ಬೆಳಗಾವಿ

Belgaum city and district news

ದಿ. 26 ರಂದು ನಗರದಲ್ಲಿ ಕಸಾಪ: ನಾಡಹಬ್ಬ ಆಚರಣೆ ಸಮಿತಿ ಸಭೆ

  ಬೆಳಗಾವಿ, ಸೆ.,20: ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ನಾಡಹಬ್ಬ ಆಚರಣೆ ಮಾಡುವ ನಿಮಿತ್ಯ ಪೂರ್ವಭಾವಿ ಸಭೆಯನ್ನು ರವಿವಾರ ದಿ. 26-09-2011 ರಂದು ಮಧ್ಯಾಹ್ನ 3 ಗಂಟೆಗೆ ಶೆಟ್ಟಿಗಲ್ಲಿರುವ ` ಹಸಿರು ಕ್ರಾಂತಿಳಿ ಕನ್ನಡ ದಿನಪತ್ರಿಗೆಯ ಕಾರ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಕಲ್ಯಾಣರಾವ ಮುಚಳಂಬಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಕುರಿತು ನಡೆಯುವ ಈ ಪೂರ್ವಭಾವಿ ಸಭೆಗೆ ಪದಾಧಿಕಾರಿಗಳು ಹಾಗೂ ಆಸಕ್ತರು ಆಗಮಿಸಲು ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ತಿಳಿಸಿದ್ದಾರೆ.

ಗೌಂಡಿ-ಬಾರಬೆಂಡರಗಳಿಗೆ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ

  ಮೂಡಲಗಿ, 23-ಮನೆ ನಿರ್ಮಿಸುವ ಗೌಂಡಿ-ಬಾರಬೆಂಡರಗಳು ತಮ್ಮ ಕಾಯಕದ ಜೊತೆ ಶರೀರ ರಕ್ಷಿಸಿಕೊಂಡರೆ ನಿಮ್ಮ ಜೀವನ ಉಜ್ವಲವಾಗುವುದು. ಪ್ರತಿನಿತ್ಯ ಸರಕಾರಿ ನೌಕರರಕ್ಕಿಂತ ಹೆಚ್ಚು ಸಂಪಾದಿಸುವ ನೀವು ಸಂಪಾದನೆಯ ಜೊತೆ ಉಳಿತಾಯವು ಮಾಡಿ ಮುಂದಿನ ನಿಮ್ಮ ಕುಟುಂಬಕ್ಕೆ ಆಸರೆ ಯಾಗಬೇಕೆಂದು ಮೂಡಲಗಿಯ ವೃತ್ತ ನೀರಿಕ್ಷಕರಾದ ಎಸ್.ಎಮ್.ಓಲೇಕಾರ ಹೇಳಿದರು. ಅವರು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟಾಟಾ ಟಿಸ್ಕಾನ್, ಟಿ.ಎಮ್.ಟಿ ಟಾಟಾ ಸ್ಟೀಲ್ರವರ ಗೌಂಡಿ-ಬಾರಬೆಂಡರಗಳಿಗೆ ಏರ್ಪಡಿಸಿದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪೌಷ್ಠಿಕತೆ ಆಹಾರದ ಕೊರತೆಯಿಂದ ದುಡಿಯುವ ಗೌಂಡಿಗಳು ಮತ್ತು ಕಟ್ಟಡ ಕೆಲಸಗಾರರು ಬಳಲುತ್ತಿದ್ದಾರೆ. ಕೆಲಸಗಾರರು ಹೆಚ್ಚು ಪೌಷ್ಠಿಕತೆ...

ಕಾರ್ಯನಿರತ ಆಯುಷ ವೈದ್ಯರ ಸಭೆ

  ಹುಕ್ಕೇರಿ 23 : ಆಯುಷ ಫೇಡರೇಶನ್ ಆಫ್ ಇಂಡಿಯಾ ಹುಕ್ಕೇರಿ ತಾಲೂಕಾ ಘಟಕದ ಸಭೆ ಇಂದು ಸಂಜೆ ಶುಭಂ ಆಸ್ಪತ್ರೆಯ ಸಭಾ ಗೃಹದಲ್ಲಿ ನಡೆಯಿತು. ರಾಜ್ಯ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡಂತೆ 60 ವೈದ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಜಿಲ್ಲಾಧ್ಯಕ್ಷ ಡಾ. ಅಭಿಷೇಕ ಪಾಟೀಲ, ರಾಜ್ಯ ಉಪಾಧ್ಯಕ್ಷ ಡಾ. ದೇಶಪಾಂಡೆ, ತಾಲೂಕಾ ಘಟಕದ ಅಧ್ಯಕ್ಷ ಡಾ. ಸದಾನಂದ ವಾಗೋಜಿ, ಉಪಾಧ್ಯಕ್ಷ ಡಾ. ಮೋಹನ ಮುನ್ನೌಳಿ ವೇದಿಕೆಯಲ್ಲಿದ್ದರು. ವೈದ್ಯ ಸಮೂಹದ ಮೇಲೆ ಸರಕಾರದ ಬ್ರಹ್ಮಾಸ್ತ್ತ್ರ, ಧೋರಣೆ ಹಾಗೂ ವಿವಿಧ ಆದೇಶಗಳಿಂದಾಗಿ ಗ್ರಾಮೀಣ ಭಾಗದಲ್ಲಿಯ ವೈದ್ಯರಿಗೆ...

ಡಾ. ಕಂಬಾರರಿಗೆ ಕೋರೆ ಅಭಿನಂದನೆ

  ಬೆಳಗಾವಿ, ಸೆ.23: ನಾಡಿನ ಧೀಮಂತ ಕವಿ, ನಾಟಕಕಾರ, ವಿಮರ್ಶಕ ಡಾ.ಚಂದ್ರಶೇಖರ ಕಂಬಾರರು ಪ್ರತಿಷ್ಠಿತ ಹಾಗೂ ಗೌರವಾನ್ವಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಸಂಸತ್ ಸದಸ್ಯ ಡಾ.ಪ್ರಭಾಕರ ಕೋರೆ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ವಲಯಕ್ಕೆ ಎಂಟನೆಯ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತಿರುವುದು ಅತ್ಯಂತ ಹರ್ಷ ತಂದಿದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವ ಅರ್ಹತೆ, ಯೋಗ್ಯತೆ ಡಾ.ಚಂದ್ರಶೇಖರ ಕಂಬಾರರದಾಗಿತ್ತು. ಅದು ಎಂದೋ ಬರಬೇಕಾಗಿತ್ತು. ಡಾ.ಕಂಬಾರರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿ ಬೆಳಗಾವಿಯ ನಾಗನೂರು ಸ್ವಾಮೀಜಿ ಕೃಪಾಛತ್ರದಲ್ಲಿದ್ದು (1956-60) ಲಿಂಗರಾಜ ಕಾಲೇಜಿನಲ್ಲಿ ಅಧ್ಯಯನ...

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ

ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅಡಿಗಲ್ಲು ಸಮಾರಂಭ   ಹಾವೇರಿಃ ಸೆಪ್ಟೆಂಬರ.23: ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾವೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯದ ಅಡಿಗಲ್ಲು ಸಮಾರಂಭ ಸೆ. 26ರಂದು ಬೆಳಿಗ್ಗೆ 10 ಘಂಟೆಗೆ ನೆರವೇರಲಿದೆ. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅವರು ಅಡಿಗಲ್ಲು ಸಮಾರಂಭ ನೆವೇರಿಸಲಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಚ್.ಬಿ. ವಾಲಿಕಾರ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಬ್ಯಾಡಗಿ ಶಾಸಕ ಸುರೇಶಗೌಡ್ರ ಪಾಟೀಲ, ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ...

ಬಾಸ್ಕೇಟಬಾಲ್ನಲ್ಲಿ ಶಾಂತಿಸದನ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

  ಬೆಳಗಾವಿ, ಸೆ.23: ಬೆಳಗಾಂವ ವಿಭಾಗಮಟ್ಟದ ಬಾಸ್ಕೇಟಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಧಾರವಾಡ ಶಾಂತಿಸದನ ಪೌಢಶಾಲೆಯ 17 ವರ್ಷವಯೋಮಿತಿಯ ಬಾಲಕಿಯರು ಹಾಗೂ 14 ವರ್ಷವಯೋಮಿತಿಯ ಬಾಲಕರು ಬೆಳಗಾಂವ ಜಿಲ್ಲೆಯ ಚಂದರಗಿಯಲ್ಲಿ ದಿನಾಂಕ 21, 22 ಸಪ್ಟಂಬರ್ ರಂದು ನಡೆದ ಬೆಳಗಾಂವ ವಿಬಾಗ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಯಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿದಿಸಿದ ಧಾರವಾಡ ಶಹರದ ಶಾಂತಿಸದನ ಪ್ರೌಢಶಾಲೆಯ 17 ವರ್ಷವಯೋಮಿತಿಯ ಬಾಲಕಿಯರು ಹಾಗೂ 14 ವರ್ಷವಯೋಮಿತಿಯ ಬಾಲಕರು ವಿಬಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಈ ಎಲ್ಲ ಬಾಲಕ ಬಾಲಕಿಯರನ್ನು ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಕೆ. ಆನಂದ...

ಎಸ್.ಡಿ.ವಿ.ಎಸ್. ಸಂಘದ ಬಿಎಸ್ಡಬ್ಲೂ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನಡೆವುದರ ಮೂಲಕ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು

ಸಂಕೇಶ್ವರ, ಸೆ.23: ಎಸ್.ಡಿ.ವಿ.ಎಸ್. ಸಂಘದ ಬಿಎಸ್ಡಬ್ಲೂ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನಡೆವುದರ ಮೂಲಕ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಲ್.ಬಡಿಗೇರ, ರವರು ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇಂದು ಉಪವಾಸ ಸತ್ಯಾಗ್ರಹ

  ಐಗಳಿ (ತಾ. ಅಥಣಿ) 23- ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆ ಆಗದೇ ಇರುವದರಿಂದ ಆಯಾ ತಾಲೂಕಿನಲ್ಲಿ ರೈತರ ಜಾನುವಾರುಗಳಿಗೆ ಮೇವು, ನೀರು ಸಿಗದೇ ಪರದಾಡುವ ಪರಿಸ್ಥಿತಿ ಬಂದಿದೆ. ಇದನ್ನು ಗಮನಿಸಿದ ರಾಜ್ಯ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಎ.ಆರ್. ಪಾಟೀಲ ಮಳೆ ಆಗದೇ ಇದ್ದ ತಾಲೂಕು ಅವುಗಳನ್ನು ಬರಗಾಲ ತಾಲೂಕೆಂದು ಘೋಷಿಸಿ ಅಲ್ಲಿ ಜಾನುವಾರುಗಳಿಗೆ ರೈತರ ಸ್ಥಳಗಳಲ್ಲಿ ಮೇವುಗಳನ್ನು ವಿತರಿಸುವ ಕಾರ್ಯ ಮಾಡಬೇಕೆಂದು ಅಲ್ಲದೇ ದುಡಿಯುವ ಕೈಗಳಿಗೆ ಕೆಲಸ ಒದಗಿಸಬೇಕೆಂದು ಈಗಾಗಲೇ ಮುಖ್ಯ ಮಂತ್ರಿಗಳಿಗೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಅರ್ಪಿಸಿದರೂ ಯಾವದೇ ಕ್ರಮ...

ಮುಚ್ಚಂಡಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ

ಬೆಳಗಾವಿ 23- ಬೆಳಗಾವಿ ತಾಲೂಕಿನ ಮುಚ್ಚಂಡಿಯ ಶ್ರೀ ಸಿದ್ದಾರೂಢ ಪ್ರೌಢ ಶಾಲೆಯಲ್ಲಿ ದಿ. 21 ರಂದು 2011-12ನೇ ಸಾಲಿನ ಸರಕಾರ ನೀಡಿದ ಉಚಿತ ಸೈಕಲ್ಗಳನ್ನು ನಾಯಕ ಸ್ಟುಡೆಂಟ್ ಫೆಡರೇಶನ್ದ ಪ್ರಧಾನ ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.  

ಓಝೇನ ಪದರಿನ ಸಂರಕ್ಷಣೆ ಅಗತ್ಯ

  ಚಿಕ್ಕೌಡಿ 23 ಮುಂದಿನ ಪೀಳಿಗೆ ಸುಖಮಯವಾಗಿ ಬದುಕ ಬೇಕಾದರೆ ಓಝೇನ ಪದರಿನ ಸಂರಕ್ಷಣೆ ಅಗತ್ಯವಿದೆ ಎಂದು ಬೆಳಕೂಡ ಸರಕಾರಿ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕ ರವೀಂದ್ರ ಶಿಂಧೆ ಹೇಳಿದರು. ಇಲ್ಲಿನ ಸಿಎಲ್ಇ ಸಂಸ್ಥೆಯ ಎಂಕೆ. ಕವಟಗಿಮಠ ಪ್ರೌಢ ಶಾಲೆಯ ವಿಜ್ಞಾನ ಸಂಘ ಮತ್ತು ಜಗದೀಶಚಂದ್ರ ಬೋಸ ಇಕೋ ಕ್ಲಬ್ಗಳ ಆಶ್ರಯದಲ್ಲಿ ಜರುಗಿದ ವಿಶ್ವ ಓಝೇನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು. ಮುಖ್ಯೌಪಾಧ್ಯಾಯ ಎ.ಎಸ್. ಉದೋಶಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗದೇ ದೇಶ ಕಟ್ಟುವ ಆದರ್ಶ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು...
loading...