ಬೆಳಗಾವಿ

Belgaum city and district news

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದಾಗ ಮಾತ್ರ ಗ್ರಾಮಗಳ ವಿಕಾಸ: ಪರಮೇಶ್ವರ ಹೊಸಮನಿ

ಗೋಕಾಕ.04: ಗ್ರಾಮಗಳು ವಿಕಾಸ ಹೊಂದಬೇಕಾದರೇ ಗ್ರಾಮಸ್ಥರ ಸಹಕಾರ ಹಾಗೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಅತ್ಯ ಅಗತ್ಯ ಎಂದು ಕೌಜಲಗಿ ಜಿಪಂ ಸದಸ್ಯ ಪರಮೇಶ್ವರ ಹೊಸಮನಿ ಹೇಳಿದರು. ಶುಕ್ರವಾರದಂದು ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮೆಟಗುಡ್ಡ ತೋಟ) ನೂತನ ಶಾಲಾ ಅಡುಗೆ ಕೋಣೆಯ ಗುದ್ದಲಿ ಪೂಜೆಯನ್ನು ನೆರೆವೇರಿಸಿ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ಶುಚಿ ರುಚಿಯಾದ ಆಹಾರವನ್ನು ನೀಡಬೇಕು   ಎಂದು ತಿಳಿಸಿದರು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ...

ಕಬ್ಬು ಬೆಳೆಗಾರರಿಂದ 7 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಮುನವಳ್ಳಿ (ತಾ.ಸವದತ್ತಿ) ರಾಜ್ಯದಲ್ಲಿ  ಎಸ್.ಎ.ಪಿ. ಕಾಯ್ದೆ ಮತ್ತು ಕಬ್ಬಿನ ದರ ನಿಗದಿಗಾಗಿ ಶಾಸನಬದ್ಧ ಎಸ್.ಎ.ಪಿ. ಕಾಯ್ದೆ ಜಾರಿಗೆ ತರಲು ಒತ್ತಾಯಿಸಿ ಸ್ಥಳೀಯ ಶ್ರೀ ಕುಮಾರೇಶ್ವರ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ಹಲವು ವರುಷಗಳಿಂದ ಹೋರಾಟ ನಡೆಸುತ್ತಿದ್ದರು ಸರಕಾರ ಕಾಯ್ದೆ ತರಲು ವಿಳಂಬ ನೀತಿ ಅನುಸುರಿಸುತ್ತಿದ್ದಾರೆ ಇದರಿಂದ ಪ್ರತಿವರ್ಷವೂ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗಾಗಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಕಳೆದ ಮೂರು ವರ್ಷಗಳ ಹಿಂದೆ ಎಸ್.ಎ.ಪಿ. ಕಾಯ್ದೆ ಜಾರಿಗಾಗಿ ಸರಕಾರ ಶ್ರೀ ಎಸ್. ಎ. ಪಾಟೀಲ...

ಪ್ರತಿಯೊಬ್ಬರು ದೇವರ ಸೇವೆ ಮಾಡಬೇಕು : ಗುರುಸಿದ್ದ ಮಹಾಸ್ವಾಮಿಗಳು

  ಕೋಹಳ್ಳಿ 25: ಯಾವುದೇ ಅಪೇಕ್ಷೆ ಇಲ್ಲದೇ ಪ್ರತಿಯೊಬ್ಬರು ದೇವರ ಸೇವೆ ಮಾಡಬೇಕು. ಭಕ್ತರು ದೇವಸ್ಥಾನಗಳಿಗೆ ಪಾದಯಾತ್ರೆಯ ಮೂಲಕ ನಿರಂತರವಾಗಿ ಹೋಗುವುದರಿಂದ ತಮ್ಮ ಕಷ್ಟಗಳು ನಿವಾರಣೆಯಾಗಲಿವೆ ಎಂದು ಬೆಂಡವಾಡದ ರೇವಣಸಿದ್ದೇಶ್ವರ ವಿರಕ್ತಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಅವರು ಸುಕ್ಷೇತ್ರ ಗುಡ್ಡಾಪೂರದಲ್ಲಿ ನಡೆದ ಘಟಪ್ರಭಾದ ದಾನಮ್ಮದೇವಿ ಪಾದಯಾತ್ರಿಕರ 25 ನೇ ವರ್ಷದ ಬೆಳ್ಳಿಹಬ್ಬದ ನಿಮಿತ್ಯ ಮುತ್ತೈದೇಯರ ಉಡಿ ತುಂಬುವುದು ಮತ್ತು ಕುಮಾರಸಿರಿ ಸೇವಾರತ್ನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಘಟಪ್ರಭಾದ ಗುಡ್ಡಾಪೂರ ದಾನಮ್ಮದೇವಿ ಭಕ್ತರು ಸತತ 25 ವರ್ಷಗಳಿಂದ ದಾನಮ್ಮದೇವಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ಹೋಗುತ್ತಿರುವುದು,...

ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವು ಖಚಿತ: ಹೆಬ್ಬಾಳಕರ

ಬೆಳಗಾವಿ 15 : ಮೇ 5 ರಂದು ನಡೆಲಿರುವ ವಿಧಾನ ಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ ಕ್ಷೇತ್ರದ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅಪಾರ ಕಾರ್ಯಕರ್ತರ ಬೆಂಬಲದೊಂದಿಗೆ ನಾಮಪತ್ರ ಸಲಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಂತರ ಕನ್ನಡಮ್ಮದೊಂದಿಗೆ ಮಾತನಾಡಿದ ಬಿಜೆಪಿಯ ಅಭ್ಯರ್ಥಿ ಸಂಜಯ ಪಾಟೀಲ ಕಳೆದ  ಅವಧಿಯಲ್ಲಿ ನಮ್ಮ ಸರಕಾರ ಜನಪರ ಯೋಜನೆಗಳನ್ನು ರೂಪಿಸಿ ಕೆಳಮಟ್ಟದ...

ಪ್ರಪಂಚದ ಜಂಜಾಟದಲ್ಲಿ

ಕನ್ನಡಮ್ಮ ಸುದ್ದಿ-ಅಥಣಿ: ದಿನನಿತ್ಯದ ಪ್ರಪಂಚದ ಜಂಜಾಟದಲ್ಲಿ ಶಾಂತಿ, ಸಮಾಧಾನ ದೊರೇಯಬೇಕಾದರೆ ಬದುಕಿನಲ್ಲಿ ಭಗವಂತನ ಧ್ಯಾನ ನೆಮ್ಮದಿ, ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂದು ಕೌಲಗುಡ್ಡ ಹಣಮಾಪೂರ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.

ನಾಳೆ ಕೃತಿ ಬಿಡುಗಡೆ

ಬೆಳಗಾವಿ : 23 ಶ್ರೀಮತಿ ಸುನಂದಾ ಎಮ್ಮಿಯವರು ಬರೆದ ನಾಲ್ಕು ಕೃತಿಗಳನ್ನು ಮಾನ್ಯ ಮಾಜಿ ಸಚಿವೆ ಹಾಗೂ ಸಾಹಿತಿ ಶ್ರೀಮತಿ ಬಿ.ಟಿ.ಲಲಿತಾ ನಾಯಕರವರು ದಿನಾಂಕ 25 ರಂದು ಮುಂಜಾನೆ 10.30 ಗಂಟೆಗೆ ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ. ಸಾಹಿತಿಗಳು ಖ್ಯಾತ ಚಿಂತಕರು ಆದ ಡಾ. ಪಂಚಾಕ್ಷರಿ ಹಿರೇಮಠರವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ, ಕವಿ ಡಾ. ಸರಜೂ ಕಾಟ್ಕರ್ರವರು ಅತಿಥಿಗಳಾಗಿ ಆಗಮಿಸಲಿದ್ದಾರೆ. `ನನ್ನ ಸಖೀಗೀತಳಿ ಲೇಖನ ಸಂಗ್ರಹ ಹಾಗೂ `ದಳಗಳುಳಿ ಚುಟುಕುಗಳ ಸಂಗ್ರಹ ಕೃತಿಗಳನ್ನು ಎಲ್.ಎಸ್.ಶಾಸ್ತ್ತ್ರಿಯವರು ಹಾಗೂ `ಗೋಡೆ ಮತ್ತು ನಾನುಳಿ ಕವನ ಸಂಕಲನ, `ಬಣ್ಣದ ಡಬ್ಬಳಿ ಈ ಮಕ್ಕಳ ಕವನ ಸಂಕಲವನ್ನು ಡಾ....

ವಿನಾಯಕ

ಚಿಕ್ಕೌಡಿಯ ರವಿವಾರ ಪೇಠದ ವಿನಾಯಕ.

ಭರತೇಶ ಹೋಮಿಯೋಪತಿಕ್ ವೈದಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಬೆಳ್ಳಿಹಬ್ಬದ ಕಾರ್ಯಕ್ರಮ

ಚಿಕ್ಕೌಡಿ: ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಹೋಮಿಯೋಪತಿಕ್ ವೈದಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಡಾ.ಅಣ್ಣಪ್ಪ ಮಾರುತಿ ಮಗದುಮ್ಮ ಅವರನ್ನು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಂಸ್ಥೆಯ ವತಿಂದ ಸತ್ಕರಿಸಲಾುತು. ಮೂಲತಃ ಚಿಕ್ಕೌಡಿ ತಾಲೂಕಿನ ಇಂಗಳಿ ಗ್ರಾಮದ ಡಾ.ಅಣ್ಣಪ್ಪ ಮಗದುಮ್ಮ ಅವರು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅನುಗುಣವಾಗಿ ಈಗಾಗಲೇ ರಾಷ್ಟ್ತ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರಿಂದ ಅವರನ್ನು ಸತ್ಕರಿಸಿದರು, ಬೆಳಗಾವಿಯ ರಾಮಕೃಷ್ಣ ಆಶ್ರಮದ ಶ್ರೀ ಯುಕ್ತೆಶಾನಂದ ಸ್ವಾಮೀಜಿ, ಬೆಂಗಳೂರಿನ ರಾಜೀವ ಗಾಂಧಿ...

ಚಿಕ್ಕೌಡಿ, ನಿಪ್ಪಾಣಿ, ಸದಲಗಾದಲ್ಲಿ ಚುನಾವಣೆಯ ಚುರುಕು

ಭರಮಗೌಡಾ ಪಾಟೀಲ ಚಿಕ್ಕೌಡಿ 17: ಅಧಿಸೂಚನೆ ಜಾರಿ, ಕುತೂಹಲ ಅರಳಿಸಿದ ಚುನಾವಣೆ. ಪುರಸಭೆ ಚುನಾವಣೆ ಹಾಲಿ ಮಾಜಿಗಳ ಪ್ರತಿಷ್ಟೆಯ ಕಣ, ರಂಗು ಏರುತ್ತಿರುವ ಚುನಾವಣೆಯ ಗುಂಗು. ಇದು ಚಿಕ್ಕೌಡಿ, ನಿಪ್ಪಾಣಿ, ಸದಲಗಾ ಪಟ್ಟಣಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳು. ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವಾರ್ಡ ಮೀಸಲಾತಿ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿ, ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ನಾಮ ಪತ್ರಗಳನ್ನು ಸ್ವೀಕರಿಸಲು ಪ್ರಾರಂಬಿಸಿದ್ದಾರೆ. ಇದು ನಿಪ್ಪಾಣಿ ನಗರಸಭೆ, ಚಿಕ್ಕೌಡಿ ಪುರಸಭೆ ಮತ್ತು ಸದಲಗಾ ಪಟ್ಟಣ ಪಂಚಾಯತನ ಹಾಲಿ ಸದಸ್ಯರು ಮತ್ತೆ ಚುನಾವಣೆಗೆ ಸಿದ್ದರಾಗಲೂ ತಯಾರಿ...

ಗೋಡೆ ಕುಸಿತ : ಬಾಲಕನ ಸಾವು

ಚಿಕ್ಕೌಡಿ ,19-ತಾಲೂಕಿನ ವಡ್ರಾಳ ಗ್ರಾಮದ ಮನೆಯ ಗೋಡೆಯೊಂದು ದಿ.16 ಶುಕ್ರವಾರ ಬೆಳಗಿನ ಜಾವ ಕುಸಿದ ಪರಿಣಾಮ 10 ವರ್ಷದ ಬಾಲಕ ಮೃತಪಟ್ಟು ಹೆತ್ತವರು ಸೇರಿದಂತೆ ಇಬ್ಬರು ಮಕ್ಕಳು ಈ ದುರಂತದಿಂದ ಪಾರಾದ ಘಟನೆ ಸಂಭವಿಸಿದೆ. ಮೃತಪಟ್ಟ ಬಾಲಕನನ್ನು ಮಹಾಂತೇಶ ಅಲ್ಲಪ್ಪಾ ಪಾಟೀಲ (10) ಎಂದು ಗುರುತಿಸಲಾಗಿದೆ. ಮನೆ ಗೋಡೆ ಬಾಲಕನ ಮೇಲೆ ಕುಸಿದ ಪರಿಣಾಮ ಉಸಿರುಗಟ್ಟಿ ವಿಪರೀತ ಪೆಟ್ಟು ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಮಯ ಪ್ರಜ್ಞೆ ಮೆರೆದ ತಾಯಿ ರೇಣುಕಾ ತಕ್ಷಣ ತನ್ನ 12 ವರ್ಷದ ಪುತ್ರ ಸಾಯಿನಾಥ ಹಾಗೂ 6 ವರ್ಷದ ಪುತ್ರಿ...
loading...