ಬೆಳಗಾವಿ

Belgaum city and district news

ಆಧಾರ ಕೇಂದ್ರದಲ್ಲಿ ದಟ್ಟನೆ

  ಬೆಳಗಾವಿ, ಸೆ.24; ರಾಷ್ಟ್ತ್ರೀಯ ಗುರುತಿನ ಪತ್ರ ಆಧಾರ ಕಾರ್ಡ ಪಡೆಯಲು ಬೆಳಗಾವಿಯ ಎಲ್ಲ ಕೇಂದ್ರಗಳಲ್ಲಿಯೂ ದಿನನಿತ್ಯ ಜನದಟ್ಟನೆ ಹೆಚ್ಚಾಗುತ್ತಿದೆ. ಕೆಲ ಆಧಾರ ಕೇಂದ್ರಗಳಲ್ಲಿ ವೇಗವಾಗಿ ಕಾರ್ಯ ನಡೆಯುತ್ತಿಲ್ಲ ಎನ್ನುವ ಅಸಮಾಧಾನ ಜನತೆಯದ್ದು, ಇಡಿ ದಿನ ಆಧಾರ ಕಾರ್ಡ್ಗಾಗಿ ಪರಿತಪಿಸುವ ಸಮಸ್ಯೆ ಹೆಚ್ಚುತ್ತಲೆ ಸಾಗಿದೆ. ವಾರ್ಡ್ವಾರು ಆಧಾರ ಕೇಂದ್ರಗಳನ್ನು ಆರಂಭಿಸಬೇಕೆನ್ನುವ ಆಗ್ರಹ ಜನತೆಯಿಂದ ಕೇಳಿ ಬರುತ್ತಿದೆ. ಅಲ್ಲದೆ, ಬಹಳಷ್ಟು ಜನರಿಗೆ ಆಧಾರದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಕಾರಣ ಕೇಂದ್ರಕ್ಕೆ ಹೋಗಿ ವಾಪಸ್ಸಾಗುವ ಜನರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ...

ನಾಳೆಯಿಂದ ಮಿಲಟರಿ ಶಾಲಾ ಪೆಂಟ್ಯಾಂಗುಲರ್ ಸಮ್ಮೇಳನ

ಬೆಳಗಾವಿ: ಸೆಪ್ಟೆಂಬರ್:24: ರಾಷ್ಟ್ತ್ರೀಯ ಮಿಲಟರಿ ಶಾಲೆ ಬೆಳಗಾವಿ ಇವರ ವತಿಯಿಂದ ವಿವಿಧ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೌತ್ಸಾಹ ನೀಡುವ 17ನೇ ಅಂತರ್ ಮಿಲಟರಿ ಶಾಲಾ ಪೆಂಟ್ಯಾಂಗುಲರ್ ಸಮ್ಮೇಳನವನ್ನು ಇದೇ ಸೆಪ್ಟೆಂಬರ್ 26 ರಿಂದ 29 ರವರೆಗೆ ನಗರದ ಮಿಲಿಟರಿ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ದಾಸ್ ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರತಿ ವರ್ಷ ವಿವಿಧ ಕ್ರೀಡಾಕೂಟಗಳನ್ನು ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೌತ್ಸಾಹಿಸುವ ಈ ಪೆಂಟ್ಯಾಂಗುಲರ್ ಸಮ್ಮೇಳನದಲ್ಲಿ ರಾಷ್ಟ್ತ್ರದ 5 ಮಿಲಿಟರಿ ಶಾಲೆಯ 150 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಿಮಾಚಲ್...

ಇಂದು ಬೆಳಗಾವಿಯಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ

  ಬೆಳಗಾವಿ: ಸೆಪ್ಟೆಂಬರ್:24; ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ರವಿವಾರ ಸೆಪ್ಟೆಂಬರ್ 25 ರಂದು ಸಂಜೆ 6-30 ಕ್ಕೆ ನಡೆಯಲಿರುವ ಆಕಾಶವಾಣಿ ಸಂಗೀತ ಸಮ್ಮೇಳನಕ್ಕೆ ಸಂಪೂರ್ಣ ಸಿದ್ಧತೆಗಳು ಪೂರ್ಣಗೊಂಡಿವೆ. 18 ವರ್ಷಗಳ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಪರೂಪದ ಸಂಗೀತ ಸಮ್ಮೇಳನ ನಡೆಯಲಿರುವ ಕುಮಾರ ಗಂಧರ್ವ ರಂಗಮಂದಿರದಲ್ಲಿ ಎಲ್ಲ ತಾಂತ್ರಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಸೆಪ್ಟೆಂಬರ್ 25 ರಂದು ದೇಶದ 20 ನಗರಗಳಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಬೆಳಗಾವಿ ಸೇರಿರುವುದು ಜಿಲ್ಲೆಯ ಹಾಗೂ ಈ ಭಾಗದ ಸಂಗೀತ ಪ್ರೇಮಿಗಳನ್ನು ಸಂತೋಷಗೊಳಿಸಿದೆ. ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಂಗೀತ ಸಮ್ಮೇಳನದಲ್ಲಿ...

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

  (ಹುಕ್ಕೇರಿ ಕಾರ್ಯಾಲಯದಿಂದ) ಹುಕ್ಕೇರಿ 24 : ದೇಶದ 5 ವಿದ್ಯುತ್ ಸರಬರಾಜು ಸಹಕಾರಿ ಸಂಘಗಳಲ್ಲಿ ಒಂದಾದ ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸನ್ 2010-11 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಇಂದು ಸಂಘದ ಆವರಣದಲ್ಲಿ ನಡೆಯಿತು. ಸಂಘದ ಸದಸ್ಯರಾದ ಉಮೇಶ ಕತ್ತಿಯವರು ಮಾತನಾಡಿ ಸಂಘ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು ಸನ್ 2003 ರಿಂದ 2008 ರ ವರೆಗೆ 39 ಕೋಟಿ 80 ಲಕ್ಷ ರೈತರ ಪಂಪ್ಸೆಟಿನ್ ಬಿಲ್ಲು ಬಾಕಿ ಇದ್ದು ನೋಟಿಸು ನೀಡಿದರೂ ಯಾರೂ ಬಿಲ್ಲುಗಳನ್ನು ತುಂಬಿಲ್ಲಾ ಹಾಗೂ...

ಶೇಖ ಸ್ಕೂಲ್ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಬೆಳಗವಿ, ಸೆ.23: ನೆಹರೂ ನಗರದ ಶೇಖ ಸೇಂಟ್ರಲ್ ಇಂಗ್ಲೀಷ ಸ್ಕೂಲ್ ಮತ್ತು ಶೇಖ ಇಂಗ್ಲೀಷ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತಿಚೇಗೆ ಸರ್ದಾರ್ಸ್ ಮೈದಾನದಲಿ ನಡೆದ ಕ್ಲಸ್ಟರ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೋಕೋ, ಕ್ರಿಕೆಟ್ನಲ್ಲಿ ವಿಜಯ ಸಾಧಿಸಿದ ವಿದ್ಯಾರ್ಥಿಗಳು ಜನರಲ್ ಚಾಂಪಿಯನ್ ಸಿಫ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ ವಿವಿಧ ಕ್ರೀಡೆಗಳಲ್ಲಿ 15 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕ ಪಡೆದು ಕ್ರೀಡಾ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸಾಧನೆಗೆ ಶಾಲೆಯ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ­­

ಮೈಸೂರ ದಸರಾ ಉತ್ಸವಕ್ಕೆ ಉದಗಟ್ಟಿ ಭಜನಾ ತಂಡ ಆಯ್ಕೆ

ಘಟಪ್ರಭಾ, ಸೆ.23: ವಿಶ್ವ ವಿಖ್ಯಾತ ಮೈಸೂರ ದಸರಾ ಉತ್ಸವದಲ್ಲಿ ಭಜನಾ ಕಲಾ ಪ್ರದರ್ಶನ ನೀಡಲು ಸಮೀಪದ ಉದಗಟ್ಟಿ ಗ್ರಾಮದ ಶ್ರೀ ಸಿದ್ದಾರೂಢ ಭಜನಾ ಕಲಾ ಸಂಘ ಆಯ್ಕೆಯಾಗಿದೆ. ಇತ್ತೀಚಿಗೆ ಕನ್ನಡ ಮತ್ತು ಸಂಸ್ಕ್ತ್ರತಿ ಇಲಾಖೆ ಬೆಳಗಾವಿಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಈ ಕಲಾ ತಂಡ ಆಯ್ಕೆಗೊಂಡಿದೆ. ಭಜನಾ ತಂಡದಲ್ಲಿ ಕಲಾವಿದರಾದ ಕಲ್ಲಪ್ಪ ಹಿಪ್ಪರಗಿ, ನಾಗಪ್ಪ ನಾವಿ, ದುಂಡಪ್ಪ ಗುಡದಾರ, ಅಶೋಕ ನಾವಿ, ಉದ್ದಪ್ಪ ಗುಡದಾರ, ಬಸಪ್ಪ ನಾವಿ, ಈರಪ್ಪ ಹರಿಜನ ಹಾಗೂ ಭೀಮಪ್ಪ ಹುಲ್ಲೇನ್ನವರ ತಬಲಾಸಾಥ, ಅಣ್ಣಪ್ಪ ಹುಲ್ಲೇನ್ನವರ ಹಾರ್ಮೌನಿಯಂ ವಾದ್ಯ ಸಹಕಾರ...

ಸವದತ್ತಿ ಶ್ರೀ. ಯಲ್ಲಮ್ಮಾದೇವಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ: ಸೆಪ್ಟೆಂಬರ್:23: ಸವದತ್ತಿಯ ಶ್ರೀ. ಯಲ್ಲಮ್ಮಾದೇವಿ (ದಸರಾ) ಜಾತ್ರೆಯು ಸೆಪ್ಟೆಂಬರ್ 26 ರಿಂದ ಅಕ್ಟೌಬರ್ 8 ರವರೆಗೆ ಜರುಗಲಿದ್ದು, ಈ ಜಾತ್ರೆಯ ಮುಖ್ಯ ದಿನವು ಸೆಪ್ಟಂಬರ್ 28, ಅಕ್ಟೌಬರ್ 1, 5, 6 ರಂದು ಇರುತ್ತದೆ. ಈ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಬಸ್ಗಳನ್ನು ಬೆಳಗಾವಿಯ ಕೇಂದ್ರ ಬಸ್ ನಿಲ್ಲಾಣ, ನಗರ ಬಸ್ ನಿಲ್ದಾಣ ಹಾಗೂ ಯಲ್ಲಮ್ಮಾಗುಡ್ಡದಿಂದ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ...

ಗುತ್ತಿಗೆ ಆಧಾರದ ಕೆಲಸ: ಮನವಿ

  ಬೆಳಗಾವಿ, ಸೆ.23: ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆ ಆಧಾರದ ಕೆಲಸಗಳನ್ನು ಕೊಡುವುದಾಗಬೇಕೆಂದು ಪ್ರಜಾವಿಮೋಚನಾ ಚಳುವಳಿಯ ವಿಭಾಗೀಯ ಅಧ್ಯಕ್ಷ ದೀಲಿಪಕುಮಾರ ಘಸ್ತೆ ಅವರು ಧಾರವಾಡದ ಪಂಚಾಯತ್ ರಾಜ್ ಇಂಜನೀಯರಿಂದ ವೃತ್ತದ ಅಧೀಕ್ಷಕ ಅಭಿಯಂತರರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು. ಶೋಷಿತ ಸಮುದಾಯಗಳ ಉನ್ನತಿಗಾಗಿ ರಾಜೀರಹಿತ ಚಳುವಳಿ ಮಾಡಿಕೊಂಡು ಬಂದಿರುವ ಪ್ರಜಾವಿಮೋಚಾನಾ ಚಳುವಳಿ ಸಂಘಟನೆ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿ

ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ಮನವಿ ಚಿಕ್ಕೌಡಿ, ಸೆ.23: ಹದಗೆಟ್ಟು ಹೋಗಿರುವ ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭ ಮಾಡುವಂತೆ ಒತ್ತಾಯಿಸಿ ನ್ಯಾಯವಾದಿಗಳು ಮತ್ತು ಸಾರ್ವಜನಿಕರು ಇಂದು ಉಪವಿಭಾಗಾಧಿಕಾರಿ ಪ್ರೀಯಂಕಾ ಮೇರಿ ಪ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದರು. ದಿನನಿತ್ಯ ನೂರಾರು ವಾಹನ ಓಡಾಡುವ ಮಹಾಲಿಂಗಪೂರ-ನಿಪ್ಪಾಣಿ ರಾಜ್ಯ ಹೆದ್ದಾರಿಯಾಗಿ ಸುಮಾರು ವರ್ಷ ಕಳೆದರೂ ಸಹ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಹಣ ಮಂಜೂರಾದರು ಕೂಡಾ ಈ ರಾಜ್ಯ ಹೆದ್ದಾರಿಯ ಕಾಮಗಾರಿಯು ಇನ್ನೂ ಪ್ರಾರಂಭವಾಗಿಲ್ಲ. ರಿಪೇರಿ ಸಹ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ತಗ್ಗು-ಗುಂಡಿಗಳೇ ಎದ್ದು ಕಾಣುತ್ತವೆ. ಸಾಮಾನ್ಯ...

ಒಳನಾಡು ಮೀನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬೆಳಗಾವಿ: ಸೆಪ್ಟೆಂಬರ್:23: ಬಿ.ಆರ್. ಪ್ರ್ರಾಜೆಕ್ಟ್ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳ ಒಳನಾಡು ಮೀನುಗಾರಿಕೆ ತರಬೇತಿ ನೀಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಳನಾಡು ಮೀನುಗಾರಿಕೆ ತರಬೇತಿಯು ಬರುವ ನವೆಂಬರ್ 2 ರಿಂದ ಪ್ರಾರಂಭವಾಗಲಿದ್ದು, ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. (ಉತ್ತೀರ್ಣ ಹಾಗೂ ಅನುತ್ತೀರ್ಣ) ಓದಿರಬೇಕು ಹಾಗೂ ವಯೋಮಿತಿ 18 ರಿಂದ 40 ವರ್ಷದೊಳಗೆ ಇರಬೇಕು. ಬೀದರ, ಗುಲಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪೂರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಹಾವೇರಿ, ಶಿವಮೊಗ್ಗ. ಚಿಕ್ಕಮಗಳೂರು ಹಾಗೂ ಬಾಗಲಕೋಟೆಯ ಅಭ್ಯರ್ಥಿಗಳು...
loading...