ಬೆಳಗಾವಿ

Belgaum city and district news

ಆಟೋ‌ ಮೀಟರ್ ಆದೇಶಕ್ಕೆ ಕೇವಲ ಮೂರು ದಿನ ಬಾಕಿ – ಆಟೋಗಳಿಗೆ ರಾಜಕಾರಣಿಗಳ ಶ್ರೀರಕ್ಷೆ – ನೆನೆಗುದಿಗೆ ಬಿದ್ದ ಕಾಯಾ೯ಚರಣೆ

ಕನ್ನಡಮ್ಮ ಸುದ್ದಿ ಬೆಳಗಾವಿ: 14 ನಗರದಲ್ಲಿ ಸಂಚರಿಸುವ ಆಟೋಗಳಿಗೆ ತಿಂಗಳೊಳಗಾಗಿ‌ ಮೀಟರ್ ಅಳವಡಿಸದಿದ್ದರೆ ಆರ್ ಟಿಓ ಹಾಗೂ ಪೊಲೀಸ್ ಇಲಾಖೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಆದೇಶ ನೀಡಿ ಇಂದಿಗೆ 27 ದಿನ ಕಳೆದರೂ ಮೀಟರ್ ಕಾಯಾ೯ಚರಣೆ ನೆನೆಗುದಿಗೆ ಬಿದ್ದಿದೆ. ನಗರದಲ್ಲಿರುವ ಆಟೋ ಚಾಲಕರು ಪ್ರಯಾಣಿಕರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ‌. ಆದ್ದರಿಂದ ಕಳೆದ ಮೂರುವರೆ ವಷ೯ದಿಂದ ಜಿಲ್ಲಾಡಳಿತ ಆದೇಶ ನೀಡುತ್ತದೆ. ಆರ್ ಟಿಓ ಪೊಲೀಸ್ ಇಲಾಖೆ ಮೀಟರ್ ಅನುಷ್ಠಾನಗೊಳಿಸಲು ವಿಫಲರಾಗಿದ್ದಾರೆ. ಆದ್ದರಿಂದ ತಿಂಗಳೊಗೆ ಮೀಟರ್ ಅಳವಡಿಸಬೇಕೆಂದು‌ ಆದೇಶ ನೀಡಿದರೂ...

ಮದುವೆ ಸಂದರ್ಭದಲ್ಲಿ ಪ್ರೇಯಸಿಯ ಮನೆಯವರನ್ನು ಕಂಡು ಓಡಿ ಹೋದ ಯುವಕ

ಕನ್ನಡಮ್ಮ ಸುದ್ದಿ ಬೆಳಗಾವಿ:27 ಪ್ರೀತಿಸಿ ಮದುವೆ ಮಾಡಿಕೊಳ್ಳಲು ವಿವಾಹ ನೋಂದಣಿ ಕಚೇರಿಗೆ ಆಗಮಿಸಿದ ಪ್ರೇಮಿಗಳಿಬ್ಬರು ತಂದೆ ತಾಯಿಗಳನ್ನು ಕಂಡ ಕೂಡಲೇ ಓಡಿ ಹೋದ ಘಟನೆ ಶನಿವಾರ ನಡೆದಿದೆ. ಮಹಾದ್ವಾರ ನಗರದ ರಹವಾಸಿಯಾದ ಶುಭಂ ವಿಜಯ ಲೋಹರ ಎಂಬುವನ್ನು ಯುವತಿಯೊರ್ವಳನ್ನು ಪ್ರೀತಿ ಮಾಡಿ ವಿವಾಹ ವಾಗುತ್ತಿದ್ದ ಸಂದರ್ಭದಲ್ಲಿ ಯುವತಿಯ ತಾಯಿ ಹಾಗೂ ತಂದೆ ಸೇರಿಕೊಂಡು ಯುವತಿಯೊಂದಿಗೆ ವಿವಾಹ ನೋಂದಣಿ ಕಚೇರಿ ಎದುರು ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮಾರ್ಕೇಟ್ ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಾದಾನ ಪಡೆಸಿ ಠಾಣೆಗೆ ಕರೆದೊಯ್ದಿದ್ದಾರೆ. ಶುಕ್ರವಾರ ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು...

ಹಾಡು ಹಗಲೇ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ಕನ್ನಡಮ್ಮ ಸುದ್ದಿ‌‌-ಬೆಳಗಾವಿ: ಹಾಡು ಹಗಲೆ ಯಾರೊ ದುಸ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗೋವಾವೇಸ್ ಹತ್ತಿರ ಇಂದು ನಡೆದಿದೆ. ಸುಳೆಬಾವಿ ಗ್ರಾಮದ ಶರೀಫ ನದಾಫ (೨೮) ಮೃತ ದುರ್ದೈವಿ. ಎಲ್ ಐಸಿ ಕಚೇರಿಯ ಹತ್ತಿರ ಬೆಳಿಗ್ಗೆ ೧೦ ಗಂಟೆಯ ಸಮಯದಲ್ಲಿ ಯಾರೊ ದುಸ್ಕರ್ಮಿಗಳು ಚಾಕುವುನಿಂದ ಇರಿದು ಪರಾರಿಯಾಗಿದ್ದಾರೆ. ಈ ಕುರಿತು ಸ್ಥಳಕ್ಕೆ ಆಗಮಿಸಿದ ಟಿಳಕವಾಡಿ ಪೊಲೀಸರು ದುಸ್ಕರ್ಮಿಗಳ ಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಬೇಕು : ಪವನ ಕಣಗಲಿ

ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಬೇಕು : ಪವನ ಕಣಗಲಿ ಕನ್ನಡಮ್ಮ ಸುದ್ದಿ‌-ಸಂಕೇಶ್ವರ 25:ನಿರುದ್ಯೋಗಿಗಳಿಗೆ ಸಹಾಯ ಮಾಡಿ ಅವರ ಜೀವನಕ್ಕೆ ಅನುಕೂಲಕ್ಕೆ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಸಹಕಾರಿ ಸಂಘಗಳು ಬಡ ಜನರು ಮತ್ತು ಮಧ್ಯಮ ವರ್ಗಕ್ಕೆ ಸಾಲದ ರೂಪದಲ್ಲಿ ಸಹಾಯ ಒದಗಿಸಬೇಕೆಂದು ಸಾಮರ್ಥ್ಯ ಅರ್ಬನ್ ಸೌಹಾರ್ದ ಸಹಕಾರದ ಅಧ್ಯಕ್ಷ ಉದ್ಯಮಿ ಪವಣ ಕಣಗಲಿ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ನೂತನ ಸಾಮರ್ಥ್ಯ ಅರ್ಬನ್ ಸೌಹಾರ್ದ ಸಹಕಾರಿ ನಿ., ಪ್ರಾರಂಭೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು‌ ಬ್ಯಾಂಕ್‍ಗಳು ಸಾಮಾನ್ಯ ಜನರ ಹಣವನ್ನು ಠೇವು ಉಳಿಸಿಕೊಳ್ಳುವ ಮೂಲಕ ಜನರ...

ಹಲವು‌ ದಶಕದಿಂದ ವಿದ್ಯುತ್ ವಂಚಿತ ಗೋಕಾಕದ ದನದ ಓಣಿ ಗ್ರಾಮ: ಅಶೋಕ ಪೂಜಾರಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ಗೋಕಾಕ ಪಾಲ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ತಯಾರಿಸಿದೆ.ಆದರೆ ದೂರಂತವೆಂದರೆ ಗೋಕಾಕ ಮಿಲ್ ಹಾಗೂ ರಾಜಕೀಯ ಕುತಂತ್ರದಿಂದ ಧನದ ಓಣಿ ಎಂಬ‌ ಗ್ರಾಮವು ವಂಚಿತವಾಗಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು. ಅವರು ಶುಕ್ರವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಕಾಕದಲ್ಲಿರುವ ನೂಲಿನ ಮಿಲ್ ಶತಮಾನಗಳ ಇತಿಹಾಸ ಹೊಂದಿದೆ. ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಇಲ್ಲೇ ಸ್ಥಾಪಿಸಲಾಗಿದೆ. ದೂರಂತವೆಂದರೆ ಕೇಂದ್ರ ರಾಜ್ಯ ಸರಕಾರಗಳು ಸಾಕಷ್ಟು ಹಣ ಇಂದು ಜನ ಜೀವನ ಅಭಿವೃದ್ಧಿಗೆ ನಿಡುತ್ತಿದ್ದರು. ಗೋಕಾಕ...

ಗಾಳಿ ಸುದ್ದಿಗೆ ಸಾರ್ವಜನಿಕರು ಕಿವಿ ನೀಡಬಾರದು

ಕನ್ನಡಮ್ಮ ಸುದ್ದಿ ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೂರು ರೂ.ಗಳ ಬಾಂಡ್ ಪೇಪರ್‍ಗಳ ಮೇಲೆ ನಿವೇಶನ ಖರಿದೀಸಿ ಮನೆಗಳನ್ನು ನಿರ್ಮಾಣ ಮಾಡಿರುವ ಜನರ ಮನೆಗಳನ್ನು ತೆರವುಗೊಳಿಸಲು ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಗಣ್ಣವರ ಹೇಳಿದ್ದಾರೆಂದು ಹೇಳಿ ಕೆಲವೊಂದು ಜನರು ಪ್ರಾದೇಶಿಕ ಆಯುಕ್ತರ ಹೆಸರು ಬಳಸಿಕೊಂಡು ನಗರದಲ್ಲಿ ಗಾಳಿ ಸುದ್ದಿ ಹಬ್ಬಿಸಿ ಜನರ ದಿಶಾ ಬದಲು ಮಾಡಿ ಪ್ರತಿಭಟನೆ ನಡೆಸಲು ಪ್ರೇರೆಪಿಸುತ್ತಿದ್ದಾರೆ. ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎದ್ದಿರುವ ಈ ಗಾಳಿ ಸುದ್ದಿಗೆ ಗುರುವಾರ ಪ್ರಾದೇಶಿಕ ಆಯುಕ್ತ ಪಿ.ಎ.ಮೇಗಣ್ಣವರ ಅವರು, ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ...

ಜನರ ಪ್ರೀತಿ-ವಿಶ್ವಾಸವೇ ಮುಖ್ಯ: ಶಾಸಕ ಬಾಲಚಂದ್ರ

ಗೋಕಾಕ : ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ಅಧಿಕಾರವನ್ನು ಜನರಿಗಾಗಿ ಉಪಯೋಗಿಸುತ್ತಿದ್ದೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.      ತಾಲೂಕಿನ ಗಣೇಶವಾಡಿ ಗ್ರಾಮದಲ್ಲಿ ಸೋಮವಾರದಂದು 2 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಅಡಿಗಲ್ಲನ್ನು ನೆರವೇರಿಸಿ ಅವರು ಮಾತನಾಡಿದರು.      ಕಳೆದ 13 ವರ್ಷಗಳಲ್ಲಿ ಅರಭಾವಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಈ ಭಾಗದ ಜನತೆಯ ಶ್ರೇಯೋಭಿವೃದ್ಧಿಗೆ...

ಡೆತ್ ನೋಟ್ ಬರೆದು ನರ್ಸ್ ಆತ್ಮಹತ್ಯೆ

ಕನ್ನಡಮ್ಮ ಸುದ್ದಿ ಬೆಳಗಾವಿ:12 ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ರಾಜಶ್ರೀ ಕೇಸರಗೊಪ್ಪ 36 ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಶ್ರೀನಗರದ ನಿವಾಸದಲ್ಲಿ ಫ್ಯಾನಿಗೆ ನೇಣುಬೀಗಿದು ಡೆತನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೇ.ಸ್ವಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತನೋಟ್ ಬರೆದಿಟ್ಟಿದ್ದಳೆ ಕೆಲ ವರ್ಷಗಳ ಹಿಂದೆ ರಾಜಶ್ರೀ ವಿವಾಹವಾಗಿತ್ತು. ಇವರಿಗೆ ೭ ವರ್ಷದ ಹೆಣ್ಣು ಮಗುವಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿಯಿಂದ ಸಿಎಂ ಸ್ಪರ್ಧೆಗೆ ಒಪ್ಪಿಗೆ: ಸಚಿವ ರಮೇಶ

ಕನ್ನಡಮ್ಮ ಸುದ್ದಿ ಬೆಳಗಾವಿ: ಬಿಜೆಪಿ ಭದ್ರಕೋಟೆಯಾದ ಅಥಣಿಯಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಎಂಎಲ್ ಸಿ ವಿವೇಕರಾವ ಪಾಟೀಲ ನಾನು ಸಿಎಂ ಸಿದ್ದರಾಮಯ್ಯಾ ಅವರ ಜೊತೆಗೆ ಮಾತುಕತೆ ನಡೆಸಿದಾಗ ಸಿಎಂ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯ ಭದ್ರಕೋಟೆ ಮುರಿಯಲು ಸಂಕಲ್ಪ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಅಥಣಿಯಿಂದ ಸಿಎಂ ಸಿದ್ದರಾಮಯ್ಯಾ ಹಾಗೂ ರಾಯಬಾಗ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಸ್ಪರ್ಧೆ ಮಾಡಬೇಕು ಎಂದು...

ಪಾಲಿಕೆ ಸ್ಥಾಯಿ‌ ಸಮಿತಿ‌ ಮೂರು ಅಧ್ಯಕ್ಷ ‌ಸ್ಥಾನ ಕನ್ನಡಿಗರ ಪಾಲು

ಕನ್ನಡಮ್ಮ ಸುದ್ದಿ ಬೆಳಗಾವಿ:1 ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ‌ ಸಮಿತಿಯ ಅಧ್ಯಕ್ಷರ ಆಯ್ಕೆ ಮೇಯರ್ ‌ಸಂಜೋತ‌ ಬಾಂದೇಕರ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ‌‌‌ ಜರುಗಿತು. ಲೆಕ್ಕ ಪತ್ರ ಸ್ಥಾಯಿ‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಿವಾಜಿ ಕುಡುಸ್ಕರ, ಮೈನಾಬಾಯಿ ಚೌಗುಲೆ, ಸರಳಾ ಹೇರೆಕರ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ‌ ಮೈನಾಬಾಯಿ ಚೌಗುಲೆ ಅರ್ಜಿ ವಾಪಸ್ಸ ಪಡೆದುಕೊಂಡರು.ಇದರಲ್ಲಿ ಶಿವಾಜಿ‌ ಕುಡುಸ್ಕರಗೆ ಮೂರು ಜನ ಬೆಂಬಲ ಸೂಚಿಸಿದರೆ ಸರಳಾ ಹೇರೇಕರ ಪರವಾಗಿ ನಾಲ್ಕ ಜನ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕನ್ನಡ ನಗರ ಸೇವಕಿ ಸರಳಾ ಹೇರೇಕರ ಆಯ್ಕೆಯಾದರು. ಲೋಕೋಪಯೋಗಿ...
loading...