ಬೆಳಗಾವಿ

Belgaum city and district news

ಉತ್ತಮ ಚೈತನ್ಯಕ್ಕಾಗಿ ರಕ್ತದಾನ ಮಾಡಿ; ಡಿಸಿ

video
https://youtu.be/VBjBPN9RyP0 ಜಿಲ್ಲಾಧಿಕಾರಿಗಳ ಆವರಣದಲ್ಲಿ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಕುಂಟುಂಬ ಕಲ್ಯಾಣ ಇಲಾಖೆ , ಬೀಮ್ಸ್ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು.ಈ ಕಾರ್ಯಕ್ರಮದಲ್ಲಿ ಸುಮಾರು ನೂರಾರು ವಿದ್ಯಾರ್ಥಿಗಳು ಬಾಗವಹಿಸಿದ್ದಾರೆ. ತದನಂತರ ಎಲ್ಲಾ ಕಾಲೇಜ ವಿದ್ಯಾರ್ಥಿಗಳು ಜಿಲ್ಲಾದಿಕಾರಿ ಕಚೇರಿಯಿಂದ ಬಿಮ್ಸ ಆಸ್ಪತ್ರೆ ವರೆಗೂ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಜಾಥಾ ಕೈಗೊಂಡರು

ಸಾಲ ಮನ್ನಾ ಗೊಂದಲ: ರೈತರಿಂದ ತಹಶಿಲ್ದಾರರ ಕಚೇರಿ ಮುತ್ತಿಗೆ .

video
https://youtu.be/t3zmp8wom7s ಸಾಲ ಮನ್ನಾ ವಿಷಯದಲ್ಲಿ ರೈತಸಮುದಾಯಕ್ಕೆ ಗೊಂದಲ ಮುಡಿಸುತ್ತಿರುವ ಸಹಕಾರಿ ಸಂಘಗಳ ಕಾರ್ಯದರ್ಶಿಗಳು. ರೈತರು ಉತಾರ ಪಡೆದುಕೊಳ್ಳಲು ಬೆಳಗಿನ ಜಾವವೆ ತಹಶಿಲ್ದಾರರ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಂತು,ಅಗತ್ಯ ದಾಖಲಾತಿ ನೀಡಿದರು ಸತ್ತಾಯಿಸುತ್ತಿರುವ ಸಹಕಾರಿ ಸಂಘಗಳ ಧೋರಣೆ ಖಂಡಿಸಿ ರೈತರು ಇಂದು ತಹಶಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆಯಿತು.

ಚಿಕ್ಕನಗೌಡರ ಸದಸ್ಯತ್ವ ರದ್ದು ಪಡೆಸುವಂತೆ ಮಾ.ಬ.ವೇ ಪ್ರತಿಭಟನೆ :

video
https://youtu.be/AoY47cZgW6g ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ವಿಶ್ವವಿದ್ಯಾಲಯವನ್ನು ಕೇಸರಿಕರಣಗೊಳಿಸುವ ಹುನ್ನಾರಿ ನಡೆಸಿದ್ದು ಮತ್ತು ವಿವಿ ಯಲ್ಲಿ ಹಲವಾರು ಅವ್ಯವಹಾರದಲ್ಲಿ ಭಾಗಿಯಾಗಿರುವ ಚಿಕ್ಕನಗೌಡರ ಸದಸ್ಯತ್ವ ರದ್ದು ಪಡೆಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಮತ್ತು ವಿವಿಧ ದಲಿತರ ಪರ ಸಂಘಟನೆಯ ಪ್ರತಿಭಟನೆ ನಡೆಸಿದವು .

ವಿಸಿ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನು ಬಂಧಿಸಿ:ಬಿಜೆಪಿ ಮುಖಂಡ ಅಷ್ಟಗಿ ಆಗ್ರಹ

video
https://youtu.be/L6PcmvV28e8 ಕಳೆದ ಮೂರು ದಿನದ ಹಿಂದೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಕುಲಪತಿ ಮೇಲೆ ಹಲ್ಲೆ ನಡೆಸಿದ ಕಾಕತಿ ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಸುಣಗಾರ ಹಾಗೂ ರಾಮಾ ಗುಳಿಯವರನ್ನು ಬಂಧಿಸುವಂತೆ ಆಗ್ರಹಿಸಿ ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರರು ಮುಖಂಡ ಮಾರುತಿ ಅಷ್ಟಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು

ತೌಶಿಫ್ ಅಲ್ಲಾವುದ್ದಿನ ಫಣಿಬಂದ ಬಂಧನಕ್ಕೆ ಕರವೇ ಆಗ್ರಹ

video
https://youtu.be/WZIZ44IZt58 ಸೆ.27ರಂದು ಮಾರಿಹಾಳ ಗ್ರಮಾದ ಆಸಿಫ್ ಹುಸೇನಸಾಬ ಮುಲ್ಲಾ ಅವರ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ ತೌಶಿಫ ಅಲ್ಲಾವುದ್ದಿನ ಫಣಿಬಂದನನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಾಲ ಮನ್ನಾ ದಾಖಲೆಗಳಿಗಾಗಿ ರೈತರ ಪರದಾಟ

video
https://youtu.be/r7PNuLA-a1E ಚಿಕ್ಕೋಡಿ :ಕಚೇರಿ ದಿನವಿಡಿ ಕಾದು ಕುಳಿತರೂ ಸಿಗದ ಪಹಣಿ ಪತ್ರ ಸಹಕಾರಿ ಸಂಘಗಳಲ್ಲಿನ ೧ ಲಕ್ಷದ ವರೆಗಿನ ಸಾಲ ಮನ್ನಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ ಪಿಕೆಪಿಎಸ್ ನವರು ಗಡವು ವದಂತಿಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಇಂದು ಸಾವಿರಾರು ರೈತರು ಪರದಾಡುವಂತಾಯಿತು .ಸಾಲ ಮನ್ನಾ ಸೌಲಭ್ಯಕ್ಕೆ ಬೇಕಾದ ಪಹಣಿ ಪತ್ರ ,ಗ್ರಾಮ ಲೆಕ್ಕಾಧಿಕಾರಿಗಳಿಂದ ಪ್ರಮಾಣ ಪತ್ರ,ಪ್ಯಾನ್ ಕಾರ್ಡ್ ,ಪಡಿತರ ಚೀಟಿ, ಆಧಾರ ಕಾರ್ಡ್ ಕೋರ್ಟ್ ಅಪಿಡೇವಿಟ್ ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಲು ರೈತರು ಹೈರಾಣಾದರು.

ಆರ್ ಸಿ ಯು ಕುಲಪತಿ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

video
https://youtu.be/JWMjV6TQWac ಬೈಲಹೊಂಗಲ : ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪ ಕುಲಪತಿ ಶಿವಾನಂದ ಹೊಸಮನಿ ಹಾಗೂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬೈಲಹೊಂಗಲದಲ್ಲಿ ಬ್ರಹತ್ತ ಪ್ರತಿಭಟಣೆ ಮಾಡಲಾಯಿತು ಒಂದು ವಾರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಜರುಗಿಸದಿದ್ದರೆ ಬೈಲಹೊಂಗಲ ಬಂದ ಕರೆಗೆ ನಿರ್ಧಾರಿಸಲಾಯಿತುಅಂಬೇಡ್ಕರ್ ಉದ್ಯಾನವನದಿಂದ ಸಂಗೋಳ್ಳಿ ರಾಯಣ್ಣ ವೃತ್ತದವರಗೆ ಪ್ರತಿಭಟಣಾ ಮೆರವಣಿಗೆ ನಡೆಸಲಾಯಿತು

ರಾಣಿಚನ್ನಮ್ಮ ವಿವಿಯ ಗಲಾಟೆಯನ್ನು ತೀವ್ರವಾಗಿ ಖಂಡಿಸುತ್ತೇವೆ: ಎಸ್.ಪಾಟೀಲ

video
https://youtu.be/fpIaAl7Qpdw ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಣಿಚನ್ನಮ್ಮ ವಿವಿಯಲ್ಲಿ ಅಲ್ಲಿನ ಸಮೀಪದ ಹಳ್ಳಿ ಕೆಲವರು ವಿವಿಯ ಕುಲಪತಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಹೇಳಿದರು.

ಗೂಂಡಾಗಳನ್ನು ಬಂಧಸಿ: ಎಬಿವಿಪಿ ಆಗ್ರಹ

video
https://youtu.be/40G-CrvaaOE ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಮೇಲೆ ಸೋಮವಾರ ನಡೆದ ಹಲ್ಲೆ ಖಂಡಿಸಿ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ವಿಶ್ವವಿದ್ಯಾಲಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು .

ಭಾರತದಲ್ಲಿ ಕೇಸರಿಮಯ ಮಾಡದೇ ಪಾಕಿಸ್ತಾನದಲ್ಲಿ ಮಡಲಾದಿತೇ : ಶಾಸಕ ಸತೀಶ ಜಾರಕಿಹೊಳಿಗೆ ಸಂಸದ ಟಾಂಗ್

video
https://youtu.be/7kutZDydRQo ಇಂದು ಶಾಸಕ ಸತೀಶ ಜಾರಕಿಹೊಳಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕೇಸರಿಮಯ ಮಾಡಲು ಹೊರಟಿದ್ದಾರೆ ಎಂದು ಬುಧವಾರ ಶಾಸಕ ಸತೀಶ ಜಾರಕಿಹೊಳಿ ಹೇಳಿದ ಹೇಳಿಕೆಗೆ ಸಂಸದ ಸುರೇಶ ಅಂಗಡಿ ಪ್ರತಿಕ್ರಿಯಿಸಿ, ಕೇಸರಿಮಯ ಭಾರತದಲ್ಲಿ ಮಾಡದೇ ಪಾಕಿಸ್ತಾನದಲ್ಲಿ ಮಡಲಾದಿತೇ, ಸತೀಶ ಜಾರಕಿಹೊಳಿ ಅಲ್ಲಿ ರಾಜಕೀಯ ಮಾಡುತ್ತಾರೆಂದರೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.
loading...