವೇ ಅರಭಾವಿ ಘಟಕದ ಅಧ್ಯಕ್ಷ ಕೃಷ್ಣಾ ಬಂಡಿವಡ್ಡರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಮನೋಹರ ಕಲಗುಟಗಿ, ಪಿಕೆಪಿಎಸ್ ಬ್ಯಾಂಕ ಅಧ್ಯಕ್ಷ...

ಗೋಕಾಕದಲ್ಲಿ ಅದ್ದೂರಿ ರಾಜ್ಯೌತ್ಸವ

ಗೋಕಾಕ , 30 - ತಾಲ್ಲೂಕಾ ಆಡಳಿತ, ತಾಲ್ಲೂಕಾ ಪಂಚಾಯತ ಮತ್ತು ನಗರಸಭೆ ಗೋಕಾಕ ಇವರ ಜಂಟೀ ಆಶ್ರಯದಲ್ಲಿ ಕರ್ನಾಟಕ ರಾಜ್ಯೌತ್ಸವ ದಿನಾಚರಣೆ ಕಾರ್ಯಕ್ರಮವು ನ. 1 ರಂದು ಮುಂಜಾನೆ 9.30 ಗಂಟೆಗೆ ತಾಲ್ಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದೆ ಅಧ್ಯಕ್ಷತೆಯನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ, ನಗರಸಭೆ ಅಧ್ಯಕ್ಷೆ ಸಾವಿತ್ರಿ ಕಂಬಳಿ, ತಾಪಂ ಅಧ್ಯಕ್ಷೆ ಸತ್ತೆವ್ವ ಶಿರಗಾಂವಿ ಆಗಮಿಸುವರು. ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ವಿವಿಧ ಸಾಂಸ್ಕ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು...

ಮೆಳವಂಕಿಕಾಮಗಾರಿ ಉದ್ಘಾಟನೆ

ಗೋಕಾಕ , 30 - ಮೆಳವಂಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಸಿಎಂ ವಸತಿ ನಿಲಯ, ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹಾಗೂ ಬಲಭೀಮ ದೇವಸ್ಥಾನದ ಶಂಕುಸ್ಥಾಪನೆ ಕಾರ್ಯಕ್ರಮವು ಮಂಗಳವಾರ ದಿ.1 ರಂದು ಮದ್ಯಾಹ್ನ 12 ಗಂಟೆಗೆ ಮೆಳವಂಕಿ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಮಹಾದೇವ ಪತ್ತಾರ ವಹಿಸುವರು. ಮುಖ್ಯ ಅತಿಥಿಗಳಾಗಿ ಮೆಳವಂಕಿ ಜಿ.ಪಂ. ಸದಸ್ಯ ವಾಸುದೇವ...

ಹುಲಗಡ್ಡಿ : ವಿವಿಧ ಕಾಮಗಾರಿ ಉದ್ಘಾಟನೆ

ಗೋಕಾಕ , 30 - ಅರಭಾಂವಿ ಮತಕ್ಷೇತ್ರದ ಫುಲಗಡ್ಡಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವು ಸೋಮವಾರ ದಿ. 31 ರಂದು ಮದ್ಯಾಹ್ನ 3 ಗಂಟೆಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಅರಭಾಂವಿ ಮಠದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವರು. ಉದ್ಘಾಟಕರಾಗಿ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಈರಪ್ಪ ಕಡಾಡಿ, ಗೋಕಾಕ ತಾಪಂ ಅಧ್ಯಕ್ಷೆ ಸತ್ತೆವ್ವ ಶಿರಗಾಂವಿ, ಎಪಿಎಂಸಿ ಅಧ್ಯಕ್ಷ ಶಿದ್ಲಿಂಗ ಕಂಬಳಿ, ನಾಗನೂರ ಜಿಪಂ ಸದಸ್ಯ ಮಾರುತಿ ತೋಳಮರಡಿ, ವಡೇರಹಟ್ಟಿ ತಾಪಂ...
loading...